World Peace Event

ಚಿತ್ರ: 13ಬೀದರ10 ಮತ್ತು 13ಬೀದರ10. ಶ್ರೀರೇವಣಾಸಿದ್ದೇಶ್ವರ ಬೆಟ್ಟದಲ್ಲಿ ಅನುಷ್ಟಾನಗೈದ ಮಾತೋಶ್ರೀ ಶಕುಂತಲಾತಾಯಿಯವರ ಆರನೇ ಅನುಷ್ಠಾನ ಮಂಗಲ ಕಾರ್ಯಕ್ರಮದಲ್ಲಿ ಖಟಕ ಚಿಂಚೋಳಿ ಹುಗ್ಗೆಳ್ಳಿಮಠದ ಪೂಜ್ಯಶ್ರೀ ಬಸವಲಿಂಗ ದೇವರು ಮಾತನಾಡಿದರು.

13ಬೀದರ1013bdr10
ತಪಸ್ಸಿನಿಂದ ಮನಸ್ಸಿಗೆ ನೆಮ್ಮದಿ
ಬೀದರ: ತಪಸ್ಸಿನಿಂದ ಮನಸ್ಸಿಗೆ ನೆಮ್ಮದಿ ಮತ್ತು ದೇಹಕ್ಕೆ ಉಲ್ಲಾಸ ಉಂಟಾಗುವುದು ಎಂದು ಖಟಕ ಚಿಂಚೋಳಿ ಹುಗ್ಗೆಳ್ಳಿ ಹಿರೇಮಠದ ಪೂಜ್ಯಶ್ರೀ ಬಸವಲಿಂಗ ದೇವರು ಪ್ರತಿಪಾದಿಸಿದರು.
ಶೇಖಾಪೂರ, ತಡಪಳ್ಳಿ, ಯರನಳ್ಳಿ ಗ್ರಾಮಗಳ ಮಧ್ಯದಲ್ಲಿರುವ ಶ್ರೀ ರೇವಣಾಸಿದ್ದೇಶ್ವರ ಬೆಟ್ಟದಲ್ಲಿ ಅನುಷ್ಠಾನಗೈದ ಮಾತೋಶ್ರೀ ಶಕುಂತಲಾ ತಾಯಿಯವರ ಆರನೇ ಅನುಷ್ಠಾನ ಮಂಗಲ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ತಪಸ್ಸಿನಿಂದ ಮನಸ್ಸಿಗೆ ನೆಮ್ಮದಿ ಸಿಗುವುದಲ್ಲದೇ ದೇಹಕ್ಕೆ ಯಾವುದೇ ಆಪತ್ತು ಬಂದರೂ ತಡೆದುಕೊಳ್ಳುವ ಶಕ್ತಿ ಉಂಟಾಗುತ್ತದೆ. ಇಂತಹ ಮನಸ್ಥತಿಯುಳ್ಳವರು ಮಾತ್ರ ತಪಸ್ಸಿಗೆ ಅರ್ಹರು ಎಂದು ಹೇಳಿದರು.
ಸಾನಿಧ್ಯವಹಿಸಿ ಮಾತನಾಡಿದ ವೀರಭದ್ರ ಶಿವಾಚಾರ್ಯರು, ದೈವಶಕ್ತಿ ಉಳ್ಳವರು ಮಾತ್ರ ತಪಸ್ಸು ಮತ್ತು ಅನುಷ್ಠಾನಕ್ಕೆ ಅರ್ಹರು, ಅನುಷ್ಠಾನ ಮತ್ತು ತಪಸ್ಸಿನಿಂದ ತಾವು ಪಡೆದುಕೊಂಡ ಅನುಭವ ಮತ್ತು ಅಂತ: ಶಕ್ತಿಯನ್ನು ಸರ್ವರಿಗೂ ಹಂಚುವ ಕಾರ್ಯ ಮಾಡುವುದೇ ಈ ಪೂಜ್ಯರ ಮಹದಾಸೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಮಾತೋಶ್ರೀ ಶಕುಂತಲಾತಾಯಿಯವರು ಅದ್ಭುತ ಶಕ್ತಿ ಪಡೆದಿದ್ದು, ಭಕ್ತರ ಉದ್ಧಾರಕ್ಕಾಗಿ ಅದರ ವಿನಿಯೋಗ ಮಾಡುವರು ಎಂದು ತಿಳಿಸಿದರು.
ಚಟ್ನಳ್ಳಿ ಗ್ರಾ.ಪಂ.ಅಧ್ಯಕ್ಷ ಘಾಳೆಪ್ಪಾ ಚಟ್ನಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶೇಖಾಪೂರ ಗ್ರಾ.ಪಂ.ಅಧ್ಯಕ್ಷೆ ಶಾಂತಾಬಾಯಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪೂಜ್ಯಶ್ರೀ ಚನ್ನಬಸವಾನಂದ ಸ್ವಾಮಿಗಳು ಡಾಕುಳಗಿ ಸೇರಿದಂತೆ ಶೇಖಾಪೂರ, ತಡಪಳ್ಳಿ, ಯರನಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಜನರು ಹಾಜರಿದ್ದರು.


 

Leave a Reply

Your email address will not be published. Required fields are marked *