World Janapada day

ರೈತರ ಆತ್ಮಹತ್ಯೆ ಕಡಿವಾಣಕ್ಕೆ

ಜಾನಪದ ಕಲೆಗೆ ಮಾರು ಹೋಗಿ: ಕೆ.ಎಂ.ಮೈತ್ರಿ

ಬೀದರ: ರಾಜ್ಯದಲ್ಲಿ ಇತ್ತಿಚೀಗೆ ರೈತರ ಆತ್ಮಹತ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ದಯನಿಯ ಬೆಳವಣಿಗೆಯಾಗಿದ್ದು, ಇವೆಲ್ಲ ಕಾರಣಗಳಿಗೆ ಇಂದು DSC_2418ದುಡಿಯುವ ಸಂಸ್ಕøತಿ ನಿಂತು ಹೋಗಿ, ಸೋಮಾರಿತನ ಪ್ರವರ್ತಿ ಹೆಚ್ಚಾಗುತ್ತಿರುವುದಕ್ಕೆ ಕಾರಣವಾಗುತ್ತಿದ್ದು, ಸಂಪ್ರದಾಯಿಕ ಜಾನಪದ ಕಲೆ ಹಾಗೂ ಸಂಸ್ಕøತಿಯಿಂದ ರೈತರಲ್ಲಿ ಮತ್ತೆ ಹುಮ್ಮಸ್ಸು ಜಾಸ್ತಿಯಾಗಿ, ಆತ್ಮಹತ್ಯೆ ತಡೆಗೆ ಸಹಕಾರಿಯಾಗಲಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ವಿಭಾಗದ ಮುಖ್ಯಸ್ಥ ಕೆ.ಎಂ ಮೈತ್ರಿ ಅಭಿಪ್ರಾಯಪಟ್ಟರು.

ನಗರದ ಚಿಟ್ಟಾ ರಸ್ತೆಯಲ್ಲಿರುವ ಮಹಾತ್ಮ ಬೊಮ್ಮಗೊಂಡೇಶ್ವರ ಶಿಕ್ಷಣ ಸಂಸ್ಥೆಯಡಿ ನಡೆಸಲಾಗುತ್ತಿರುವ ಕವಿರತ್ನ ಕಾಳಿದಾಸ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಕರ್ನಾಟಕ ಜಾನಪದ ಆಕಾಡೆಮಿ ಬೆಂಗಳುರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೀದರ, ಮಹಾತ್ಮ ಬೊಮ್ಮಗೊಂಡೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಕವಿರತ್ನ ಕಾಳಿದಾಸ ಮಹಾವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಾನಪದ ಎಂಬ ಪದದ ಮೂಲ ಪದ ‘ಫೋಕಲೋರ್’ ಎಂಬ ಪದವನ್ನು ಹುಟ್ಟು ಹಾಕಿದವನು ಒಬ್ಬ ಸಾಮಾನ್ಯ ಗುಮಾಸ್ತ ವಿಲಿಯಂ ಜಾನ್ ಥೋಮ್ಸ್, ಈತನು ಆಗಸ್ಟ್ 22, 1846ರಲ್ಲಿ ಫೋಕಲೋರ್‍ಗೆ ಸಂಭಂದಿಸಿದ ಒಂದು ಲೇಖನ ಬರೆದು, ತಾನೊಬ್ಬ ಸಣ್ಣ ವ್ಯಕ್ತಿಯಾಗಿ ಈ ದೊಡ್ಡ ಪದವನ್ನೊಳಗೊಂಡ ಲೇಖನ ಹೊರ ತಂದರೆ ಎಲ್ಲಿ ತನಗೆ ಅವಮಾನವಾಗುತ್ತದೆ ಎಂಬ ಕಾರಣಕ್ಕಾಗಿ ಅಲ್ಲಿಯ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರೊಬ್ಬರ ಹೆಸರಲ್ಲಿ ಪ್ರಸಾರ ಮಾಡಿದನು. ಅದು ವಿಶ್ವಮಾನ್ಯ ಪಡೆದರೂ ಸಹ ಇಂದಿಗೂ ವಿಶ್ವಸಂಸ್ಥೆಯು ಅದನ್ನು ವಿಶ್ವಮಾನ್ಯವಾಗಿ ಘೋಷಿಸದಿರುವುದು ಖೇದನಿಯ ಸಂಗತಿ ಆದರೂ ಕಳೆದ ಐದಾರು ವರ್ಷಗಳಿಂದ ವಿಶೇಷವಾಗಿ ನಮ್ಮ ರಾಜ್ಯದಲ್ಲಿ ವಿಶ್ವ ಜಾನಪದ ದಿನಾಚರಣೆ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಜಾನಪದ ಸಂಸ್ಕøತಿಗೆ ಇತಿಹಾಸ ತಜ್ಞರು, ವೈಜ್ಞಾನಿಕ ಮನೋವೃತ್ತಿ ಉಳ್ಳುವವರು, ಪುರಾತತ್ವ ಸಂಶೋಧಕರು ಹಾಗೂ ಮಾನವ ಶಾಸ್ತ್ರಜ್ಞರು ವಿರೋಧ ವ್ಯಕ್ತಿಪಡಿಸಿದ್ದರು. ಆದರೆ ಜಾನಪದವು ಚರಿತ್ತೆ ಮಾಡದ ಕಾರ್ಯ ಮಾಡಿ ತೋರಿಸುವ ಸಾಮಥ್ರ್ಯ ಹೊಂದಿದೆ ಎಂಬುದು ಪ್ರತಿಯೊಬ್ಬರು ಅರಿತುಕೊಳ್ಳಬೇಕೆಂದು ಕರೆ ನೀಡಿದರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಡಾ.ಜಗನ್ನಾಥ ಹೆಬ್ಬಾಳೆ ಅವರು ‘ವಿಶ್ವ ಜಾನಪದ ನುಡಿ, ಬಗ್ಗೆ ಮಾತನಾಡುತ್ತ, ಇಂದು ವೈಜ್ಞಾನಿಕತೆಗೆ ಜಾನಪದ ಕಲೆ, ಸಾಹಿತ್ಯ, ಸಂಸ್ಕøತಿಗಳು ಪೂರಕವಾಗಿರುವುದನ್ನು ಗ್ರಾಮೀಣ ಭಾಗದಲ್ಲಿ ಇಂದಿಗೂ  ಲಭ್ಯವಿರುವ ಜಾನಪದ ವೈದ್ಯರು, ಜಾನಪದ ಔಷಧಿಗಳು, ಜಡಿ ಬುಟಿಗಳು ಸಾಕ್ಷಿಯಾಗಿರುವುದು ಗಮನಾರ್ಹ ಸಂಗತಿ ಎಂದ ಅವರು, ಮಾನವ ಸಂಭಂದ ಗಟ್ಟಿಗೊಳಿಸುವ ತಾಯ್ತನ ಜಾನಪದದಲ್ಲಡಗಿದೆ ಅಲ್ಲದೆ, ಮಾನವಿಯ ಮೌಲ್ಯಗಳನ್ನು ಎತ್ತಿ ಕಟ್ಟುವ ಶಕ್ತಿ ಜಾನಪದ ಹೊಂದಿದೆ ಎಂಬುದು ಗ್ರಾಮೀಣ ಭಾಗದಲ್ಲಿ ಇಂದಿಗೂ ಪ್ರಚಲಿತವಿರುವ ಭುಲಾಯಿ ಪದ, ಸೋಬಾನ ಪದ, ಬೀಸುವ, ಕುಟ್ಟುವ ಪದಗಳು, ಕೋಲಾಟ, ಭಜನೆ, ಹಂತಿ, ಲಾವಣಿ, ಜಾನಪದ ನೃತ್ಯ ಇತ್ಯಾದಿಗಳಿಂದ ಕಂಡು ಕೊಳ್ಳಬಹುದಾಗಿದೆ ಎಂದು ಹೇಳಿದರು.

ಸಾಹಿತಿ ಡಾ.ರಾಜಶೇಖರ ಜಮದಂಡಿ ಮಾತನಾಡಿ, ಜಾನಪದ ಶ್ರೀಮಂತಗೊಳ್ಳಲು ಜಾತ್ರೆಗಳು ಹಾಗೂ ಅನೇಕ ಹಬ್ಬ, ಹರಿದಿನಗಳು ಪೂರಕವಾಗಿವೆ ಎಂದ ಅವರು, ಜಾನಪದ ಎಂಬುದು ನಿಂತ ನೀರಲ್ಲ, ಅದು ಹರಿಯುವ ಸಮುದ್ರದಂತೆ, ಅದಕ್ಕೆ ಆಳ, ಅಂತ್ಯ, ಯಾವುದು ಇಲ್ಲ. ಹುಟ್ಟು, ಸಾವುಗಳಿಂದ ಜಾನಪದ ದೂರವಿರುವ ಕಾರಣ, ಅದಕ್ಕೆ ಇಡೀ ಜಗತ್ತು ವಿಶ್ವಮಾನ್ಯ ಮಾಡಿದೆ ಎಂದರು.

ಬೊಮ್ಮಗೊಂಡೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಮೃತರಾವ ಚಿಮಕೊಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನಪದ ಸಾಹಿತ್ಯವು ಎಲ್ಲ ಸಾಹಿತ್ಯಕ್ಕೆ ಹಿಡಿದ ಕೈಗನ್ನಡಿಯಾಗಿದ್ದು, ಇದಕ್ಕೆ ಯಾವುದೆ ಲಿಖಿತ ಸಾಕ್ಷಾತ್ಕಾರಗಳಿಲ್ಲದಿದ್ದರೂ ಅದು ಎಲ್ಲ ಸಾಹಿತ್ಯಗಿಂತ ವೈವಿಧ್ಯಮಯವಾಗಿದೆ. ಆದ್ದರಿಂದಲೇ ಅದಕ್ಕೆ ತನ್ನದೆ ಆದ ವೈಶಿಷ್ಟತೆ ಹೊಂದಿದ್ದರಿಂದ ಮಾನವನಲ್ಲಿನ ಆಲಸ್ಯತನ, ಸೋಮಾರಿತನ ದೂರ ಮಾಡಿ, ಹುಮ್ಮಸ್ಸು ಮೂಡಿಸುವ ದಿವ್ಯ ಔಷಧಿಯಾಗಿ ಕೆಲಸ ಮಾಡುತ್ತದೆ. ಇಂತಹ ಚೈತನ್ಯಾತ್ಮಕ ಸಂಸ್ಕøತಿಗೆ ಗೌರವಿಸಲು ನಮ್ಮ ಗುರು ಹಿರಿಯರೊಂದಿಗೆ ಆದರದಿಂದ ನಡೆದುಕೊಳ್ಳುವಂತೆ ಕಿವಿ ಮಾತು ಹೇಳಿದರು.

ಜಾನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಅವರು ಅನೇಕ ಜಾನಪದ ಗೀತೆಗಳ ಮೂಲಕ ವಿದ್ಯಾರ್ಥಿಗಳ ಮನರಂಜಿಸಿದರು. ಹಿರಿಯ ಸಾಹಿತಿಗಳಾದ ದೇಶಾಂಶ ಹುಡಗಿ, ಚಂದ್ರಪ್ಪ ಹೆಬ್ಬಾಳಕರ್, ಎಂ.ಜಿ.ಗಂಗನಪಳ್ಳಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್ ಶಿಂಧೆ, ಸಂಸ್ಥೆಯ ಕಾರ್ಯದರ್ಶಿ ಗೋವರ್ಧನ ರಾಠೋಡ, ಹುಮನಾಬಾದ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಶರದ್ ನಾರಾಯಣಪೇಟಕರ್, ಸ್ಥಳಿಯ ಪ್ರೌಢಶಾಲೆಯ ಮುಖ್ಯ ಗುರು ಸಲಾವೊದ್ದಿನ್, ವೈಜಿನಾಥ ಬಿರಾದಾರ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ಔರಾದ್ ತಾಲೂಕಿನ ಜೋಜನಾ ಗ್ರಾಮದ ಭಾರತಬಾಯಿ ಹಾಗೂ ತಂಡದವರಿಂದ ಕೋಲಾಟ ಮತ್ತು ಶಿವಕುಮಾರ ಪಾಂಚಾಳ್ ಹಾಗೂ ಸಂಗಡಿಗರಿಂದ ಜಾನಪದ ಗೀತಗಾಯನ ಜರುಗಿತು.

ಆರಂಭದಲ್ಲಿ ಕಾಲೇಜಿನ ವಿದ್ಯಾರ್ಥಿನಿ ಅಂಬಿಕಾ ಪ್ರಾರ್ಥಿಸಿದರು. ಹಾಜರಾ ಬೇಗಂ ಸ್ವಾಗತ ಗೀತೆ ಹಾಡಿದರು. ಕಾಲೇಜಿನ ಪ್ರಾಚಾರ್ಯರಾದ ಡಾ.ಪ್ರಭುಗೌಡ ಸಿದ್ಧಾರೆಡ್ಡಿ ಸ್ವಾಗತ ಕೋರಿದರು. ಪ್ರಾಧ್ಯಾಪಕಿ ಲೀಲಾದೇವಿ ಪೂಜಾರ ನಿರೂಪಿಸಿದರೆ, ಒಂಕಾರ ಮಾಶೆಟ್ಟೆ ವಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಅನೇಕ ಸಾಹಿತಿಗಳು, ಕಲಾವಿದರು, ವಿದ್ವಾಂಸರು, ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Sanjevani : News Editor : Mr.Shivkumar Swamy

Leave a Reply

Your email address will not be published. Required fields are marked *