Rastriya program Inauguration

ಸದ್ಭಾವನೆ ಬಲವರ್ಧನೆಗೆ ಧಾರ್ಮಿಕ ಉತ್ಸವಗಳು

ಪೂರಕ: ಶಿವಯ್ಯ ಸ್ವಾಮಿ

ಬೀದರ: ಇಡೀ ಜಗತ್ತಿಗೆ ಹೋಲಿಸಿದರೆ ನಮ್ಮ ದೇಶ ಶಾಂತಿ, ಸಹನೆ, ಸಹಕಾರ, ಸದಾಚಾರಕ್ಕೆ ಹಿಡಿದ ಕನ್ನಡಿಯಾಗಿದ್ದರೂ ಇತ್ತಿಚೀಗೆ ಕೆಲವು ಆಂತರಿಕ Rastriya sadbhavana saptah enaguration photo1ಹಾಗೂ ಬಾಹ್ಯ ದುಷ್ಟ ಹಿತಾಸಕ್ತಿಗಳು ನಮ್ಮ ಶಾಂತಿ ಹಾಗೂ ಸೌರ್ಹಾತೆಯ ವಾತಾವರಣ ಹಾಳು ಮಾಡಲು ಹೊರಟಿದ್ದು, ಅವನ್ನು ನಿಗ್ರಹಿಸಲು ಆನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಧಾರ್ಮಿಕ ಉತ್ಸವಗಳು ಪೂರಕವಾಗಿದ್ದು, ಅವನ್ನು ನಿರಂತರವಾಗಿ ಮುಂದುವರೆಸಿದಲ್ಲಿ ರಾಷ್ಟ್ರೀಯ ಸದ್ಭಾವನೆ ಬಲಪಡಿಸಲು ಸಾಧ್ಯವಾಗಿದೆ ಎಂದು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಶಿವಯ್ಯ ಸ್ವಾಮಿ ತಿಳಿಸಿದರು.

ಗುರುವಾರ ನಗರದ ಲಾಡಗೇರಿ ಬಡಾವಣೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಭಾರತ ಸರ್ಕಾರದ ನೆಹರು ಯುವ ಕೇಂದ್ರ, ಬುದ್ದ ಬಸವ ಅಂಬೇಡ್ಕರ ಯುವಕ ಸಂಘ ಹಾಗೂ ಡಾ.ಬಿ.ಆರ್.ಅಂಬೇಡ್ಕರ ಪದವಿ ಪೂರ್ವ ಮಹಾವಿದ್ಯಾಲಯಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಮಾಜಿ ಪ್ರಧಾನಿ ದಿ.ರಾಜೀವ ಗಾಂಧಿ ಅವರ ಜನ್ಮದಿನಾಚರಣೆ ನಿಮಿತ್ಯ ರಾಷ್ಟ್ರೀಯ ಸದ್ಭಾವನಾ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.

ಇಡಿ ಜಗತ್ತಿಗೆ ಹೋಲಿಸಿದರೆ, ನಮ್ಮ ದೇಶದಲ್ಲಿ ಸುಮಾರು 6 ಧರ್ಮಗಳು ಹಾಗೂ 3700 ಜಾತಿ, ಉಪ ಜಾತಿ, ಪಂಗಡಗಳು ಇದ್ದರೂ ಪ್ರತಿಯೊಂದು ಪಂಗಡದವರು ಅನ್ಯ ಧರ್ಮ ಹಾಗೂ ಜಾತಿಯ ಧಾರ್ಮಿಕ ಉತ್ಸವಗಳಲ್ಲಿ ಸಾಮೂಹಿಕವಾಗಿ ಭಾಗವಹಿಸುವ ಮೂಲಕ ಸಹೋದರತ್ವ ಮೆರುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಪ್ರತೀಕ. ಆದರೆ, ವಿದೇಶಗಳಲ್ಲಿ ಒಂದೆ ಧರ್ಮ ಹಾಗೂ ಸಂಪ್ರದಾಯಗಳಿಗೆ ಸೀಮಿತವಾದ ಜನಾಂಗವಿದ್ದರೂ ರಕ್ತ ಕ್ರಾಂತಿಗಳಾಗಿರುವ ಉದಾಹರಣೆ ಸಾಕಷ್ಟಿರುವುದು ಗಮನಾರ್ಹ ಸಂಗತಿ. ಆದ್ದರಿಂದ ನಮ್ಮವರ ಶಾಂತಿ ಭಂಗ ಮಾಡಿ ಮತ್ತೆ ವಿದೇಶಿ ವಾತಾವರಣ ನಿರ್ಮಾಣ ಮಾಡುವವರ ವಿರುದ್ಧ ಪುಟಿದೇಳುವುದು ಇಂದು ಅಗತ್ಯವಾಗಿದೆ ಎಂದರು.

ಇಂದು ದೇಶವು ಐಟಿ, ಬಿಟಿ ಕ್ಷೇತ್ರದಲ್ಲಿ ಇಡೀ ಜಗತ್ತಿಗೆ ಸವಾಲೆಸುವಂತಹ ಮಟ್ಟಿಗೆ ತಲುಪಬೇಕಾದರೆ ಮಾಜಿ ಪ್ರಧಾನಿ ದಿ.ರಾಜೀವ ಗಾಂಧಿಜೀ ಅವರ ಶ್ರಯ ಅಮುಲ್ಯವಾಗಿದ್ದು, ಅವರ ಆದರ್ಶ ಇಂದಿನ ಪಿಳಿಗೆ ನಿಜ ಜೀವನದಲ್ಲಿ ಅಳವಡಿಸಿಕೊಂಡು ಇನ್ನಷ್ಟು ಪ್ರಗತಿ ಸಾಧಿಸಲು ಮುಂದೆ ಬರುವಂತೆ ಕರೆ ನೀಡಿದರು.
ಕರ್ನಾಟಕ ಬಾಲವಿಕಾಸ ಅಕಾಡೆಮಿ ನೂತನ ಸದಸ್ಯ ಶಿವಕುಮಾರ ಸ್ವಾಮಿ ಮಾತನಾಡಿ, ರಾಷ್ಟ್ರೀಯ ಸದ್ಭಾವನೆ ಭಂಗ ಮಾಡುವ ದುಷ್ಟ ಶಕ್ತಿ ಒಂದಡೆಯಾದರೆ, ನಮ್ಮ ಯುವ ಶಕ್ತಿಯು ದುಶ್ಚಟಗಳಿಗೆ ಬಲಿಯಾಗಿ ಅಕ್ಕ, ತಂಗಿ, ತಾಯಿ ಎಂಬ ವಾತ್ಸಲ್ಯದಿಂದ ದೂರ ಸರಿದು ಪ್ರಾಣಿಗಳಂತೆ ಅನಾಚಾರಕ್ಕೆ ಕೈ ಹಾಕುತ್ತಿರುವುದು ದಯನಿಯ ಸಂಗತಿಯಾಗಿದ್ದು, ಸಂಸ್ಕಾರಯುತ ಶಿಕ್ಷಣದಿಂದ ಸ್ವಚ್ಛ ಸಮಾಜ ಪುನರ್ ನಿರ್ಮಾಣ ಸಾಧ್ಯ ಎಂದರು.

ರಾಜ್ಯ ಸಂಪನ್ಮೂಲ ವ್ಯಕ್ತಿ ಡಾ.ಆರ್.ಕೆ.ಚಾರಿ ಮಾತನಾಡಿ, ಇಂದು ಯುವ ಶಕ್ತಿ ಪ್ರಬಲ ಶಕ್ತಿಯಾಗಿ ಹೊರ ಹೊಮ್ಮಲು ದೇಶಪ್ರೇಮ, ದೇಶ ಭಕ್ತಿ, ಸ್ವಾಭಿಮಾನ, ಸೇವಾ ಮನೋಭಾವ ದೈನಂದಿನ ಬದುಕಿನುದ್ದಕ್ಕೂ ಬೆಳೆಸಿಕೊಳ್ಳಲು ಕಿವಿ ಮಾತು ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮಾಕಾಂತ ಮೀಸೆ ಮಾತನಾಡಿದರು. ಉಪನ್ಯಾಸಕ ಬಿ.ಎಸ್.ಪೋಲಿಸ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಡಾ.ಅಬ್ದುಲ ಖಲಿಲ ವೇದಿಕೆಯಲ್ಲಿದ್ದರು.

ಆರಂಭದಲ್ಲಿ ಬುದ್ದ ಬಸವ ಅಂಬೇಡ್ಕರ ಯುವಕ ಸಂಘದ ಅಧ್ಯಕ್ಷ ಮಹೇಶ ಗೋರನಾಳಕರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನೆಹರು ಯುವ ಕೇಂದ್ರದ ರಾಷ್ಟ್ರೀಯ ಯುವ ಪಡೆ ಕಾರ್ಯಕರ್ತೆ ಜೈಶ್ರೀ ಮೇತ್ರೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರವಿಕುಮಾರ ಮಂಠಾಳೆ ವಂದನೆ ಸಲ್ಲಿಸಿದರು. ಯುವಕ ಸಂಘದ ಸದಸ್ಯ ಅಮರ ಅಲ್ಲಾಪೂರ, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

 

Sanjevani : News Editor : Mr.Shivkumar Swamy

Leave a Reply

Your email address will not be published. Required fields are marked *