Navratri Program by HawgiLingeshwar

ಭಗವಂತನ ಅನುಗ್ರಹ ಪ್ರಾಪ್ತಿಗಾಗಿ

ನವರಾತ್ರಿ-ಶಿವರಾತ್ರಿ ಆಚರಿಸಿ:

ಹಾವಗಿಲಿಂಗೇಶ್ವರ ಶ್ರೀ

prachavana prgm in Dhannura(H) (1)ಬೀದರ: ಭಗವಂತನ ಅನುಗ್ರಹ ಪ್ರಾಪ್ತಿ ಮಾಡಿಕೊಳ್ಳಲು ಕಡ್ಡಾಯವಾಗಿ ನವರಾತ್ರಿ ಹಾಗೂ ಮಹಾ ಶಿವರಾತ್ರಿ ಆಚರಿಸುವಂತೆ ಶಿವಣಿ ಹಾಗೂ ಹಲಬರ್ಗಾ ಶ್ರೀ ರಾಚೋಟೇಶ್ವರ ವಿರಕ್ತ ಮಠದ ಪೀಠಾಧಿಪತಿ ಪೂಜ್ಯ ಹಾವಗಿಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಭಾಲ್ಕಿ ತಾಲೂಕಿನ ಧನ್ನೂರು(ಹೆಚ್) ಗ್ರಾಮದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನವರಾತ್ರಿ ಮಹೋತ್ಸವದ ನಿಮಿತ್ಯ ನಾಲ್ಕನೇ ದಿವಸದ ಪ್ರವಚನ ಕಾರ್ಯಕ್ರಮದಲ್ಲಿ ದಿವ್ಯ ನೇತೃತ್ವ ವಹಿಸಿ ಆಶಿರ್ವಚನ ನೀಡಿದರು.

ನವರಾತ್ರಿ ಹಾಗೂ ಶಿವರಾತ್ರಿಗಳು ಸೇರಿ ಒಟ್ಟು ದಶ ದಶರಾತ್ರಿÀಗಳಾಗುತ್ತಿದ್ದು, ಆ ಸಮಯದಲ್ಲಿ ಭಗವಂತನು ಧರೆಗಳಿದು ಬಂದು, ಭಕ್ತರ ಕಷ್ಟಗಳಿಗೆ ಸ್ಪಂದಿಸಿ, ದುಷ್ಟರ ನಿಗ್ರಹ ಮಾಡುತ್ತಾನೆಂಬ ಪ್ರತೀತಿ ಇದ್ದು, ಈ ಪವಿತ್ರ ಸನ್ನಿವೇಶದಲ್ಲಿ ಭಕ್ತರು ಗುರುವಿನ ಮಾರ್ಗದರ್ಶನ ಪಡೆದು ಭಗವಂತನ ಅನುಗ್ರಹಕ್ಕೆ ಅಣಿಯಾಗುವಂತೆ ಕರೆ ನೀಡಿದರು.

ಜೀವನದಲ್ಲಿ ಪ್ರತಿಯೊಬ್ಬರು ಸುಖ, ಶಾಂತಿ ಹಾಗೂ ನೆಮ್ಮದಿ ಬಯಸುವುದು ಸಹಜ, ಅದರ ಪ್ರಾಪ್ತಿಗಾಗಿ ಗುರು ಕಾರುಣ್ಯ ಸಂಪಾದಿಸಬೇಕು. ಗುರುವಿನ ಗುಲಾಮನಾದಾಗ ಭಕ್ರರಿಗೆ ಮುಕ್ತಿ ಸಾಧ್ಯವಿದ್ದು, ಪ್ರವಚನ, ಕೀರ್ತನ, ಭಜನೆ ಇತ್ಯಾದಿಗಳಲ್ಲಿ ಕಿಂಚೋತ್ತು ಕಾಲಾವಕಾಶ ಕಲ್ಪಿಸಿಕೊಂಡರೆ, ಮನಸ್ಸು ಶುದ್ಧವಾಗಿ, ಮನ ಪರಿವರ್ತನೆಯಾಗಿ ಜೀವನ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದರು.

ದೇವಣಿಯ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿದ್ಯ ವಹಿಸಿ ಆಶಿರ್ವಚನ ನೀಡಿ, ಅರ್ಚನೆ, ಅರ್ಪಣೆ ಹಾಗೂ ಅನುಭವಗಳು ನಮ್ಮ ಜೀವನದಲ್ಲಿ ಹೊಸ ಬದಲಾವಣೆ ತರಬಲ್ಲ ಸಾಧನಗಳಾಗಿದ್ದು, ಅವನ್ನು ಬದುಕಿನುದ್ದಕ್ಕೂ ಅರ್ಥಪೂರ್ಣವಾಗಿ ಬಳಿಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.

ನಾವಿಂದು ಆಸ್ತಿ, ಆಶೆ ಹಾಗೂ ಆಸ್ತಿತ್ವದ ಹಿಂದೆ ಬಿದ್ದು, ತನ ತನ ಮರೆಯುತ್ತಿದ್ದೇವೆ. ಅವುಗಳ ಸದುಪಯೋಗವಾಗಲು ದಿನ ನಿತ್ಯ ಪ್ರವಚನ, ಧ್ಯಾನ ಹಾಗೂ ಶಿವಾನುಭವ ಆಲಿಸಿ, ಬದುಕಿನಲ್ಲಿ ರೂಢಿಸಿಕೊಂಡು ಪರಿಪೂರ್ಣ ವ್ಯಕ್ತಿತ್ವ ವಿಕಾಸ ಮಾಡಿಕೊಳ್ಳುವಂತೆ ತಿಳಿಸಿದರು.
ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯ ಶಿವಕುಮಾರ ಸ್ವಾಮಿ ಮಾತನಾಡಿ, ಸಂಸ್ಕøತಿ ಹಾಗೂ ಸಂಸ್ಕಾರವನ್ನು ಇಡೀ ಜಗತ್ತಿಗೆ ಪರಿಚಯಿಸಿದ ಭವ್ಯ ಪರ್ಯೆಂಪರೆಯುಳ್ಳ ದೇಶ ನಮ್ಮದು. ಈ ನೆಲದಲ್ಲಿ ಹುಟ್ಟಿರುವುದು ನಮ್ಮ ಪೂಣ್ಯ, ಆದರೆ ಇಂದು ಅದೇ ನೆಲವನ್ನು ಸ್ಮಶಾನ ಮಾಡಲು ಹೊರಟಿರುವ ಕ್ರಮ ದಯನಿಯ ಸಂಗತಿಯಾಗಿದ್ದು, ಈ ಪೀಡೆ ತೊಲಗಬೇಕಾದರೆ, ಪ್ರತಿಯೊಂದು ಗ್ರಾಮಗಳಲ್ಲಿ ಪೂಜ್ಯರ, ಸಾಧು ಸನ್ಯಾಸಿಗಳ ವಾಸ್ತವ್ಯ ಜರೂರಿ ಇದ್ದು, ನಿರಂತರ ಜಪ, ತಪ, ಧ್ಯಾನ ಇತ್ಯಾದಿಗಳನ್ನು ಮೈಗೂಡಿಸಿಕೊಳ್ಳಲು ಯುವ ಪ್ರಪಂಚ ಸನ್ನದ್ದರಾಗಲು ಕೋರಿದರು.

ಹುಮನಾಬಾದ್ ತಾಲೂಕು ಅಖಿಲ ಭಾರತಿಯ ವೀರಶೈವ ಮಹಾಸಭೆ ಅಧ್ಯಕ್ಷ ಜಗನ್ನಾಥ ಹಲಮಡಗೆ ಹಾಗೂ ಜಿಲ್ಲಾ ಚೆಸ್ ಅಸೋಶಿಯಶನ್ ಅಧ್ಯಕ್ಷ ವಿನಯಕುಮಾರ ಬಿರಾದಾರ ಮಾತನಾಡಿದರು. ಭಾರತಿಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಶಿವಯ್ಯ ಸ್ವಾಮಿ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಗುಂಡೇರಾವ ಪಾಟೀಲ, ರಮೇಶ ಬಾವಗೆ ಹಾಗೂ ಗುರಲಿಂಗಯ್ಯ ಸ್ವಾಮಿ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದರು.

ಆರಂಭದಲ್ಲಿ ಶ್ರೀಕಾಂತ ಸ್ವಾಮಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *