Valmiki Jayanti

ಮಂಗಲಾ ಮಹಿಳಾ ಸಂಸ್ಥೆಯಲ್ಲಿ ವಾಲ್ಮಿಕಿ ಜಯಂತಿ

DSC02848ಬೀದರ: ನಗರದ ಶರಣ ನಗರದಲ್ಲಿರುವ ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅವರಣದಲ್ಲಿ ಮಂಗಳವಾರ ಮಹರ್ಷಿ ವಾಲ್ಮಿಕಿ ಜಯಂತಿ ನಿಮಿತ್ಯ ಬೀದರ್ ಅರಳು ಸಂಸ್ಥೆಯಿಂದ ಬೀದಿ ನಾಟಕ ಹಾಗೂ ಮಕ್ಕಳಿಂದ ಬಾಲ ಕಾರ್ಮಿಕ ಪದ್ದತಿ ನಿರ್ಮೂಲನ ಮಾಡುವ ಉದ್ದೇಶದಿಂದ ಕೋಲಾಟ ಪ್ರದರ್ಶನ ಹಮ್ಮಿಕೊಳ್ಳಲಾಯಿತು.
ಇದಕ್ಕೂ ಮುನ್ನ ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯ ಶಿವಕುಮಾರ ಸ್ವಾಮಿ ವಾಲ್ಮಿಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಮಹೇಶ ಗೋರನಾಳಕರ್, ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಮಂಗಲಾ ಮರಕಲೆ, ಅರಳು ಸಂಸ್ಥೆಯ ಸಿಬ್ಬಂದಿಗಳಾದ ಎಂ.ಎಸ್ ಸುನಿತಾ, ಚಂದ್ರಮ್ಮ ಚಿತ್ರದುರ್ಗ, ಉಮೇಶ, ವಾಣಿ ರೆಡ್ಡಿ, ರೋಜ್ ಮೇರಿ ಸೇರಿದಂತೆ ಕೋಲಾಟ ಪಟುಗಳು, ಸಂಸ್ಥೆಯ ಸಿಬ್ಬಂದಿ ಹಾಗೂ ಇತರರಿದ್ದರು.

Leave a Reply

Your email address will not be published. Required fields are marked *