Self Employment

SHG Awarness Prgm In Bellurಸ್ವಯಂ ಉದ್ಯೋಗದಿಂದ ಸ್ವಾವಲಂಬಿ ಜೀವನ:

ವಾಣಿ ರೆಡ್ಡಿ


ಬೀದರ: ಸ್ವಯಂ ಉದ್ಯೋಗದಿಂದ ಸ್ವಾವಲಂಬಿ ಬದುಕು ಸಾಗಿಸಲು ಸಾಧ್ಯ ಎಂದು ಸಂಪನ್ಮೂಲ ವ್ಯಕ್ತಿ ವಾಣಿ ರೆಡ್ಡಿ ಹೇಳಿದರು.
ಸೋಮವಾರ ತಾಲೂಕಿನ ಬೆಳ್ಳುರು ಗ್ರಾಮದ ಅಂಬೇಡ್ಕರ್ ಭವನದಲ್ಲಿ ಬುದ್ದ ಬಸವ ಅಂಬೇಡ್ಕರ್ ಯುವಕ ಸಂಘ, ಮಾನವ ಬಂಧುತ್ವ ವೇದಿಕೆ, ಜ್ಞಾನ ಮಾರ್ಗ ಮಲ್ಟಿ ಪರ್ಪೋಜ್ ಸೊಸೈಟಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸ್ವ ಸಹಾಯ  ಸಂಘದ ಮಹಿಳೆಯರಿಗೆ ಸ್ವಯಂ ಉದ್ಯೋಗ ಕುರಿತು ಅರಿವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಸ್ವಯಂ ಉದ್ಯೋಗಗಳಿಗೆ ವಯಸ್ಸು ಹಾಗೂ ಪ್ರತಿಷ್ಟೆ ಅಡ್ಡ ಗೋಡೆಯಾಗಬಾರದು, ಕಣ್ಣಿಗೆ ಕಾಣುವ ಯಾವುದೆ ಕೆಲಸ ಮಾಡಲು ಹಿಂದೇಟು ಹಾಕಬಾರದೆಂದಾಗ ಮಾತ್ರ ನಾವು ಸ್ವಾಭಿಮಾನಿಗಳಾಗಿ ಬದುಕು ಸಾಗಿಸಬಹುದು ಎಂದರು.

ಜಾನಪದ ಕಲಾವಿದ ಸುನಿಲ ಕಡ್ಡೆ ಮಾತನಾಡಿ, ನಾವಿಂದು ಅಣ್ಣ ಬಸವಣ್ಣನವರ ಕಾಯಕ ಪ್ರಜ್ಞೆ ಬೆಳೆಸಿಕೊಂಡು ಮನೆಯಲ್ಲಿ ತಯ್ಯಾರಿಸುವ ಹಾಗೂ ಸ್ವಲ್ಪ ಹಣದಲ್ಲಿ ಖರಿದಿಸಿ ಮಾರಬಹುದಾದ ಜೊತೆಗೆ ಹೊಸ ಹೊಸ ಉದ್ಯೋಗಗಳನ್ನು ಸೃಷ್ಟಿಸಿಕೊಂಡು ಮುಂದೆ ಬರಬೇಕೆಂದು ಕರೆ ನೀಡಿದರು.
ಇಂಜಿನಿಯರ್ ಸಿದ್ಧಾರ್ಥ ರಾಠೋಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ಜನ ಹಿಯಾಳಿಸುವುದು ಇಂದು ಮಾಮೂಲಾಗಿ ಬಿಟ್ಟಿದೆ. ಅದಕ್ಕೆ ಧ್ವತಿಗೆಡದೆ, ನಿರಂತರ ಕಾಯಕ ಜೀವಿಗಳಾಗಿ ಮುಂದೆ ಬರಬೇಕು. ಕಾಯಕ ತನಗಾಗಿ ಅಲ್ಲ, ಪರರಿಗಾಗಿ ಎಂಬ ಸಂಕಲ್ಪ ಬೆಳೆಸಿಕೊಂಡು ಮಾದರಿ ವ್ಯಕ್ತಿಯಾಗಿ ಹೊರ ಹೊಮ್ಮುವಂತೆ ಕರೆ ಕೊಟ್ಟರು.
ಬುದ್ಧ ಬಸವ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಮಹೇಶ ಗೋರನಾಳಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವ ಸಹಾಯ ಸಂಘಗಗಳಿಗೆ ಬ್ಯಾಂಕುಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೈಗಾರಿಕೆ ಇಲಾಖೆ, ಖಾದಿ ಗ್ರಾಮುದ್ಯೋಗ ಇಲಾಖೆ, ಜವಳಿ ಇಲಾಖೆ ಸೇರಿದಂತೆ ಇತರೆ ಇಲಾಖೆಗಳಿಂದ ಸಾಕಷ್ಟು ಸೌಲತ್ತುಗಳಿದ್ದು, ಮಹಿಳೆಯರು ಮನೆ ಬಿಟ್ಟು ಧೈರ್ಯದಿಂದ ಹೊರ ಬರುವಂತೆ ಕರೆ ಕೊಟ್ಟರು. ಗ್ರಾಮದ ಮುಖಂಡ ಎಂಕಯ್ಯ ರೆಡ್ಡಿ, ಸ್ವ ಸಹಾಯ ಸಂಘದ ಸದಸ್ಯೆ ಶಿವಮ್ಮ ಪಟ್ಲೋರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಸ್ಥಳಿಯ ಯುವ ಮುಖಂಡ ಅಮರ್ ಅಲ್ಲಾಪೂರ್ ಸರ್ವರನ್ನು ಸ್ವಾಗತಿಸಿದರು. ಕು.ರೇಣುಕಾ ಪಟ್ಲೋರ್ ನಿರೂಪಿಸಿದರು. ಸುನಿಲ ಮಾಳಗೆ ವಂದಿಸಿದರು.


 

Leave a Reply

Your email address will not be published. Required fields are marked *