Swachata Abhiyan in vaishnavi colony

ಅವ್ಯವಸ್ಥೆಯ ಆಗರವಾದ ವೈಷ್ಣವಿ ಕಾಲೋನಿ
ವಿವಿಧ ಸಂಘಟನೆಗಳಿಂದ ಸ್ವಯಂಪ್ರೇರಿತ ಸ್ವಚ್ಛತಾ ಅಭಿಯಾನ

DSC02705ಬೀದರ: ಜಿಲ್ಲೆಯ ವಿವಿಧ ಸಂಘಟನೆಗಳಿಂದ ನಗರದ ಗುರುನಗರ ಹಾಗೂ ಶಿವನಗರ ಉತ್ತರದ ಮಧ್ಯದಲ್ಲಿರುವ ವೈಷ್ಣವಿ ಬಡಾವಣೆಯಲ್ಲಿ ರವಿವಾರ ಬೃಹತ್ ಸ್ವಚ್ಛತಾ ಅಭಿಯಾನ ಜೊತೆಗೆ ಈ ಕಾಲೋನಿಗೆ ನಿಸ್ಕಾಳಜಿ ತೋರುತ್ತಿರುವ ನಗರ ಸಭೆ ವಿರೂದ್ಧ ಧಿಕ್ಕಾರ ಕೂಗಲಾಯಿತು.

ಕರ್ನಾಟಕ ಬಾಲವಿಕಾಸ ಅಕಾಡೆಮಿ, ಜ್ಞಾನ ಮಾರ್ಗ ಮಲ್ಟಿಪರ್ಪೊಜ್ ಸೊಸೈಟಿ, ಕರುನಾಡು ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ, ಬುದ್ದ ಬಸವ ಅಂಬೇಡ್ಕರ್ ಯುವಕ ಸಂಘ ಹಾಗೂ ಕರ್ನಾಟಕ ಜೈ ಸಿಂಹ ಸೇನೆ ವತಿಯಿಂದ ಈ ಅಭಿಯಾನ ಜರುಗಿತು.

 

ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯ ಶಿವಕುಮಾರ ಸ್ವಾಮಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ವೈಷ್ಣವಿ ಕಾಲೋನಿಯು ಸರ್ವ ಸಮಸ್ಯೆಗಳ ಆಗರವಾಗಿದ್ದು, ಇಲ್ಲಿನ ನಗರ DSC02750ಸಭೆ ಉಪಾಧ್ಯಕ್ಷರೆ ಈ ಕ್ಷೇತ್ರದ ಸದಸ್ಯರಾಗಿದ್ದು, ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಓಣಿಯಲ್ಲಿ ಸ್ವಚ್ಛತೆ ಇಲ್ಲದ ಕಾರಣ ಸೊಳ್ಳೆಗಳ ಕಾಟ ವಿಪರಿತವಾಗಿದೆ. ಇಲ್ಲಿ ಅಡ್ಡಾಡಲು ರಸ್ತೆ ಸಹ ಇರದ ಇಂತಹ ಸನ್ನವೇಶ ಅರಿತ ವಿವಿಧ ಸಂಘಟನೆಗಳು, ಕಸಬರಿಕೆ ಹಿಡಿದು ಸ್ವಯಂಪ್ರೇರಿತರಾಗಿ ಸ್ವಚ್ಛತೆಗೆ ಮುಂದಾಗಿರುವುದು ನಿಜಕ್ಕೂ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಲೆ ತಗ್ಗಿಸುವಂತಾಗಿದೆ ಎಂದ ಅವರು ಇನ್ನು ಮುಂದೆ ಆದರೂ ಈ ಎಲ್ಲ ಸಮಸ್ಯೆಗೆ ಸ್ಪಂದಿಸದಿದ್ದರೆ,  ಹೋರಾಟ ಅನಿವಾರ್ಯವಾಗುತ್ತದೆ ಎಂದರು.

ಅಂಬಿಗರ ಚೌಡಯ್ಯ ಯುವ ಸೇನೆ ಜಿಲ್ಲಾಧ್ಯಕ್ಷ ಸುನಿಲ ಬಾವಿಕಟ್ಟಿ ಮಾತನಾಡಿ, ಸ್ವಚ್ಛತೆ ಹೆಸರಲ್ಲಿ ಸರ್ಕಾರ ಕೋಟಿಗಟ್ಟಲೆ ಹಣ ವ್ಯಯ ಮಾಡಿದರೂ ಇಂದು ಪೊರಕೆ ಹಿಡಿದು ಸ್ವಚ್ಛತೆ ಮಾಡುವ ಕೆಲಸ ನಡೆಯುತ್ತಿದ್ದು, ಸಂಘ ಸಂಸ್ಥೆಗಳಿಗೆ ಈ ಅಭಿಯಾನದ ಜವಾಬ್ದಾರಿ ನೀಡಿ, ಹಣ ಖರ್ಚು ಮಾಡಿದರೆ, ಸ್ವಚ್ಛ ಭಾರತದ ಕನಸ್ಸು ನನಸ್ಸಾಗಲು ಸಾಧ್ಯವಿದೆ ಎಂದರು.

ಪ್ರಭುರಾವ ಕಂಬಳಿವಾಲೆ ಪ್ರತಿಷ್ಠಾನದ ಅಧ್ಯಕ್ಷ ನಾಗಶೆಟ್ಟಿ ಧರಂಪೂರ್, ಜಿಲ್ಲಾ ಚೆಸ್ ಅಸೋಶಿಯಶನ್ ಅಧ್ಯಕ್ಷ ವಿನಯಕುಮಾರ ಬಿರಾದಾರ, ದಲಿತ ಜನ ಸೇನೆ ಜಿಲ್ಲಾಧ್ಯಕ್ಷ ಸಂಜೀವಕುಮಾರ ಕಾರಗಾ, ಡಾ.ಎ.ಪಿ.ಜೆ ಅಬ್ದುಲ್ ಕಲಾಮ್ ಯುವಕ ಸಂಘದ ಅಧ್ಯಕ್ಷ ವೀರಪ್ಪ ಬಾಮಂದಿ, ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ಅತಿವಾಳೆ, ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿಂದ್ರ ಲಂಜವಾಡಕರ್, ಕರ್ನಾಟಕ ಜಯಸಿಂಹ ಸೇನೆ ಜಿಲ್ಲಾದ್ಯಕ್ಷ ಶಾಂತಕುಮಾರ ಮಾಳಗೆ, ಕರುನಾಡು ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ಜಿಲ್ಲಾಧ್ಯಕ್ಷ ಶಾಮರಾವ ನೆಲವಾಡೆ, ಇತರೆ ಯುವ ಸಂಘಟನೆಗಳ ಪ್ರಮುಖರಾದ ರೋಹಿತ ಮೇತ್ರೆ, ಮಿಲಿಂದ್ ನೇಳಗೆ, ಸಚೀನ ಮೇತ್ರೆ, ಮೋಹನ್ ಮೇತ್ರೆ, ಸುರೇಶ ಮನ್ನಾಯೆಖೆಳ್ಳಿ, ಅಶೋಕ ಕನ್ನಳ್ಳಿ, ಗೌತಮ ಜೈನೋರ್, ದಾವಿದ ಹಲಗೆ, ಆಕಾಶ ಟಾಳೆ, ರಾಜು ಮೇತ್ರೆ, ಗಣೇಶ ಜನವಾಡ, ಸುರೇಶ ಬಾವಿದೊಡ್ಡಿ,ಹಣಮಂತ ಮರಕುಂದಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬುದ್ದ ಬಸವ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಮಹೇಶ ಗೋರನಾಳಕರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *