Sri Subhashchandra bose Jayanti

Netaji Subhosh Chandra Bhos Jayanti In Madivaleshwar Mandir1ಮಹಾಪುರುಷರ ಜಯಂತಿಗಳಾಚರಣೆಯಿಂದ

ದೇಶಭಕ್ತಿ ಜಾಗೃತ: ರಾಮತಿರೆ

ಬೀದರ: ಮಹಾಪುರುಷರ ಜಯಂತಿಗಳು ಆಚರಿಸುವುದರಿಂದ ಪ್ರತಿಯೊಬ್ಬರಲ್ಲಿ ದೈವಭಕ್ತಿ ಹಾಗೂ ದೇಶಭಕ್ತಿ ಜಾಗೃತವಾಗುತ್ತದೆ ಎಂದು ಪತಂಜಲಿ ಯೋಗ ಸಮಿತಿ ಜಿಲ್ಲಾಧ್ಯಕ್ಷ ಎನ್.ಡಿ.ರಾಮತಿರೆ ಅಭಿಪ್ರಾಯ ಪಟ್ಟರು.
ಶನಿವಾರ ನಗರದ ಪನ್ಸಾಲ್ ತಾಲಿಮ್‍ನಲ್ಲಿರುವ ಮಡಿವಾಳೇಶ್ವರ ಮಂದಿರದಲ್ಲಿ ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಯುವಕ ಸಂಘ ಹಾಗೂ ಕುಂಬಾರ ಸಮಾಜದ ಜಂಟಿ ಆಶ್ರಯದಲ್ಲಿ ನೇತಾಜಿ ಸುಭಾಷಚಂದ್ರ ಭೋಷ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದು ಯುವಜನರಲ್ಲಿ ಸ್ವಾಭಿಮಾನ ಹಾಗೂ ದೇಶಪ್ರೇಮ ಕ್ಷೀಣಿಸಲು ವಿದೇಶಿ ಅನುಕರಣೆ ಹಾಗೂ ದುಷ್ಚಟಗಳು ಪ್ರಮುಖ ಕಾರಣವಾಗಿದ್ದು, ಯೋಗ, ಪ್ರಾಣಾಯಾಮ ಹಾಗೂ ಧ್ಯಾನದಿಂದ ಕಳೆದು ಹೋದ ನಮ್ಮ ಚೈತನ್ಯ ಶಕ್ತಿ, ವಿವೇಜತನ, ಕ್ರಿಯಾಶಿಲ ಮನೋಭಾವ ಜೊತೆಗೆ ಪರಿಪೂರ್ಣ ನಿರೋಗಿಯಾಗಿ ಬದುಕಲು ಸಾಧ್ಯವಾಗಿದೆ ಎಂದರು.
ಜಯಂತಿ ಉದ್ಘಾಟಿಸಿದ ಭಾರತಿಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿ, ಇಂದು ದೇಶದ ಆಂತರಿಕ ಹಾಗೂ ಬಾಹ್ಯ ಕಡೆಗಳಲ್ಲಿ ಭಯೋತ್ಪಾದಕ ಕೃತ್ಯಗಳು ವ್ಯಾಪಕವಾಗಿ ಜರುಗುತ್ತಿದ್ದು, ಅವುಗಳ ದಮನಕ್ಕಾಗಿ ಸುಭಾಷ ಚಂದ್ರ ಭೋಷರ ವಿಚಾರ ಧಾರೆ ಅನುಸರಿಸುವುದು ಅಗತ್ಯ ಎಂದರು.
ಅಂದು ಮಹಾಪುರುಷರು ಹೋರಾಡಿ ತಮ್ಮ ತ್ಯಾಗ ಬಲಿದಾನವನ್ನು ದೇಶಕ್ಕಾಗಿ ಸಮರ್ಪಿಸಿ, ಸ್ವಾತಂತ್ರ ದಕ್ಕಿಸಿ ಕೊಟ್ಟರೆ, ನಾವಿಂದು ಮತ್ತೆ ಪಾಶ್ಚಾತ್ಯರ ಅನುಕರಣೆ ಹಾಗೂ ಸಂಸ್ಕøತಿ ಬಳಿಸುವ ಮೂಲಕ ವಿದೇಶಿಯರು ಮತ್ತೊಮ್ಮೆ ಈ ದೇಶವನ್ನಾಳಲಿಕ್ಕೆ ಅವ್ಹಾನ ನೀಡುತ್ತಿದ್ದು, ಯುವಕರಲ್ಲಿ ಸಜ್ಯನಿಕೆ ಹಾಗೂ ಸದಾಚಾರ ಜಾಗೃತವಾಗಲು ಇಂತಹ ಮಹಾನ ವ್ಯಕ್ತಿಗಳ ಜಯಂತಿ ಆಚರಿಸುವಂತೆ ಕರೆ ಕೊಟ್ಟರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸೇನಾನಿ ಗಣಪತಿ ಗೌರಾ ಮಾತನಾಡಿ, ಪ್ರತಿಯೊಬ್ಬರಲ್ಲಿ ನಾಡು, ದೇಶ, ನುಡಿ, ಭಾಷೆಗಳ ಬಗ್ಗೆ ಸ್ವಾಭಿಮಾನ ಹಾಗೂ ಗೌರವ ಭಾವನೆ ಅಗತ್ಯವಾಗಿದ್ದು, ನಮ್ಮ ನೆಲ, ಜಲ ಹಾಗೂ ಸಂಸ್ಕøತಿ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಪರಮ ಕರ್ತವ್ಯವಾಗಿದೆ ಎಂದು ತಿಳಿ ಹೇಳಿದರು.
ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯ ಶಿವಕುಮಾರ ಸ್ವಾಮಿ, ನಗರ ಸಭೆ ಸದಸ್ಯ ಧನರಾಜ ಹಂಗರಗೆ ಹಾಗೂ ಬಹುಮನಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ರಾಜೇಂದ್ರ ಸಪಾಟೆ ವೇದಿಕೆಯಲ್ಲಿದ್ದರು.
ಆರಂಭದಲ್ಲಿ ಭಾರತ ಸ್ವಾಭಿಮಾನ ಯುವ ಘಟಕದ ಅಧ್ಯಕ್ಷ ಗೋರಖನಾಥ ಕುಂಬಾರ ಸರ್ವರನ್ನು ಸ್ವಾಗತಿಸಿದರೆ, ಕುಂಬಾರ ಸಮಾಜದ ಅಧ್ಯಕ್ಷ ವಿಠಲ ಕುಂಬಾರ ಕಾರ್ಯಕ್ರಮ ನಿರೂಪಿಸಿದರು. ಜನವಾಡಾ ಗ್ರಾಮ್ ಪಂಚಾಯತ್ ಸದಸ್ಯ ಅಂಬಾದಾಸ್ ಕುಂಬಾರ ವಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರುಗಳಾದ ಶರಣು ಕುಂಬಾರ, ಮಚ್ಚೇಂದ್ರ ಕುಂಬಾರ, ಆನಂದ ಕುಂಬಾರ, ಸೈಮನ್ ಚಿಲ್ಲರ್ಗಿ, ಶಿವಕುಮಾರ ಕುಂಬಾರ ಸೇರಿದಂತೆ ಸಮಾಜದ ಹಲವಾರು ಯುವಕರು, ಸಮಾಜದ ಮುಖಂಡರು ಭಾಗವಹಿಸಿದರು.


 

Leave a Reply

Your email address will not be published. Required fields are marked *