Science & Technology Education

ಗೋವು ಸರ್ವ ಧರ್ಮಿಯರಿಗೆ ಮಾತೃ ಸ್ವರುಪಿ: ಶಿವಯ್ಯ ಸ್ವಾಮಿ

Science_ScienctifiTrainingಬೀದರ: ಗೋವು ಎಲ್ಲ ಧರ್ಮಿಯರಿಗೆ ಸಮಾನವಾಗಿ ಹಾಲು ಕೊಡುವ ಮೂಲಕ ಧರ್ಮ ಸಂಹಿಉಷ್ಣತಾ ಭಾವ ಹೊರ ಹಾಕುವ ಅಪರೂಪದ ಪ್ರಾಣಿ ಸಂಪತ್ತಾಗಿದೆ ಎಂದು ಭಾರತಿಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಶಿವಯ್ಯ ಸ್ವಾಮಿ ತಿಳಿಸಿದರು.
ಭಾಲ್ಕಿ ತಾಲೂಕಿನ ಕಟ್ಟಿ ತುಗಾಂವ ಗ್ರಾಮದಲ್ಲಿ ಹಲಹಳ್ಳಿ(ಕೆ) ಗ್ರಾಮದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಿಂದ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ ಮೂರನೇ ದಿನದ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ, ‘ಗೋ ಸಂರಕ್ಷಣೆಯಲ್ಲಿ ಯುವಜನರ ಪಾತ್ರ’ ಕುರಿತು ಉಪನ್ಯಾಸ ನೀಡಿದರು.
ಇಂದು ಕೆಲವು ರಾಜಕಿಯ ಮುಖಂಡರು ಗೋವನ್ನು ಒಂದು ಧರ್ಮಕ್ಕೆ ಸೀಮಿತ ಮಾಡಿ ತಮ್ಮ ಬೇಳೆ ಬೆಯಿಸಿಕೊಳ್ಳುತ್ತಿರುವುದು ದುರ್ದೈವದ ಸಂಕೇತವಾಗಿದ್ದು, ಕ್ಷಿರ ಭಾಗ್ಯಗಳಂತಹ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳು ನಿಂತಿರುವುದು ಗೋಮಾತೆಯ ಹಾಲಿನಿಂದ ಎಂಬುದನ್ನು ಅರ್ಥ ಮಾಡಿಕೊಂಡು ಪೂನಃ ಗೋ ಆಯೋಗ ಪುನರಚನೆಗೆ ರಾಜ್ಯ ಸರ್ಕಾರ ಚಿಂತಿಸಲಿ ಎಂದರು.

ಭಾರತದ ಸಂವಿಧಾನದಲ್ಲಿ ಪ್ರಾಣಿ ಹತ್ಯೆ ಶಿಕ್ಷಾರ್ಹ ಅಪರಾಧ ಎಂದು ಸ್ಪಷ್ಟಪಡಿಸಿದರೂ, ದೇಶದ ಸರ್ವೋಚ್ಛ ನ್ಯಾಯಾಲಯವು ಗೋಹತ್ಯೆಯನ್ನು ಖಾರವಾಗಿ ಖಂಡಿಸಿ, ದಂಡಿಸಲು ಮುಂದಾಗಿದ್ದರೂ, ಗೋಹತ್ಯೆ ದೇಶದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವುದು ಗಮನಿಸಿದರೆ, ಮುಂದೋಂದು ದಿನ ಹಾಲು ಕನಸಾಗಿ, ಉಳಿದು ಬರೀ ಸುರೆಮಾಂಸ ತಿನ್ನುವಂತಹ ದೈತ್ಯ ಸಂಸ್ಕøತಿ ಉದ್ಭವಿಸುವುದರಲ್ಲಿ ಸಂದೇಹವಿಲ್ಲವೆಂದು ಸ್ಪಷ್ಟಪಡಿಸಿದರು.

ಭಾಲ್ಕಿ ಕೃಷಿ ಲಾಖೆಯ ತಾಂತ್ರಿಕ ಸಹಾಯಕ sಸತೀಷ ಶಟಕಾರ್ ಅವರು ‘ನೇಗಲ ಯೋಗಿಗೆ ಆತ್ಮಸ್ಥೈರ್ಯ ತುಂಬುವಿಕೆ’ ಕುರಿತು ವಿಶೇಷ ಉಪನ್ಯಾಸ ನೀಡಿ, ಕೃಷಿ ಹಾಗೂ ಹೈನುಗಾರಿಕೆ ಒಂದು ನಾಣ್ಯದ ಎರಡು ಮುಖಗಳಾಗಿದ್ದು, ಕೃಷಿಯೊಂದಿಗೆ ಹೈನುಗಾರಿಕೆ ಮಾಡುವ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಇಂದು ಬಹುತೇಕ ನಕಲಿ ರೈತರು ಮಾತ್ರ ಆತ್ಮಹತ್ಯೆ ನೆಪ ಮಾಡಿಕೊಂಡಿರುವ ಉದಾಹರಣೆ ಗಮನಿಸುತ್ತೇವೆ. ಸೋಮಾರಿತನ ಹಾಗೂ ಪರಾವಲಂಬಿ ಬದುಕು ನಮ್ಮನ್ನು ಆತ್ಮಹತ್ಯೆಗೆ ಕೊಂಡೊಯ್ಯುತ್ತಿದ್ದು, ಸ್ವಾಭಿಮಾನ ಹಾಗೂ ಕಾಯಕನಿಷ್ಠೂರರಾಗಿ ಹೊರ ಹೊಮ್ಮಿದಲ್ಲಿ ಯಶಸ್ಸು ಖಂಡಿತ ಸಾಧ್ಯವಿದೆ ಎಂದು ಪ್ರತಿಪಾದಿಸಿದರು.

ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯ ಶಿವಕುಮಾರ ಸ್ವಾಮಿ ಅತಿಥೀಗಳಾಗಿ ಮಾತನಾಡಿ, ಇಂದು ಯುವಜನರಲ್ಲಿ ಕಾಯಕಪ್ರಜ್ಞೆ ಅತಿ ಅವಶ್ಯವಾಗಿದ್ದು, ‘ಕೈ ಕೆಸರಾದರೇ ಬಾಯಿ ಮೊಸರು’ ಎಂಬ ಗಾದೆ ಮಾತಿನಂತೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಇಂತಹ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಕಿವಿ ಮಾತು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಭರಶೆಟ್ಟಿ ಶಾಂತಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ರೈತರ ಮಕ್ಕಳು ರೈತರಾಗದೆ, ಬೇರೆ ಉದ್ಯೋಗದಲ್ಲೋ ಅಥವಾ ನೌಕರಿಗೋ ತೆರಳಿ ತಮ್ಮ ಜನಮಿನು ಮಾರಾಟ ಮಾಡಿ, ದುರ್ವೆಸನಕ್ಕೆ ಬಲಿ ಬಿದ್ದು, ಒದ್ದಾಡಿ, ಮುಂದೋಂದು ದಿನ ಹೊಟ್ಟೆ ತುಂಬಿಕೊಳ್ಳಲು ಸಾಧ್ಯವಾಗದೆ, ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಿರುವುದು ದಯನಿಯ ಸಂಗತಿಯಾಗಿದ್ದು, ಕೃಷಿಗೆ ಚೊಚ್ಚಲ ಪ್ರಾಶಸ್ತೆ ನೀಡಿ, ನೌಕರಿ ಹಾಗೂ ಉದ್ಯೋಗಕ್ಕೆ ನಂತರದ ಸ್ಥಾನ ನೀಡುವ ಗತಕಾಲದ ಪರ್ಯೆಂಪರೆ ಮತ್ತೆ ಮರುಕಳಿಸಬೇಕಿದೆ ಎಂದರು.

ಬ್ಯಾಲಹಳ್ಳಿ ಗ್ರಾಮ್ ಪಂಚಾಯತ್ ಸದಸ್ಯ ವಿಜಯಕುಮಾರ ಪೂಜಾರಿ ಮಾತನಾಡಿದರು. ಸ್ಥಳಿಯ ಮುಖಂಡರಾದ ಬಿ.ಬಸವರಾಜ, ರಾಜಶೇಖರ ಬಶೆಟ್ಟಿ ವೇದಿಕೆಯಲ್ಲಿದ್ದರು. ಪ್ರಭುರಾವ ಮಂಗಲಿಗಿ, ನೆಹರು ಬಂಡಿ, ಮಹಾದೇವಪ್ಪ, ವಿರಶೆಟ್ಟಿ ಬೂದೆ ಹಾಗೂ ಇತರರು ಕಾರ್ಯಕ್ರಮದಲ್ಲಿದ್ದರು.
ಶಿಬಿರಾರ್ಥಿ ಸಪ್ನಾ ಮಾಣಿಕ ಸ್ವಾಗತಿಸಿದರೆ, ಎಸ್.ಎಸ್.ಎಸ್ ಅಧಿಕಾರಿ ಶಿವಕುಮಾರ ಸಾಲಿ ನಿರೂಪಿಸಿದರು. ಶಿಬಿರಾರ್ಥಿ ಪೂಜಾ ರಘುನಾಥ ವಂದನೆ ಸಲ್ಲಿಸಿದರು.


 

Leave a Reply

Your email address will not be published. Required fields are marked *