National Youth Scientist Award

ಚಾಲಕನ ಮಗನಿಗೆ ದಕ್ಕಿತು ರಾಷ್ಟ್ರೀಯ ಯುವ ವಿಜ್ಞಾನಿ ಪಟ್ಟ

National Youth Scientist Award To Dr. Vijaykumar Kurnallikarಬೀದರ: ನಗರದ ನಾವದಗೇರಿ ಬಡಾವಣಿಯ ಚಾಲಕ ವೃತ್ತಿಯಲ್ಲಿರುವ ದಶರಥ ಕುರನಳ್ಳಿಕರ್ ಎಂಬುವವರ ಮಗ ಡಾ.ವಿಜಯಕುಮಾರ ಕುರನಳ್ಳಿಕರ್ ಅವರಿಗೆ ರಾಷ್ಟ್ರೀಯ ಯುವ ವಿಜ್ಞಾನಿ ಪ್ರಶಸ್ತಿ ಲಭಿಸಿದೆ.
ಮಧ್ಯ ಪ್ರದೇಶದ ಗ್ವಾಲಿಯರ್ ನಗರದಲ್ಲಿ ಇತ್ತಿಚೀಗೆ ಆಸ್ತಾ ಫೌಂಡೇಶನ್ ವತಿಯಿಂದ ಜರುಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇವರಿಗೆ ಯುವ ವಿಜ್ಞಾನಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಡಾ.ಕುರನಳ್ಳಿಕರ್ ಅವರು ಸಾಮಾನ್ಯ ಕುಟುಂಬದಲ್ಲಿ ಜನಿಸಿದರೂ ಅನೇಕ ಸಂಶೋಧನೆಗಳನ್ನು ಮಾಡುವ ಮೂಲಕ ಜನಪ್ರಿಯರಾಗಿರುವರು. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ, ಜನ ಮೆಚ್ಚುಗೆಗೆ ಪಾತ್ರರಾದ ಇವರು, ಪ್ರಸ್ತುತದಲ್ಲಿ ರಾಯಚುರು ಕೃಷಿ ವಿಶ್ವವಿದ್ಯಾಲಯದಲ್ಲಿ ಬೀಜ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಸಂಶೋಧಕರಾಗಿ ಸೇವೆ ಸಲ್ಲಿಸುತ್ತಿರುವರು. ಇವರ ಇಂತಹ ಅಮೋಘ ಸಾಧನೆಗೆ ಕರುಣಾಮಯ ಯುವಕ ಸಂಘದ ಅಧ್ಯಕ್ಷ ರಾಜಕುಮಾರ ಹೆಬ್ಬಾಳೆ, ನಾವದಗೇರಿ ನಿವಾಸಿಗಳಾದ ಓಂಕಾರ ಬಜಾರೆ, ಸಂಗಪ್ಪ ಬೀಕ್ಲೆ, ನಾಗನಾಥ ಮಾನೆ, ವಿನೋದ ಹೊನ್ನಾ, ಸೇರಿದಂತೆ ಬಡಾವಣೆಯ ಹಲವರು ಹರ್ಷವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.


 

Leave a Reply

Your email address will not be published. Required fields are marked *