National Award

ನ.21ರಂದು ಮುಖ್ಯಮಂತ್ರಿ ಚಂದ್ರು ಅವರಿಗೆ ಗೋ.ರು.ಚ ರಾಷ್ಟ್ರೀಯ ಪ್ರಶಸ್ತಿ

DSC_3922ಬೀದರ: ಈ ತಿಂಗಳ 21ರಂದು ನಗರದ ರಂಗಮಂದಿರದಲ್ಲಿ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದಿಂದ ಡಾ.ಮುಖ್ಯಮಂತ್ರಿ ಚಂದ್ರು ಅವರಿಗೆ ಮೊದಲ ವರ್ಷದ ಡಾ.ಗೋರುರು ಚನ್ನಬಸಪ್ಪ ಅವರ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುವುದು, ಪ್ರಶಸ್ತಿ ಜೊತೆಗೆ 51.000 ರಯಪಾಯಿ ನಗದು ಹಾಗೂ ಜಗತ್‍ಪ್ರಸಿದ್ಧ ಬಿದ್ರಿ ಫಲಕ ನೀಡಿ ಗೌರವಿಸಲಾಗುವುದು ಹಾಗೂ ಬೀದರ ಜಿಲ್ಲೆಯ ಒಟ್ಟು 30 ಭಜನಾ ತಂಡಗಳಿಂದ ಬೀದರ ಜಿಲ್ಲಾ ಭಜನಾ ಉತ್ಸವ ಆಯೋಜಿಸಲಾಗಿದೆ ಎಂದು ಕರ್ನಾಟಕ ಬರಹಗಾರರ ಹಾಗೂ ಕಲಾವಿದರ ಸಂಘದ ಅಧ್ಯಕ್ಷ ಡಾ.ಜಗನ್ಮಾಥ ಹೆಬ್ಬಾಳೆ ತಿಳಿಸಿದರು.


ನಗರದ ಕರ್ನಾಟಕ ಸಾಹಿತ್ಯ ಸಂಘದ ಅವರಣದಲ್ಲಿ ಇಂದು ಕರೆದ ಪತ್ರಿಕಾ ಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.
ಈ ವರ್ಷದಿಂದ ಸಂಘವು ಪ್ರತಿ ವರ್ಷ ಇಡೀ ದೇಶದಲ್ಲಿ ಗಣನಿಯ ಸೇವೆ ಸಲ್ಲಿಸುವ ರಾಷ್ಟ್ರ ಮಟ್ಟದ ಹೆಸರಾಂತ ಕಲಾವಿದರು, ಸಾಹಿತಿಗಳು ಒಟ್ಟಾರೆ ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿಗಳಿಗೆ ಈ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುವುದು. ಗೋರುಚ ಅವರು ತಮ್ಮ ಇಡೀ ಆಸ್ತಿಯನ್ನು ನಾಡಿಗೆ ಹಸ್ತಾಂತರಿಸಿದ ಮಹಾನ ಪರೋಪಕಾರಿ. ಅವರು ತಮ್ಮ ಇಡೀ ಜೀವನವನ್ನೆ ನಾಡು ನುಡಿಗಾಗಿ ಸಮರ್ಪಿಸಿದ ಧೀಮಂತಿಕೆಯನ್ನು ಪರಿಗಣಿಸಿ ಅವರ ಹೆಸರಿನಲ್ಲಿ ಈ ಪ್ರಶಸ್ತಿ ಸ್ತಾಪಿಸಲಾಗಿದೆ ಎಂದ ಅವರು, ಡಾ.ಮುಖ್ಯಮಂತ್ರಿ ಚಂದ್ರು ಅವರು ತಮ್ಮ ಅಧಿಕಾರದ ಅವಧಿಯಲ್ಲಿ ನಾಡಿನ ಸಾವಿರಾರು ಕಲಾವಿದರಿಗೆ, ಸಾಹಿತಿಗಳಿಗೆ ಪ್ರೋತ್ಸಾಹಿಸುವ ಮೂಲಕ ವಿಶ್ವ ವಿಖ್ಯಾತಿ ಪಡೆದ ಹಿನ್ನಲೆಯಲ್ಲಿ ಅವರಿಗೆ ಈ ವರ್ಷದ ಪ್ರಶಸ್ತಿ ಕೊಡಲು ನಿರ್ಧರಿಸಲಾಗಿದೆ ಎಂದು ಡಾ.ಹೆಬ್ಬಾಳೆ ಹೇಳಿದರು.

ಅಂದು ನಡೆಯುವ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಪೂಜ್ಯ.ಡಾ.ಬಸವಲಿಂಗ ಪಟ್ಟದ್ದೇವರು ಸಾನಿಧ್ಯ ವಹಿಸಿದ್ದರು. ಬೆಂಗಳೂರಿನ ಅಖಿಲ ಭಾರತ ಧರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಗೋ.ರು ಚನ್ನಬಸಪ್ಪ ಉತ್ಸವದ ಉದ್ಘಾಟಿಸಲಿದ್ದು, ಹಾವೇರಿ ಗೊಟಗೊಡು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಚನ್ನಪ್ಪಗೌಡ ಪ್ರಶಸ್ತಿ ಪ್ರದಾನ ಮಾಡುವರು. ರಾಜ್ಯಸಭಾ ಸದಸ್ಯರಾದ ಬಸವರಾಜ ಪಾಟೀಲ ಸೇಡಂ, ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಸದ ಭಗವಂತ ಖುಬಾ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ವಿವಿ.ರಾಜಾರಾಮ್ ಅಭಿನಂದನಾ ನುಡು ನುಡಿಯಲಿದ್ದಾರೆ. ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಪದ್ಮಾ ಮುಖ್ಯಮಂತ್ರಿ ಚಂದ್ರು ಹಾಗೂ ನಾಡಿನ ಹಿರಿಯ ಸಾಹಿತಿ ಡಾ.ರಂಗಾರೆಡ್ಡಿ ಕೋಡಿರಾಂಪೂರ್ ಅತಿಥಿಗಳಾಗಿ ಭಾಗವಹಿಸುವರು. ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಪ್ರೋ.ವಿರೇಂದ್ರ ಸಿಂಪಿ ಅವರಿಗೆ ಈ ಸಂದರ್ಭದಲ್ಲಿ ವಿಶೇಷ ಸನ್ಮಾನ ಮಾಡಲಾಗುವುದು. ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸಗಥೆಯ ಅಧ್ಯಕ್ಷ ಡಾ.ಬಸವರಾಜ ಪಾಟೀಲ ಅಷ್ಟೂರ್, ಹಾಗೂ ಬೀದರ್ ಜಿಲ್ಲಾ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಡಾ.ಚನ್ನಬಸಪ್ಪ ಹಾಲಹಳ್ಳಿ ಗೌರವ ಅತಿಥಿಗಳಾಗಿ, ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ವಿ.ಜೂಜಾ, ಅಕ್ಕಮಹಾದೇವಿ ಕಾಲೇಜಿನ ಪ್ರಾಚಾರ್ಯ ಪ್ರೋ.ಶಿವನಾಥ ಪಾಟೀಲ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಉಪಸ್ಥಿತರಿರುವರು ಎಂದರು.

ಈ ಸಂದರ್ಭದಲ್ಲಿ ಜಿಲ್ಲೆಯ ಹೆಸರಾಂತ ಭಜನಾ ತಂಡಗಳಾದ ಬ.ಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ರೇವಣಸಿದ್ದಪ್ಪ ಹಾಗೂ ಸಂಗಡಿಗರಿಂದ, ಬೇಲೂರಿನ ಜೈ ಭವಾನಿ ಭಜನಾ ತಂಡ, ಬಸವ ಕಲ್ಯಾಣದ ನಿಲಂಬಿಕಾ ಭಜನಾ ತಂಡ, ಬೀದರ ತಾಲೂಕಿನ ಜನವಾಡಾ ಗ್ರಾಮದ ಜೈ ಬಜರಂಗ ಬಲಿ ಭಜನಾ ತಂಡ, ಪ್ರತಾಪನಗರದ ಜೈ ಭವಾನಿ ಭಜನಾ ತಂಡ, ಭಾಲ್ಕಿ ಹಿರೇಮಠ ಗಲ್ಲಿಯ ಅಕ್ಕನ ಬಳಗ ಭಜನಾ ತಂಡ, ಭಾಲ್ಕಿಯ ಖಡಕೇಶ್ವರ ಭಜನಾ ತಂಡ, ಭಾಲ್ಕಿಯ ರೇವಣಸಿದ್ಧ ಭಜನಾ ಮಂಡಳಿ, ಕಾಕನಾಳದ ಹನುಮಾನ ಭಜನಾ ತಂಡ, ಚಿಟಗುಪ್ಪಾದ ಪುಟ್ಟರಾಜ ಗವಾಯಿ ಸಂಗೀತ ಬಳಗ ಸೇರಿದಂತೆ ಒಟ್ಟು ಮುವತ್ತು ಭಜನಾ ತಂಡಗಳು ಈ ಉತ್ಸವದಲ್ಲಿ ಭಾಗವಹಿಸಿ, ತಮ್ಮ ಅದ್ಭುತ ಪ್ರದರ್ಶನ ನೀಡಲಿದ್ದಾರೆ ಎಂದ ಅವರು ಜಿಲ್ಲೆಯಲ್ಲಿ ಸುಮಾರು 300ಕ್ಕೂ ಅಧಿಕ ಜಾನಪದ ಕಲಾವಿದರು ಈ ಭವ್ಯ ಕಾರ್ಯಕ್ರಮದ ಮೆರುಗು ಹೆಚ್ಚಿಸಲಿದ್ದಾರೆ ಎಂದು ಡಾ.ಹೆಬ್ಬಾಳೆ ಸ್ಪಷ್ಟಪಡಿಸಿದರು.

ಪತ್ರಿಕಾ ಗೋಷ್ಟಿಯಲ್ಲಿ ಕರ್ನಾಟಕ ಬರಹಗಾರರ ಹಾಗೂ ಕಲಾವಿದರ ಸಂಘದ ಗೌರವಾಧ್ಯಕ್ಷ ಪ್ರೊ.ಎಸ್.ಬಿ.ಬಿರಾದಾರ, ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ, ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕಾಧ್ಯಕ್ಷ ಎಸ್.ಬಿ.ಕುಚಬಾಳ್ ಇದ್ದರು.

Leave a Reply

Your email address will not be published. Required fields are marked *