Sms facility for Govt. Schools

composemail-iconಬೀದರ್: ಪ್ರಸಕ್ತ ಸಾಲಿನಿಂದಲೇ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿಯಿಂದ ಶಾಲೆಗಳಲ್ಲಿ ಬಿಸಿಯೂಟ ಪಡೆಯುವ ವಿದ್ಯಾರ್ಥಿಗಳ ನಿಖರವಾದ ಸಂಖ್ಯೆ ಹಾಗೂ ಶಿಕ್ಷಕರ ಸಂಖ್ಯೆಯನ್ನು ಪಡೆಯಲು ಎಸ್ಎಂಎಸ್ ಆಧಾರಿತ ಹಾಜರಾತಿ ವ್ಯವಸ್ಥೆ (ಖಂಖ ಇಛಡಜಜ ಆಡಿಡಿಜಟಿಜಜಟ್ಛಿಜ ಖಣಡಡಿಜಟ)  ಜಾರಿಗೆ ತರಲಾಗಿರುತ್ತದೆ.

ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯ ಗುರುಗಳು ಕಡ್ಡಾಯವಾಗಿ ಎಸ್ಎಂಎಸ್ ಹಾಜರಾತಿಯನ್ನು ನಿರ್ವಹಿಸಬೇಕಾಗಿದೆ.ಈ ಶಾಲೆಗಳು ಬಿಸಿಯೂಟ ಪಡೆಯುವ ಮಕ್ಕಳ ಸಂಖ್ಯೆಯನ್ನು ಕಡ್ಡಾಯವಾಗಿ ಎಸ್ಎಂಎಸ್ ಮೂಲಕ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿರುವ ಎನ್.ಐ.ಸಿ ದೂ. 09342504799ಗೆ ರವಾನಿಸಬೇಕು.
ಎಸ್ಎಂಎಸ್ ಕಳುಹಿಸದೇ ಇರುವ ಶಾಲೆಗಳಿಗೆ ಆಹಾರ ಧಾನ್ಯ, ಅನುದಾನ ಬಿಡುಗಡೆಯಾಗದೆ ಅಕ್ಷರ ದಾಸೋಹ ಯೋಜನೆ ಅನುಷ್ಠಾನಕ್ಕೆ ತೊಂದರೆಯಾದಲ್ಲಿ ಸಂಬಂಧಪಟ್ಟ ಶಾಲೆಗಳ ಮುಖ್ಯಗುರುಗಳನ್ನೇ ನೇರ ಹೊಣೆಗಾರರನ್ನಾಗಿ ಪರಿಗಣಿಸಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಅಕ್ಷರ ದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *