Shri shailya Jagatguru at Shivayoga ashrama,bidar

ಜ್ಞಾನ ಶಿವಯೋಗಾಶ್ರಮಕ್ಕೆ

ಶ್ರೀಶೈಲ ಜಗದ್ಗುರುಗಳ ಭೇಟಿ

shreeshail jagadguru visit to znana shivayogashram

ಬೀದರ: ನಗರದ ನೌಬಾದ ಸಮೀಪದ ಭಾಲ್ಕಿ ರಸ್ತೆಯಲ್ಲಿರುವ ಜ್ಞಾನ ಶಿವಯೋಗಾಶ್ರಮಕ್ಕೆ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಶುಕ್ರವಾರ ಭೇಟಿ ನೀಡಿದರು.

 

ಅವರು ತೆಲಂಗಾಣದ ಧರ್ಮಪುರಿಯಲ್ಲಿ ರಾಜ್ಯ ಸರಕಾರದ ವತಿಯಿಂದ ನಡೆದ ಕುಂಭಮೇಳ ಪುಷ್ಕರ ಮಹಾಪರ್ವಕ್ಕೆ ಚಾಲನೆ ನೀಡಿ ಬೋಧನದಿಂದ ಅಥಣಿಯ ಯಡೂರು ಕ್ಷೇತ್ರಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಬೀದರದ ಜ್ಞಾನ ಶಿವಯೋಗಾಶ್ರಮಕ್ಕೆ ಭೇಟಿ ನೀಡಿ ಭಕ್ತಾದಿಗಳಿಗೆ ದರ್ಶನ ನೀಡಿದರು.

ಈ ಸಂದರ್ಭದಲ್ಲಿ ಆಶ್ರಮದ ಅಧಿಪತಿ ಪೂಜ್ಯ ಡಾ. ರಾಜಶೇಖರ ಸ್ವಾಮೀಜಿ ಗೋರಟಾ ಹಾಗೂ ಶ್ರೀಶೈಲದ ಅಕ್ಕಮಹಾದೇವಿ ಚೈತನ್ಯ ಕೇಂದ್ರದ ಮಹಾತಪಸ್ವಿಗಳಾದ ಪೂಜ್ಯ ಕರುಣಾದೇವಿ ಮಾತಾ ಅವರು ಶ್ರೀಶೈಲ ಜಗದ್ಗುರುಗಳಿಗೆ ಭಕ್ತಿ ಪೂರ್ವಕ ಗೌರವಾರ್ಪಣೆ ಸಲ್ಲಿಸಿದರು. ಆಶ್ರಮದ ನಯನ ಮನೋಹರ ಪ್ರಶಾಂತ ವಾತಾವರಣವನ್ನು ನೋಡಿ ಪ್ರಸನ್ನರಾದ ಶ್ರೀ ಜಗದ್ಗುರುಗಳು ಬಂದ ಭಕ್ತರಿಗೆ ಹರಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷ ಸಿದ್ರಾಮಯ್ಯಾ ಸ್ವಾಮಿ, ಕೇಂದ್ರ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಶಿವಯ್ಯ ಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ ಧನ್ನೂರ, ಡಾ. ಸುಭಾಷ ಪಾಟೀಲ, ಡಾ. ಓಂಕಾರ ಸ್ವಾಮಿ, ರಾಜಶ್ರೀ ಶ್ರೀಕಾಂತ ಸ್ವಾಮಿ, ಶಕುಂತಲಾ ಪ್ರತಾಪ ತಂಬಾಕೆ, ಕುಶಾಲರಾವ ಯಾಬಾ, ಕಾಶಿನಾಥ ಶಂಭು, ಶಿವರಾಜ ಕೋಟೆ, ಶಿವಕುಮಾರ ಕುಂಬಾರ, ರತ್ನಕುಮಾರ ಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *