Raksha Bandhan, Brahmakumari

ದುಷ್ಕರ್ಮ ನಿಗ್ರಹಕ್ಕೆ ಈಶ್ವರನ ಮೊರೆ ಹೋಗಿ:

ಅಲಿಮಾ ಬಹೆನ್‍ಜಿ

ಬೀದರ: ಮನುಷ್ಯನು ಸಂಪೂರ್ಣ ಸ್ವಾರ್ಥಿ ಹಾಗೂ ಅಶಾಂತಿಯಿಂದ ಬದುಕು ಸಾಗಿಸುತ್ತಿದ್ದು, ಕಾಮ, ಕ್ರೋಧ, ಲೋಭ, ಮೋಹ, ಮದ ಹಾಗೂ ಮತ್ಸರಗಳಿಂಬ ಹರಿಷಡ್ ವರ್ಣಗಳ ಪಾಶದಲ್ಲಿ ಬಂಧಿತನಾಗಿ, ಇಡೀ ಜೀವನ ನಶ್ವರಗೊಳಿಸಿಕೊಳ್ಳುತ್ತಿದ್ದು, ದುಷ್ಕರ್ಮ ನಿಗ್ರಹಕ್ಕೆ ಪರಮಾತ್ಮನ ಸನ್ನಿಧಿಗೆ ತೆರಳುವಂತೆ ಚನೈ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಬಿ.ಕೆ.ಅಲಿಮಾ ಬಹೆನ್‍ಜಿ ತಿಳಿಸಿದರು.

Raxa Bandhan Prgm In Brahmakumari Ashramನಗರದ ರಾಂಪೂರೆ ಬಡಾವಣೆಯಲ್ಲಿರುವ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಆವರಣದಲ್ಲಿ ರವಿವಾರ ಜರುಗಿದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.

ಇಂದು ನಾವು ನಮ್ಮ ಜೀವನದ ಬಗ್ಗೆ ಚಿಂತೆ ಮಾಡದೆ, ಬೇರೆಯವರ ಆಗು, ಹೋಗೂಗಳ ಬಗ್ಗೆ ತಲೆ ಕೆಡಿಸಿಕೊಂಡು ಜೀವನ ಸಾಮಥ್ರ್ಯ ಬಲಹಿನಗೊಳಿಸಿಕೊಳ್ಳುತ್ತಿದ್ದು, ನಮ್ಮ ಬದುಕಿನ ನಿಯಂತ್ರಣ ಬೇರೆಯವರ ಕೈಗೆ ಕೊಡುವ ಮೂಲಕ ಮೂರ್ಖತನ ಪ್ರದರ್ಶಿಸುತ್ತಿದ್ದೇವೆ ಎಂದ ಅವರು, ನಮ್ಮ ಜೀವನದ ರಿಮೋಟ್ ಭಗವಂತನ ಕೈಗೆ ಕೊಟ್ಟು ಸಂಪೂರ್ಣ ಶಾಂತಿ, ಸಮಾಧಾನಿಯಾಗಿ ಬದುಕುವಂತೆ ಕಿವಿ ಮಾತು ಹೇಳಿದರು.

 

ಸಂಗಾರೆಡ್ಡಿ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಬಿ.ಕೆ ಸುಮಂಗಲಾ ಬಹೆನ್‍ಜಿ ನೇತೃತ್ವ ವಹಿಸಿ ಮಾತನಾಡಿ, ಇಂದು ಟಿ.ವಿ, ಇಂಟರ್‍ನೆಟ್, ವಾಟ್ಸಾಪ್, ಫೇಸ್‍ಬುಕ್‍ಗಳಂತಹ ಬಿರುಗಾಳಿಗೆ ಸಿಕ್ಕು ತಮ್ಮ ಇಡೀ ಜೀವನ ದುಸ್ಥರಗೊಳಿಸಿಕೊಳ್ಳುತ್ತಿದ್ದು, ಆತ್ಮವನ್ನು ಪರಮಾತ್ನನಲ್ಲಿ ಬಂಧಿಸಲು ರಕ್ಷಾ ಬಂಧನ ಬಹುಪಯೋಗಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಸ್ಥಳಿಯ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಬಿ.ಕೆ.  ಸುನಂದಾ ಬಹೆನ್‍ಜಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಜೀವನದಲ್ಲಿ ಪ್ರತಿಯೊಂದು ಕಾರ್ಯ ಮಾಡುವಾಗ ಅದನ್ನು ಪ್ರಯತ್ನಿಸುವುದಕ್ಕಿಂತ ಪ್ರತಿಜ್ಞೆ ಮಾಡಬೇಕೆಂದರು.

ಬಿ.ಕೆ ಪರ್ವತಿ ಬಹೆನ್‍ಜಿ ಕಾರ್ಯಕ್ರಮ ನಿರೂಪಿಸಿ, ವಂದನೆ ಸಲ್ಲಿಸಿದರು.

ನೆರೆದ ಬಿ.ಕೆ ಭಾಯಿ ಹಾಗೂ ಬಹೆನ್‍ಜಿಯವರಿಗೆ ಆಶ್ರಮದಿಂದ ರಾಖಿ ಕಟ್ಟಲಾಯಿತು. ನಂತರ ಪ್ರಸಾದ ಸೇವನೆ ಮಾಡಿ, ಬಾಬಾ ಅವರ ಕೃಪೆಗೆ ಪಾತ್ರರಾದರು.

 

Sanjevani : News Reporter :: Mr.Shivkumar Swamy

Leave a Reply

Your email address will not be published. Required fields are marked *