siddaramaiah coming to Bidar

ಶೋಷಿತರ ದುಮ್ಮನ ಆಲಿಸಲು

ಸಿದ್ದರಾಮಯ್ಯ ಬರುತ್ತಿದ್ದಾರೆ: ಚಿದ್ರಿ

DSC_0361ಬೀದರ: ನವೆಂಬರ 8ರಂದು ರಾಜ್ಯದ ಹಿಂದುಳಿದ ವರ್ಗಗಳ ನಾಯಕರು, ಶೋಷಿತ ವರ್ಗಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷರೂ ಹಾಗೂ ಈ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬೀದರ್‍ಗೆ ಬರುತ್ತಿದ್ದಾರೆ ಎಂದು ಕರ್ನಟಕ ಸರ್ಕರದ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಂಡಿತರಾವ ಚಿದ್ರಿ ತಿಳಿಸಿದರು.
ಶುಕ್ರವಾರ ಬೆಳಿಗ್ಗೆ 11.00 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದ ಬಳಿ ಇರುವ ಕರ್ನಾಟಕ ಸಾಹಿತ್ಯ ಸಂಘದ ಅವರಣದಲ್ಲಿ ಜಿಲ್ಲಾ ಶೋಷಿತ ವರ್ಗಗಳ ಒಕ್ಕೂಟದ ವತಿಯಿಂದ ವಿಜಯ ದಶಮಿ ಪ್ರಯುಕ್ತ ಪರಸ್ಪರ ಬನ್ನಿ ಹಂಚಿಕೊಳ್ಳುವ ಸೌಹಾರ್ದ ಸಭೆಯ ಅದ್ಯಕ್ಷತೆ ವಹಿಸಿ ಮಾತನಡಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಜಿಲ್ಲೆಗೆ ಆಗಮಿಸಿ, ಅಂದು ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್‍ರ ಶತಮಾನೋತ್ಸವ ಉದ್ಘಾಟಿಸುವರು. ಜೊತೆಗೆ ಜಿಲ್ಲೆಯ ಶೋಷಿತ ವರ್ಗಗಳ ದನಿ ಆಲಿಸಿ, ಸರ್ಕಾರ ಅವರಿಗೆ ನೀಡಿರುವ ಸೌಲಭ್ಯಗಳ ಮೇಲೆ ಬೆಳಕು ಚಲ್ಲುವರು ಎಂದವರು ಹೇಳಿದರು.
ಜಿಲ್ಲೆಯ ಸಣ್ಣ ಸಣ್ಣ ಜಾತಿ ಜನಾಂಗದವರಿಗೆ ಈ ಹಿಂದೆ ಎಲ್ಲ ಸರ್ಕರಗಳು ಕಡೆಗಣಿಸಿದ್ದವು ಆದರೆ ಹಾಲಿ ಮುಖ್ಯಮಂತ್ರಿಗಳು ಈ ಶೋಷಿತರ ಉದ್ದಾರಕ್ಕಾಗಿ ಅನೇಕ ಮಹತ್ತರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಅವನ್ನು ಪರಿಣಾಮಕಾರಿಯಾಗಿ ಆಯಾ ಶೋಷಿತ ಜನಾಂಗದ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಒಕ್ಕೂಟ ಕಳೆದ 6 ವರ್ಷಗಳಿಂದ ಜಿಲ್ಲೆಯಲ್ಲಿ ಕಾರ್ಯ ಮಾಡುತ್ತಿದ್ದು, ಈ ತಿಂಗಳ 26ರಂದು ಜಿಲ್ಲಾ ಪಂಚಾಯತ್ ಅವರಣದಲ್ಲಿ ಉಸ್ತುವಾರಿ ಸಚಿವೆ ಉಮಾಶ್ರೀ ಅವರ ಅಧ್ಯಕ್ಷತೆಯಲ್ಲಿ ಜರುಗುವ ಈ ಸಭೆಯಲ್ಲಿ ಒಕ್ಕೂಟದ ಸದಸ್ಯರು ಅಧಿಕ ಸಂಕ್ಯೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯಗಳ ಪಟ್ಟಿ ಸಲ್ಲಿಸುವಂತೆ ಕೋರಿದರು.
ಒಕ್ಕೂಟದ ಉಪಾಧ್ಯಕ್ಷ ಆನಿಲ ಬೆಲ್ದಾರ್ ಮಾತನಾಡಿ, ಹಿಂದೆ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಮಾಜಿ ಸಿಎಂ ದೇವರಾಜ್ ಅರಸ್ ಅವರು ಶೋಷಿತರ ದನಿಯಾಗಿ ಕಾರ್ಯ ಮಾಡಿದರಾದರೂ ಅದು ಅಷ್ಟು ಪ್ರಭಾವ ಬೀರದೆ, ಹಾಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ನಾಡಿನ ಶೋಷಿತರ ದನಿ ಆಲಿಸಿ, ಅವರ ಕಷ್ಟ ಕಾರ್ಪಣ್ಯಗಳನ್ನು ಅಧ್ಯಯನ ಗೈಯ್ಯಲು ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಜಾತಿ ಜನಗಣತಿ ಸಮಿಕ್ಷೆ ಮಾಡಿಸಿ, ತುಳಿತಕ್ಕೋಳಗಾದ ಸಣ್ಣ ಸಣ್ಣ ಜನಾಂಗದವರ ಪತ್ತೆ ಹಚ್ಚಿ ಅವರ ಸಮಸ್ಯಗಳನ್ನು ಆಲಿಸುವಂಥ ಕಾರ್ಯ ನ.8ರಂದು ಮಾಡಲಿದ್ದು, ಈ ಕಾರ್ಯಕ್ರಮದಲ್ಲಿ ಯಾವುದೇ ಪಕ್ಷ, ಜಾತಿ, ಜನಾಂಗ ಎಂಬ ಭೇದ ಮಾಡದೆ ಒಕ್ಕೂರರಾಗಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.
ಹಿಂದುಳಿದ ವರ್ಗಗಳ ನಾಯಕ ಬಿ.ನಾರಾಯಣ ಮಾತನಾಡಿ, ಯಾವ ಗ್ರಾಮಗಳಲ್ಲಿ ಅಂಬೇಡ್ಕರ್‍ರ ಪ್ರತಿಮೆ ಇದೆಯೋ ಅಲ್ಲಿ ಶೋಷಣೆ ಹಾಗೂ ದಬ್ಬಾಳಿಕೆ ಆಗದು, ಅಲ್ಲಿ ಭಯೋತ್ಪಾದನೆ, ನೆಕ್ಸಲೈಟ್‍ಗಳ ದಾಳಿ ನಡೆಯಲು ಅಸಾಧ್ಯ ಎಂದ ಅವರು, ಸಿಎಂ ಸಿದ್ಧರಾಮಯ್ಯನವರು ಈ ನಾಡಿನ ಶೋಷಿತರ ಜನ ನಾಯಕರಾಗಿದ್ದು, ಅವರ ಕಾರ್ಯಕ್ರನಗಳ ಸದುಪಯೋಗ ಪಡೆದುಕೊಳ್ಳುವಂತೆ ಕಿವಿ ಮಾತು ಹೇಳಿದರು.
ವೇದಿಕೆಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಾಜು ಕಡ್ಯಾಳ್, ಬಸವರಾಜ ಪವಾರ ಇದ್ದರು.
ಸಭೆಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಮಹೇಶ ಗೋರನಾಳಕರ್, ವಿದ್ಯಾವತಿ ತುಗಾಂವೆ, ಸಂತೋಷ ಜೋಳದಾಬಕೆ, ಜನರ್ಧನ ಪೂಜಾರಿ, ಮರೆಪ್ಪ ಹೊಸಮನಿ, ಅರುಣ ಪಾಟೀಲ, ಪ್ರಕಾಶ ಮಾಳಗೆ, ಕಶಿನಾxರಾವÀ ಸೇರಿಕಾರ, ಸಂಜುಕುಮಾರ ಕಾರಗಾ ಹಾಗೂ ಇತರರಿದ್ದರು.
ಆರಂಭದಲ್ಲಿ ಒಕ್ಕೂಟದ ಸಂಚಾಲಕ ಮಾರೂತಿ ಸಿಕೆನ್‍ಪುರೆ ಸರ್ವರನ್ನು ಸ್ವಾಗತಿಸಿ, ಸಭೆ ಸಂಚಾಲನೆ ಮಾಡಿದರು.

Leave a Reply

Your email address will not be published. Required fields are marked *