Renukacharya Jayanthi

ರೇಣುಕಾಚಾರ್ಯರ ಜಯಂತಿ:

ರೋಗಿಗಳಿಗೆ ಹಣ್ಣು ಹಂಪಲು ವಿತರಣೆ


Fruit Distribution on Renukacharya Jayanthi in Govt Hospital 1
ಬೀದರ: ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ನಿಮಿತ್ಯ ಜಿಲ್ಲಾಸ್ಪತ್ರೆ ಅವರಣದಲ್ಲಿ ಜಿಲ್ಲಾ ಜಂಗಮ ಸಮಾಜದಿಂದ ಅಲ್ಲಿಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಲಾಡಗೇರಿ ಹಿರೇಮಠ ಸಂಸ್ಥಾನದ ಪೂಜ್ಯ ಗಂಗಾಧರ ಶಿವಾಚಾರ್ಯ ಸ್ವಾಮಿಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಇಂದು ರೇಣುಕಾದಿ ಪಂಚಾಚಾರ್ಯರ ಯುಗಮಾನೋತ್ಸವವನ್ನು ಜಿಲ್ಲೆಯಲ್ಲಡೆ ವಿಭಿನ್ನ ರೀತಿಯಲ್ಲಿ ಆಚರಿಸುತ್ತಿದ್ದು, ರೇಣುಕಾಚಾರ್ಯರ ಉದ್ದೇಶದಂತೆ ಸರ್ವರಿಗೂ ಸುಖ, ಶಾಂತಿ, ಸಮೃದ್ಧಿ ಕರುಣಿಸುವ ಆ ಭಗವಂತನು ರೋಗ ಮುಕ್ತ ಸಮಾಜ ನಿರ್ಮಾಣ ಮಾಡಲಿ ಎಂದು ಹರಿಸಿದರು.
ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರೂ ಹಾಗೂ ಖ್ಯಾತ ಚರ್ಮರೋಗ ತಜ್ಞ ಡಾ.ಅಶೋಕಕುಮಾರ ನಾಗುರೆ ಮುಖ್ಯ ಅತಿಥಿಗಳಾಗಿ ಮಾತನಾಡಿ, ರೇಣುಕಾಚಾರ್ಯರು ಯಾರೊಬ್ಬರ ಆಸ್ತಿಯಲ್ಲ, ಅವರು ಇಡೀ ವಿಶ್ವದ ಆಸ್ತಿ, ವಿಶ್ವವು ಧರ್ಮದ ತಳಹದಿಯಲ್ಲಿ ನೆಲೆಸಿದರೆ ಅದುವೆ ಸತ್ಯಾರ್ಥ ಎಂದವರು ಹೇಳಿದರು.
ನೂತನ ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಶಿವಕುಮಾರ ಸ್ವಾಮಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ, ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೀದರ್ ವೈದ್ಯಕಿಯ ವಿಜ್ಞಾನಗಳ ಸಂಸ್ಥೆ ಅಧಿಕ್ಷಕ ಡಾ.ಶಿವಕುಮಾರ ಶಟಕಾರ ಅಧ್ಯಕ್ಷತೆ ವಹಿಸಿದರು.
ಡೆನ್ ಕಮ್ಯುನಿಕಜೇಶನ್ ಮಾಲಿಕರಾದ ರವಿ ಸ್ವಾಮಿ, ಭಾರತಿಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಶಿವಯ್ಯ ಸ್ವಾಮಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ದ ಶಿವಕುಮಾರ ಸ್ವಾಮಿ, ಗಾದಗಿ ಗ್ರಾಮ್ ಪಂಚಾಯತ್ ಸದಸ್ಯ ವರದಯ್ಯ ಸ್ವಾಮಿ, ಮುಧೋಳ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಿವಕಾಂತ ಸ್ವಾಮಿ, ಪ್ರಮುಖರಾದ ಶ್ರೀಕಾಂತ ಸ್ವಾಮಿ, ಶಿವಕುಮಾರ ಸ್ವಾಮಿ ಬಂಬುಳಗಿ, ಸಂಜೀವಕುಮಾರ ಕಾರಗಾ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


 

Leave a Reply

Your email address will not be published. Required fields are marked *