Picnic Group

ಬಸವ ಬಾಂಧವ್ಯ ಬಳಗದಿಂದ ವನಭೋಜನ ಕಾರ್ಯಕ್ರಮ

ಸುಖವಾಗಿ ಬದುಕಲು ಪ್ರೀತಿ ಹಾಗೂ ಬಾಂಧವ್ಯ ಅಗತ್ಯ: ಡಾ.ಚಂದ್ರೇಗೌಡ

Basava Bandhavya Balaga news3ಬೀದರ: ಜೀವನದಲ್ಲಿ ಸುಖವಾಗಿ ಬದುಕಲು ಸಂಪತ್ತು, ಐಷ್ವರ್ಯ, ಶಕ್ತಿ ಹಾಗೂ ಬುದ್ದಿ ಸೀಮಿತವಲ್ಲ, ಬದಲಿಗೆ ಪ್ರೀತಿ, ಸಂಯಮ, ಶಿಷ್ಟಾಚಾರ, ಎಲ್ಲಕ್ಕಿಂತ ಮಿಗಿಲಾಗಿ ಅನ್ಯುನ್ಯ ಬಾಂಧವ್ಯ ಅಗತ್ಯವಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ಚಂದ್ರೇಗೌಡ ಅಭಿಪ್ರಾಯಪಟ್ಟರು.
ಭಾಲ್ಕಿ ತಾಲೂಕಿನ ಮೈಲಾರ್ ಬಳಿ ಇರುವ ಸಂತೋಷಿ ಮಾತಾ ಮಂದಿರದ ಅವರಣದಲ್ಲಿ ರವಿವಾರ ಬಸವ ಬಾಂಧವ್ಯ ಬಳಗ ಬೀದರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವನಭೋಜನ ಹಾಗೂ ದಂಪತಿಗಳಿಗಾಗಿ ವಿವಿಧ ಕಾರ್ಯಚಟುವಟಿಕೆ ಹಮ್ಮಿಕೊಂಡು, ಅದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡುತ್ತಿದ್ದರು.


ಇಂದು ಮನುಷ್ಯನು ದುಡ್ಡಿನ ಮದದಲ್ಲಿ ನೆಮ್ಮದಿ ರಹಿತ ಹಾಗೂ ಅರ್ಥಹೀನ ಬದುಕು ಸಾಗಿಸುತ್ತದ್ದಾನೆ. ಆ ನಿಟ್ಟಿನಲ್ಲಿ ದಾಂಪತ್ಯದ ಅರ್ಥ ಗೊತ್ತಿರಲಾರದೆ, ಪಾಶ್ಚಾತ್ಯರಂತೆ ಅನಾಗರಿಕ ಸಂಸ್ಕøತಿಯಲ್ಲಿ ತೇಲಿ, ಒಳ್ಳೆಯ ಜೀವನ ಕೆಟ್ಟದನ್ನಾಗಿ ಪರಿವರ್ತಿಸಿಕೊಳ್ಳುತ್ತಿದ್ದಾನೆ. ಸದ್ಯಕ್ಕೆ ನಮ್ಮ ಜೀವನ ಅಧರ್ಮದಿಂದ ಕೂಡಿದ 9ರ ಮಗ್ಗಿಯಂತಾಗಿದೆ. ಇಂತಹ ಬದುಕಿಗೆ ಮಂಗಲ ಹಾಡಲು ಬಸವ ಬಾಂಧವ್ಯ ಬಳಗದವರು ನಡೆಸಿಕೊಂಡು ಬರುತ್ತಿರುವ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಹಿರಿಯ ಸಾಹಿತಿ ಎಂ.ಜಿ.ದೇಶಪಾಂಡೆ ಮಾತನಾಡಿ, ಜೀವನದಲ್ಲಿ ಚಾರಿತ್ರ್ಯೆವಂತರಾಗಿ ಬಾಳಬೇಕು. ಒಂದು ಸಲ ಚಾರಿತ್ರ್ಯೆ ಹಾಳಾದರೆ, ಪೂನಃ ಎಂತಹ ಒಳ್ಳೆಯ ಕೆಲಸ ಮಾಡಿದರೂ ಅದು ಬದಲಾಗಲು ಅಸಾಧ್ಯ. ಜೀವನದಲ್ಲಿ ಮನಸ್ಸನ್ನು ಬಂಡವಾಳವಾಗಿಸಿಕೊಂಡು ಬದುಕಿದಲ್ಲಿ, ಸಾರ್ಥಕತೆ ಸಾಧ್ಯವಾಗಿದೆ ಎಂದರು.
ಹಂಶಕವಿ ಮಾತನಾಡಿ, ನಮ್ಮ ದೇಶ ಇಡೀ ಜಗತ್ತಿಗೆ ಸಂಸ್ಕøತಿ, ಸಂಸ್ಕಾರ ಕಲಿಸುವ ಚೊಚ್ಚಲ ದೇಶವಾಗಿದೆ. ಜಗತ್ತಿನ ಮೊಟ್ಟ ಮೊದಲ ಸಂಸತ್ತು ನಮ್ಮ ಜಿಲ್ಲೆ ಬಸವಕಲ್ಯಾಣದಲ್ಲಿ, ಮೊಟ್ಟ ಮೊದಲ ಪ್ರಧಾನಿ ಆದವರು ನಮ್ಮ ಜಿಲ್ಲೆಯ ಬಸವಣ್ಣನವರು, ಜಗತ್ತಿನ ಕಾನೂನು ಪಿತಾಮಹಾ ಎನಿಸಿಕೊಂಡ ವಿಜ್ಞಾನೇಶ್ವರರು ಭಾಲ್ಕಿ ತಾಲೂಕಿನ ಮಾಸಿಮಾಡ ಗ್ರಾಮದವರು. ಇಂತಹ ಅಭುತಪೂರ್ಣ ವೈಶಿಷ್ಟೆಯುಳ್ಳ ನಮ್ಮ ಜಿಲ್ಲೆಯ ಬಗ್ಗೆ ಹೆಮ್ಮೆ ಪಡಬೇಕು. ನಮ್ಮ ಸಂಸ್ಕಾರ ಭರಿತ ಬದುಕಿನಿಂದ ಜೀವನ ಸುಂದಗೊಳಿಸಿಕೊಂಡು ಆದರ್ಶ ದಂಪತಿಗಳಾಗಿ, ಇತರರಿಗೆ ಮಾರ್ಗದರ್ಶಿಯಾಗಿ ಬದುಕುವಂತೆ ಕರೆ ಕೊಟ್ಟರು.

Basava Bandhavya Balaga news2
ಹಿರಿಯರಾದ ಶಾಮರಾವ ಕೊಳಾರೆ ಮಾತನಾಡಿದರು, ಸಂತೋಷಿ ಮಾತಾ ಮಂದಿರದ ಅರ್ಚಕ ಸಂತೋಷ ಪೂಜಾರಿ ವೇದಿಕೆಯಲ್ಲಿದ್ದರು. ಬಸವ ಬಾಂಧವ್ಯ ಬಳಗದ ಅಧ್ಯಕ್ಷ ಮಲ್ಲಿಕಾರ್ಜುನ್ ವೈರಾಗೆ ಅಧ್ಯಕ್ಷತೆ ವಹಿಸಿದ್ದರು. ಶಂಕರರಾವ ಸಜ್ಜನಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ಆಟೋಟಗಳಾದ ಸಿಹಿ ತಿನ್ನುವ ಆಟ, ಲಿಂಬೆ ಹಣ್ಣಿನ ಆಟ, ನೀರಿನ ಮೇಲೆ ಸಣ್ಣ ಬಾಲ್ ನಡೆಸುವುದು, ಮೇಣಬತ್ತಿ ಹಚ್ಚುವುದು, ಡಬ್ಬಿ ಬೀಸಿ,  ನಂಬರ್ ಶೇಖರಿಸುವುದು, ಲಿಫಾಪಾ ಬದಲಾಯಿಸಿಕೊಳ್ಳುವುದು, ಕೊನೆಗೆ ಆದರ್ಶ ದಂಪತಿ ಸ್ಪರ್ಧೆ ಇತ್ಯಾದಿ ಕ್ರೀಡೆಗಳನ್ನು ನಡೆಸಿ, ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮೀ, ಡಾ.ಆರ್.ಕೆ.ಚಾರಿ, ಪ್ರವಿಣಾ, ವಿನಯಕುಮಾರ ಬಿರಾದಾರ, ಸತ್ಯವತಿ, ಶಿವಕುಮಾರ ಸ್ವಾಮಿ, ಕಲ್ಪನಾ, ಮಹೇಶ ಗೋರನಾಳಕರ್, ಸೇರಿದಂತೆ ಜಿಲ್ಲೆಯ ನಾಲ್ವತ್ತಕ್ಕೂ ಅಧಿಕ ದಂಪತಿಗಳು ಉಪಸ್ಥಿತರಿದ್ದರು.
ಆರಂಭದಲ್ಲಿ ಅಕ್ಕಮಹಾದೇವಿ ಸ್ವಾಮಿ ವಚನ ಗಾಯನ ನಡೆಸಿಕೊಟ್ಟರು. ಮಹೇಶ ಮಜಗೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಬಿರಾದಾರ ವಂದನೆ ಸಲ್ಲಿಸಿದರು. ಶ್ರೀದೇವಿ ಬಿರಾದಾರ ದಂಪತಿಗಳಿಗಾಗಿ ಕಾರ್ಯಚಟುವಟಿಕೆ ನಡೆಸಿಕೊಟ್ಟರು.

 

Organizers Committe :

Baswaraj Biradar, Mahesh Majge, Mallikarjun Vairagye, Sajjansheety, R.K.Chari, Vinay Biradar

Leave a Reply

Your email address will not be published. Required fields are marked *