Vanabhojana in basvagiri

ಸಂಸ್ಕಾರದಿಂದ ಸಚ್ಚಾರಿತ್ರ್ಯೆ ನಿರ್ಮಾಣ: ಅಕ್ಕ ಅನ್ನಪೂರ್ಣ

Vana Bhojana 3ಬೀದರ: ಮಕ್ಕಳಲ್ಲಿ ಸಂಸ್ಕಾರ, ಸಂಸ್ಕøತಿ ಬೇರೂರಿದಲ್ಲಿ ಉತ್ತಮ ಚಾರಿತ್ರ್ಯೆ ನಿರ್ಮಾಣವಾಗಲು ಸಾಧ್ಯವಿದೆ ಎಂದು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಪೂಜ್ಯ ಅಕ್ಕ ಅನ್ನಪೂರ್ಣ ತಿಳಿಸಿದರು.
ಗುರುವಾರ ನಗರದ ಬಸವಗಿರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಹಾಗೂ ಮಕ್ಕಳ ರಕ್ಷಣಾ ಘಟಕಗಳ ಸಹಯೊಗದಲ್ಲಿ ಮಕ್ಕಳ ದಿನಾಚರಣೆ ಸಪ್ತಾಹದ 6ನೇ ದಿವಸದ ವನಭೋಜನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.
ಮಕ್ಕಳಲ್ಲಿ ಸತ್ಯ, ಪ್ರಾಮಾಣಿಕತೆ ಇರಬೇಕು, ಅಂದಾಗ ಅದು ಸಮಯ ಪ್ರಜ್ಞೆ ಹಾಗೂ ಆರ್ಥಿಕ ಉಳಿತಾಯಕ್ಕೆ ಕಾರಣವಾಗಬಲ್ಲದು. ಸತ್ಯ, ಅಹಿಂಸೆ, ಭ್ರಾತುತ್ವ, ಇವು ಮಕ್ಕಳ ಬದುಕಿನ ವೇಷ ಭೂಷಣವಾಗಬೇಕು. ಇಂದು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರ, ಪರಾವಲಂಬಿಯಾಗಿ ಹಗಲು ದರೊಡೆ ಮಾಡುತ್ತಿರುವ ಪರಿ, ಸಹೋದರತ್ವ ಮರೆತು ಹೆಣ್ಣು ಮಕ್ಕಳ ಮೇಲೆ ಎಸಗುತ್ತಿರುವ  ಅತ್ಯಾಚಾರ, ಅಸತ್ಯ ವಾತಾವರಣ ನಿರ್ಮಿಸಿ, ಪಶುವಿಗೆ ಸಮಾನರಾಗಿ ಬದುಕುವ ಶೈಲಿ ಇವೆಲ್ಲವು ಸಂಪೂರ್ಣ ನಿಲ್ಲಬೇಕೆಂದು ಅಕ್ಕ ಕರೆ ಕೊಟ್ಟರು.

ಪ್ರತಿಷ್ಟಾನದ ಕಾರ್ಯದರ್ಶಿ ಡಾ.ಗಂಗಾಂಬಿಕೆ ಪಾಟೀಲ ಮಾತನಾಡಿ, ತನ್ನ 6ನೇ ವಯಸ್ಸಿನಲ್ಲಿ ಜಾತಿಯತೆ ಧಿಕ್ಕರಿಸಿ, ತನ್ನ 8ನೇ ವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ತಂದು ಕೊಡಲು ತನ್ನ ಕುಟುಂಬವನ್ನೆ ತೊರೆದ ಮಹಾ ಮಾನವತಾವಾದಿ ಬಸವಣ್ಣನವರ ಜೀವನಶೈಲಿ ಮಕ್ಕಳ ಬದುಕಿನ ಉಸಿರಾಗಬೇಕು, ಉತ್ತಮ ಚಾರಿತ್ರ್ಯೆ ನಿರ್ಮಾಣವಾಗಿಸಲು ಪ್ರತಿ ದಿನ ಶರಣರ ವಚನ ಪಠಿಸಬೇಕು, ನಮ್ಮಲ್ಲಿ ಸೂವಿಚಾರ, ಸದಾಚಾರ, ಸದ್ಗತಿಗಳಂತಹ ಗುಣಗಳನ್ನು ಪ್ರೇರೆಪಿಸುವ ಬಲ ಮೆದುಳು ಬಲಗೊಳ್ಳಲು ಲಿಂಗಪೂಜೆ ಮಾಡಬೇಕು ಎಂದ ಅವರು, ಆಯುಷ್ಯ, ಆರೊಗ್ಯ ಹಾಗೂ ಪರಮಾತ್ಮನ ಪ್ರಾಪ್ತಿಗಾಗಿ ಲಿಂಗಪೂಜೆ ರಾಜಮಾರ್ಗವಾಗಿದೆ ಎಂದವರು ಹೇಳಿದರು.

ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯ ಶಿವಕುಮಾರ ಸ್ವಾಮಿ ಮಾತನಾಡಿ, ಮಕ್ಕಳಲ್ಲಿ ಚೈತನ್ಯ ವೃದ್ಧಿಗಾಗಿ ಉತ್ತಮ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆ ಅಗತ್ಯವಾಗಿದ್ದು, ಇಂತಹ ವನಭೋಜನಗಳು ನಮ್ಮಲ್ಲಿನ ದೌರ್ಬಲ್ಯ ಹಾಗೂ ದುರಹಂಕಾರ ದೂರ ಮಾಡಿ, ಸಹಕಾರ ಮನೋಭಾವ ಹಾಗೂ ಸಮಾನತೆ ಬೆಳೆಯಲು ಪ್ರೋತ್ಸಾಹಿಸುತ್ತದೆ ಎಂದರು. ಅಕಾಡೆಮಿ ಸದಸ್ಯ ಮಹೇಶ ಗೋರನಾಳಕರ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಬಾಲ ಮಂದಿರದ ಅಧಿಕ್ಷಕ ಶಿವಪ್ರಕಾಶ ಹಿರೇಮಠ, ಮಕ್ಕಳ ರಕ್ಷಣಾಧಿಕಾರಿ ಪ್ರಶಾಂತ ಬಿರಾದಾರ, ಗೃಹ ಪಾಲಕ ಸಂಗಪ್ಪ ಚನಶೆಟ್ಟಿ, ಆಪ್ತ ಸಮಾಲೋಚಕರಾದ ಸುಧಾಕರ ಹಾಗೂ ಕು.ಖಾಜಾಬಿ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಹಾಗೂ ಬಾಲ ಮಂದಿರದ ಪುಟಾಣಿಗಳು ಭಾಗವಹಿಸಿದರು.

Leave a Reply

Your email address will not be published. Required fields are marked *