Pandit Deendayal Birth Anniversary

ಯುವಜನರಲ್ಲಿ ದೇಶಭಕ್ತಿ ಬಲಾಢ್ಯಗೊಳ್ಳಲು

ಉಪಾಧ್ಯಾಯರ ಕೊಡುಗೆ ಅಪಾರ

Deen Dayan Upadhyay 99 th Birth Anniversary 3ಬೀದರ: ಇಂದು ಯುವಜನರಲ್ಲಿ ದೇಶ ಭಕ್ತಿ, ದೇಶಾಭಿಮಾನ ಕಡಿಮೆಯಾಗಿ, ಪಾಶ್ಚಾತ್ಯರ ಅನುಕರಣೆಗೆ ಮಾರು ಹೋಗಿ, ಅರ್ಥಹೀನ ಬದುಕು ಸಾಗಿಸುತ್ತಿರುವ ಹಿನ್ನಲೆಯಲ್ಲಿ ಪಂಡಿತ ದೀನದಯಾಳ ಉಪಾಧ್ಯಾಯರ ಕೊಡುಗೆ ಸ್ಮರಿಸಿ, ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಮುನ್ನಡೆಯುವಂತೆ ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾ ಮಂಡಳದ ಅಧ್ಯಕ್ಷೆ ಶಕುಂತಲಾ ಕಾಶಿನಾಥ ಬೆಲ್ದಾಳೆ ಕರೆ ನೀಡಿದರು.
ಹುಮನಾಬಾದ್ ತಾಲೂಕಿನ ಮನ್ನಾಯಿಖೆಳ್ಳಿ ಕ್ರಾಸ್ ಬಳಿ ಇರುವ ಚಾಲುಕ್ಯ ಪದವಿ ಪೂರ್ವ ಮಹಾವಿದ್ಯಾಲಯದ ಅವರಣದಲ್ಲಿ ಭಾರತ ಸರ್ಕಾರದ ನೆಹರು ಯುವ ಕೇಂದ್ರ ಬೀದರ್, ಭಾರತ Deen Dayan Upadhyay 99 th Birth Anniversary 4ಯುತ್ ವೆಲಫೇರ್ ಏಜ್ಯುಕೇಶನ್ ಐಂಡ್ ರೂರಲ್ ಡೆವಲಪಮೆಂಟ್ ಸೊಸೈಟಿ ಮತ್ತು ಚಾಲುಕ್ಯ ಪದವಿ ಪೂರ್ವ ಮಹಾವಿದ್ಯಾಲಂiÀiಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪಂಡಿತ ದೀನದಯಾಳ ಉಪಾಧ್ಯಾಯರ 99ನೇ ಜನ್ಮದಿನಾಚರಣೆ ನಿಮಿತ್ಯ ಉಪಾಧ್ಯಾಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಕ್ಕಳಿಗೆ ಸಸಿ ವಿತರಿಸುವ ಮುಲಕ ಉದ್ಘಾಟಿಸಿ ಮಾತನಾಡಿದರು.

ಇಂದು ದೇಶದಲ್ಲಿ ಸ್ವಚ್ಛ ಭಾರತ ಮೀಷನ್ ಅಡಿ ನಡೆಯುತ್ತಿರುವ ಕಾರ್ಯಕ್ರಮಗಳು ಉಪಾಧ್ಯಾಯರ ಗುರಿ ಹಾಗೂ ಉದ್ದೇಶಗಳಾಗಿದ್ದು, ಅವರ ತ್ಯಾಗ ಹಾಗೂ ಬಲಿದಾನ ಇಡೀ ಮನುಕುಲವೇ ಹುಬ್ಬೇರಿಸುವಂತಿತ್ತು ಎಂದ ಅವರು, ಅವರ ಆಲೋಚನೆಗಳು ಹಾಗೂ ಸಂದೇಶಗಳು ಪಠ್ಯದ ರೂಪದಲ್ಲಿ ಯುವ ವಿದ್ಯಾರ್ಥಿಗಳ ಕೈಸೇರಿಸುವ ಕೆಲಸ ಉಭಯ ಸರ್ಕಾರಗಳು ಮಾಡುವಂತೆ ಕರೆ ಕೊಟ್ಟರು.

ಜೀವನದಲ್ಲಿ ಗುರಿ ನಮ್ಮ ಮುಖ್ಯವಾದ ಉಸಿರಾಗಿಟ್ಟುಕೊಂಡು, ಅದನ್ನು ಪರಿಪೂರ್ಣ ಮಾಡುವ ಮೂಲಕ ಸಮಾಜದಲ್ಲಿ ಹೆಸರು ಮಾಡಬೇಕು ಎಂದ ಅವರು, ನಮ್ಮ ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ವಯಸ್ಸಾಗದ ರೀತಿ, ಅನ್ಯುನ್ಯವಾಗಿ ಬದುಕಬೇಕೆಂದು ಬೆಲ್ದಾಳೆ ತಿಳಿಸಿದರು.

ಭಾರತಿಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಶಿವಯ್ಯ ಸ್ವಾಮಿ ಮುಖ್ಯ ಅತಿಥೀಗಳಾಗಿ ಮಾತನಾಡಿ, ಸ್ವರಾಜ್ಯದ ಕನಸ್ಸು ಕಂಡ ಮೊದಲ ಮೂರ್ತಿಯೇ ಪಂಡಿತ ದೀನದಯಾಳ ಉಪಾಧ್ಯಾಯರು. ಪ್ರಜಾಪ್ರಭುತ್ವ ಬಲಶಾಲಿಯಾಗಬೇಕೆಂಬ ಧೃಡ ಸಂಕಲ್ಪ ಹೊತ್ತಿದವರು. ಸಮಾಜದಿಂದ ಪಡೆದುದನ್ನು ಪುನಃ ಸಮಾಜಕ್ಕೆ ನೀಡುವ ನಮ್ಮ ಕೊಡುಗೆ ಮಾದರಿ ಪ್ರಾಯವಾಗಿರಬೇಕೆಂದು ತಿಳಿಸಿದರು.

ರಾಜೀವ ಗಾಂಧಿ ಪರಿಸರ ಪ್ರಶಸ್ತಿ ಪುರಸ್ಕøತ ಶೈಲೇಂದ್ರ ಕಾವಡಿ ಮಾತನಾಡಿ, ಪಂಡಿತ ದೀನದಯಾಳ ಉಪಾಧ್ಯಾಯರು ಒಬ್ಬ ಸುಸಂಸ್ಕøತ ಪರಿಸರ ತಜ್ಞರಾಗಿದ್ದು, ಅವರ ಹಸಿರು ಕ್ರಾಂತಿಯ ತಿರುಳು ಇಂದಿನ ಪರಿಸರ ಪ್ರೇಮಿಗಳಿಗೆ ಸ್ಪೂರ್ತಿದಾಯಕವಾಗಿದ್ದು, ಸ್ವಚ್ಛ ಭಾರತದ ಧೈಯ ಸಾಕಾರಗೊಳ್ಳಲು ಪ್ರತಿಯೊಬ್ಬರ ಮನೆಗಳಲ್ಲಿ ತುಳಸಿ ಸಸಿ ನೆಟ್ಟು ಸಾಂಕ್ರಾಮಿಕ ರೋಗ ಮುಕ್ತ ಸಮಾಜ ನಿರ್ಮಾಣವಾಗಲಿ ಎಂದು ಹಾರೈಸಿದರು. ಚಾಲುಕ್ಯ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ವೀರಣ್ಣ ಮಡಿವಾಳ ಅಧ್ಯಕ್ಷತೆ ವಹಿಸಿದರು. ಉಪನ್ಯಾಸಕಿ ಸುನಿತಾ ಹಳಿಖೇಡ್ ವೇದಿಕೆಯಲ್ಲಿದ್ದರು.

ಆರಂಭದಲ್ಲಿ ವಿದ್ಯಾರ್ಥಿನಿ ಮಮಿತಾ ನಾಗಪ್ಪ ಪ್ರಾರ್ಥಿಸಿದರು. ಭಾರತ ಯುತ್ ವೆಲಫೇರ್ ಏಜ್ಯುಕೇಶನ್ ಐಂಡ್ ರೂರಲ್ ಡೆವಲಪಮೆಂಟ್ ಸೊಸೈಟಿ ಅಧ್ಯಕ್ಷ ಶಿವಕುಮಾರ ಸ್ವಾಮಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಸಂಜೀವಕುಮಾರ ಹೊಸಮನಿ ನಿರೂಪಿಸಿದರೆ, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಪಿ.ಶ್ರೀನಿವಾಸ್ ವಂದಿಸಿದರು.

ಕಾರ್ಯಕ್ರಮದಲ್ಲಿ ಸ್ಥಳಿಯ ಯುವ ಮುಖಂಡರು, ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿದ್ದರು.

Leave a Reply

Your email address will not be published. Required fields are marked *