Training for Success

ಯಶಶ್ವಿ ಬದುಕಿಗೆ ಸುಸಜ್ಜಿತ ತರಬೇತಿ ಅಗತ್ಯ

ಶಿವಕಾಂತಾ ಬಿರಾದಾರ

Traning innauguration newsಬೀದರ: ಪ್ರತಿಯೊಬ್ಬರ ಜೀವನ ಯಶಸ್ಸು ಕಾಣಲು ಸುಸಜ್ಜಿತ ತರಬೇತಿ ಅಗತ್ಯವಾಗಿದೆ ಎಂದು ಸಪ್ತಗಿರಿ ಪ್ರೌಢಶಾಲೆಯ ಸಹ ಶಿಕ್ಷಕಿ ಶಿವಕಾಂತಾ ಬಿರಾದಾರ ಅಭಿಪ್ರಾಯ ಪಟ್ಟಿದ್ದಾರೆ.
ಶನಿವಾರ ನಗರದ ಕೆ.ಇ.ಬಿ ಹನುಮಾನ ಮಂದಿರದ ಬಳಿ ಇರುವ ಮಂಗಲಾ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅವರಣದಲ್ಲಿ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾದ ಹೊಲಿಗೆ, ಕಂಪ್ಯುಟರ್ ಹಾಗೂ ಸಂಗೀತಗಳನ್ನೊಳಗೊಂಡ ತ್ರೈಮಾಸಿಕ ತರಬೇತಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇಂದು ಭಾರತವು ಇಡೀ ಜಗತ್ತಿನಲ್ಲಿ ಜನಸಂಖ್ಯೆಯಲ್ಲಿ ಪ್ರಥಮ ಸ್ಥಾನಕ್ಕೆ ತಲುಪಿರುವ ಹಿನ್ನಲೆಯಲ್ಲಿ ನಿರುದ್ಯೋಗ ಸಮಸ್ಯೆ ವಿಪರಿತವಾಗಿ, ಅಭಿವೃದ್ಧಿ ದೃಷ್ಟಿಯಿಂದ ಹಿನ್ನಡೆ ಅನುಭವಿಸುತ್ತಿದ್ದೇವೆ. ಈ ಸಮಸ್ಯೆ ನೀಗಿಸಲು ನುರಿತ ತರಬೇತಿದಾರರಿಂದ ತರಬೇತಿ ಪಡೆಯುವುದು ಅಗತ್ಯವಾಗಿದೆ ಎಂದರು.
12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಹಾಕಿ ಕೊಟ್ಟ ಕಾಯಕದ ಪರಿಕಲ್ಪನೆಯನ್ನು ಇಂದು ಯುವ ಜನತೆ ಅನುಸರಿಸಬೇಕಿದೆ. ಸ್ವಾಭಿಯಾನಿಯಾಗಿ ತನ್ನ ಕಾಲ ಮೇಲೆ ತಾನು ಬದುಕುವಂತಾಗಲು ಸ್ವಯಂ ಉದ್ಯೋಗಕ್ಕೆ ಅಣಿಯಾಗುವಂತೆ ಕರೆ ನೀಡಿದರು.
ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯ ಶಿವಕುಮಾರ ಸ್ವಾಮಿ ತರಬೇತಿ ಉದ್ಘಾಟಿಸಿ ಮಾತನಾಡಿ, ಭಾರತವು ಜಗತ್ತಿಗೆ ಸಂಸ್ಕಾರ, ಸಂಸ್ಕøತಿ ಕಲಿಸಿದ ದೇಶ, ಆದರೆ ನಮ್ಮ ಯುವಜನತೆ ವಿದೇಶಿ ಉಡಿಗೆ, ತೊಡಿಗೆ, ಉಟೋಪಚಾರಗಳೆಲ್ಲವು ಅನುಕರಿಸುತ್ತಿದ್ದು, ಅಲ್ಲಿನ ಕಾಯಕ ಪ್ರಜ್ಞೆ ಮಾತ್ರ ಮೈಗೂಡಿಸಿಕೊಳ್ಳದಿರುವುದು ಖೇದಕರ ಸಂಗತಿ ಎಂದ ಅವರು, ಸೋಮಾರಿತನ ತ್ಯೇಜಿಸಿ, ಕಠಿಣ ಪರಿಶ್ರಮಿಗಳಾಗುವಂತೆ ಕರೆ ಕೊಟ್ಟರು.
ಜಿಲ್ಲಾ ಚೆಸ್ ಅಸೋಶಿಯಶನ್ ಅಧ್ಯಕ್ಷ ವಿನಯಕುಮಾರ ಬಿರಾದಾರ ಹಾಗೂ ಎಸ್.ಎಸ್ ಇನಫೊಟೆಕ್ ಸಂಸ್ಥೆ ಮುಖ್ಯಸ್ಥ ದತ್ತಾತ್ರಿ ಮಾತನಾಡಿದರು. ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಮಂಗಲಾ ಮರಕಲೆ ಅಧ್ಯಕ್ಷತೆ ವಹಿಸಿದರು.
ಆರಂಭದಲ್ಲಿ ಸಪ್ತಗಿರಿ ಪ್ರೌಢಶಾಲೆ ವಿದ್ಯಾರ್ಥಿನಿ ಮಾಲಾಶ್ರೀ ಸಹ ಶಿಕ್ಷಕ ಸೋಮಶೇಖರ ಸ್ವಾಗತಿಸಿದರೆ, ಪವನ ನಿರೂಪಿಸಿದರು. ಶರಣು ಖಂಡಾರೆ ವಂದಿಸಿದರು.

** Sanjevani **

Leave a Reply

Your email address will not be published. Required fields are marked *