Pustaka Premi Vidyarthi Balaga

ವಿದ್ಯಾರ್ಥಿಗಳು ಮೊಬೈಲ್ ಪ್ರೇಮಿಯಾಗದೆ,

ಪುಸ್ತಕ ಪ್ರೇಮಿಗಳಾಗಿ


pustaka premi vidyarthi balaga UG prgm1ೀದರ: ವಿದ್ಯಾರ್ಥಿ ದೆಸೆಯಲ್ಲಿ ವಿದ್ಯಾರ್ಥಿಗಳು ಮೊಬೈಲ್ ಪ್ರೇಮಿಯಾಗದೆ, ಒಳ್ಳೆಯ ಪುಸ್ತಕ ಓದಿ, ಉತ್ತಮ ಜ್ಞಾನ ಸಂಪಾದಿಸುವುದರ ಮೂಲಕ ಪುಸ್ತಕ ಪ್ರೇಮಿಯಾಗುವಂತೆ ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪಾಂಡುರಂಗ ಬೆಲ್ದಾರ್ ಹೇಳಿದರು.
ಸೋಮವಾರ ನಗರದ ಕರ್ನಾಟಕ ಕಾಲೇಜು ಅವರಣದಲ್ಲಿ ಪುಸ್ತಕ ಪ್ರೇಮಿ ವಿದ್ಯಾರ್ಥಿ ಬಳಗ ಹಾಗೂ ಕರ್ನಾಟಕ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಪ್ರಾಯೋಜಿತ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಜರುಗಿದ ಆಶು ಭಾಷಣ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಇಂದು ಪಾಲಕರು ಬಾಲ್ಯದಿಂದಲೇ ಮಕ್ಕಳ ಕೈಗೆ ಪುಸ್ತಕ ಕೊಡದೆ, ಮೊಬೈಲ್ ಕೊಟ್ಟು ಅವರ ಜೀವನ ದುಸ್ತರಗೊಳಿಸುತ್ತಿರುವುದು ದಯನಿಯ ಸಂಗತಿ ಎಂದ ಅವರು, ಸ್ಪರ್ಧಾತ್ಮಕ ಜಗತ್ತಿನಲ್ಲಿ ಮೌಲ್ಯಾಧಾರಿತ ಪುಸ್ತಕ ಓದಿ ಮಹಾನ ನಾಗರಿಕರಾಗಿ ಹೊರ ಬರುವಂತೆ ಕರೆ ನೀಡಿದರು.
ಸಾಹಿತಿಗಳು ಮೌಲ್ಯಯುತ ಉತ್ತಮ ಪುಸ್ತಕ ಓದುವುದರಿಂದಲೇ ಪರಿಪೂರ್ಣ ಸಾಹಿತ್ಯ ರಚನೆ ಮಾಡುವಲ್ಲಿ ಯಶಸ್ಸು ಕಂಡಿರುತ್ತಾರೆ. ಅದೇ ರೀತಿ ವಿದ್ಯಾರ್ಥಿಗಳು ಸಹ ಜಾನಾರ್ಜನೆಗೆ ನಿಲುಕುವ ವಿವಿಧ ತರಹದ ಪುಸ್ತಕ ಓದುವ ಮೂಲಕ ಜ್ಞಾನದಾಹ ನೀಗಿಸಿಕೊಂಡು, ಉತ್ತಮ ಕವಿತೆ, ಕಾವ್ಯ, ಕಾದಂಬರಿಗಳನ್ನು ಬರೆದು, ಸಮಾಜಮುಖಿಯಾಗಿ ಹೊರ ಹೊಮ್ಮುವಂತೆ ತಿಳಿಸಿದರು.
ತಾಂತ್ರಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ಸಂಸ್ಕøತಿ ಎಲ್ಲವು ಅಳಿದು ಹೋಗಿ, ಬರೀ ಸ್ವಾರ್ಥದ ಕೊಳ ಭರ್ತಿಯಾಗುತ್ತಿದೆ, ಅಹಂಕಾರ, ದುರಾಲೋಚನೆಗಳಂತಹ ಕೆಟ್ಟ ಮನೋಭಾವ ಸೃಷ್ಟಿಯಾಗುತ್ತಿದ್ದು, ಪುಸ್ತಕವನ್ನೇ ಜೀವಾಳವಾಗಿಸಿಕೊಂಡು ಗುರು ಹಿರಿಯರಿಗೆ ವಿಧೆಯತೆ ತೋರಿ, ಇತರರಿಗೆ ಮಾದರಿಯಾಗಿ ಬದುಕು ರೂಪಿಸಿಕೊಳ್ಳುವಂತೆ ತಿಳಿಸಿದರು.
ಇಂದು ಇಂಟರ್ನೆಟ್ ಹಾವಳಿ ಹೆಚ್ಚಾಗಿ ವಿದ್ಯಾರ್ಥಿಗಳಲ್ಲಿ ಸಂಕುಚಿತ ಮನೋವೃತ್ತಿ ಜಾಸ್ತಿಯಾಗಿ, ಬರೀ ಅಂಕ ಗಳಿಸಿ, ನೌಕರಿ ಗಿಟ್ಟಿಸಿ, ಹೊಟ್ಟೆ ತುಂಬಿಕೊಳ್ಳಲು ಹೊರಟಿರುವ ಪರಿ ನಾಚಿಕೆಗೀಡು ಸಂಗತಿಯಾಗಿದ್ದು, ಪುಸ್ತಕಗಳ ದೀರ್ಘ ಅಧ್ಯಯನಗೈದು, ಬದುಕಿನುದ್ದಕ್ಕೂ ಅದರ ಸದುಪಯೋಗ ಪಡೆದುಕೊಂಡು ಆದರ್ಶ ವ್ಯಕ್ತಿಗಳಾಗುವಂತೆ ಕೋರಿದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಭಾಗೀರಥಿ ಕೊಂಡಾ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಂತ್ರಜ್ಞಾನವೆಂಬ ಬಿಸಿಲಿನಲ್ಲಿ ಪುಸ್ತಕದ ನೆರಳು ಕರಗಿ ಹೋಗುತ್ತಿದೆ, ಸಂಸ್ಕಾರ ಸಂಸ್ಕøತಿಗಳು, ಕಾಣದಾಗಿವೆ, ಎಲ್ಲಿ ನೋಡಿದರಲ್ಲಿ ಬರೀ ಬೊಗಳೆ ಭಾಷಣ, ನಿರರ್ಥಕ ಜೀವನದಲ್ಲಿ ತಲ್ಲೀನರಾಗುತ್ತಿರುವ ಯುವ ಪಡೆ ಸತ್ಯದ ಅವಿಸ್ಕಾರಕ್ಕಾಗಿ ಸನ್ನದ್ದರಾಗಲು ಪುಸ್ತಕವನ್ನೇ ಅಮೃತದ ರೂಪದಲ್ಲಿ ಸ್ವೀಕರಿಸಿದಲ್ಲಿ ಸಮಾಜ ಪರಿವರ್ತನೆ ಸಾಧ್ಯವಾಗಲಿದೆ ಎಂದರು. ಆಂಗ್ಲ ವಿಭಾಗದ ಮುಖ್ಯಸ್ಥ ಪ್ರೊ.ಉಮಾಕಾಂತ ಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ಆಶು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಾದ ವಜ್ರಮಣಿ, ಶಿವಾನಿ ಹಾಗೂ ಬಸವ ಪ್ರಸಾದರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘದ ಜಲ್ಲಾ ಖಜಾಂಚಿ ಸಂಜೀವಕುಮಾರ ಸ್ವಾಮಿ, ಸ್ತಳಿಯ ಉಪನ್ಯಾಸಕಿ ಡಾ.ಧನಲಕ್ಷ್ಮೀ ಪಾಟೀಲ, ಮಹಾನಂದಾ ಮಡಕಿ ಸೇರಿದಂತೆ ಕಾಲೇಜಿನ ಎಲ್ಲ ಸಿಬ್ಬಂದಿಗಳು ಹಾಗೂ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದರು.
ಆರಂಭದಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕ ಡಾ.ಜಗನ್ನಾಥ ಹೆಬ್ಬಾಳೆ ಸರ್ವರನ್ನು ಸ್ವಾಗತಿಸಿದರು. ಕು.ಮೇರಿ ಹಾಗೂ ಕು.ಸುಧಾ ಸ್ವಾಗತ ಗೀತೆ ಹಾಡಿದರು. ಪ್ರೊ.ಸುರೇಖಾ ಬಿರಾದಾರ ಕಾರ್ಯಕ್ರಮ ನಿರೂಪಿಸಿ, ವಂದನೆ ಸಲ್ಲಿಸಿದರು.


 

Leave a Reply

Your email address will not be published. Required fields are marked *