Mother selling own child

ಒಂದು ಕ್ವಾಟರ್‍ಗೆ ಮಾರಿ ಹೋಗುತ್ತಿದ್ದ 2 ಮಕ್ಕಳ ರಕ್ಷಣೆ

ಬೀದರ: ಕುಡಿದ ಅಮಲಿನಲ್ಲಿ ತಾನು ಹಡೆದ ತನ್ನ ಸ್ವಂತ ಮಕ್ಕಳನ್ನು ಬರೀ ಒಂದು ಕ್ವಾಟರ್ ಬೆಲೆ ಮೂವತೈದು ರೂಪಾಯಿಗೆ ಮಾರಲು ಮುಂದಾಗಿದ್ದ Two Childrens Selling his Own Mother 1 Two Childrens Selling his Own Mother 2ಮಹಿಳೆಯಿಂದ ಬರೀ ನಾಲ್ಕು ತಿಂಗಳ ಒಂದು ಗಂಡು ಹಾಗೂ ಒಂದು ವರೆ ವರ್ಷದ ಒಂದು ಹೆಣ್ಣು ಮಗುವನ್ನು ಕರ್ಬಾಟಕ ಬಾಲವಿಕಾಸ ಅಕಾಡೆಮಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸದಸ್ಯರು ವಶಕ್ಕೆ ತೆಗೆದುಕೊಂಡ ಅಪರೂಪದ ಘಟನೆ ನಗರದ ರೈಲ್ವೆ ನಿಲ್ದಾಣದ ಬಳಿ ಮಂಗಳವಾರ ಸಂಜೆ ನಡೆದು ಹೋಯಿತು.

ಕಲಬುರ್ಗಿ ಜಿಲ್ಲೆಯ ಸೇಡಂ ನಗರದ ನಿವಾಸಿ ಲಕ್ಷ್ನೀ ಗಂಡ ರಾಮಚಂದ್ರ ಎಂಬ ಮೂವತ್ತು ವರ್ಷದ ಯುವತಿ ಕಂಠ ಪೂರ್ತಿ ಕುಡಿದು ರೈಲ್ವೆ ನಿಲ್ದಾಣದಲ್ಲಿ ಚೀರಾಟ ಮಾಡುತ್ತಿರುವುದನ್ನು ರೈಲ್ವೆ ಪೋಲಿಸ್‍ರು ಮನಗಂಡು ಆಕೆಯನ್ನು ಸ್ಟೇಶನ್‍ನಿಂದ ಹೋರಗೆ ತಂದು ಬಿಟ್ಟಾಗ ಆಕ್ರೋಶಗೊಂಡ ಆ ಯುವತಿ ತನ್ನ ಸ್ವಂತ ಎರಡು ಮಕ್ಕಳನ್ನೆ ಹೊಡಿದು, ಬಡಿದು ಹಿಂಸಿಸುತ್ತಿರುವಾಗ ಕರ್ನಾಟಕ ಬಾಲವಿಕಾಸ ಅಕಾಡೆಮಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸದಸ್ಯರು ಆ ಎರಡು ಮಕ್ಕಳನ್ನು ಆಕೆಯಿಂದ ವಶಕ್ಕೆ ಪಡೆದು ಅಲ್ಲಿಯ ಇದ್ದ ಕಸ್ತುರಿಬಾಯಿ ಬಾವಗಿ ಎಂಬಾಕೆಗೆ ತಾತ್ಕಾಲಿಕ ಉಪಚಾರಕ್ಕಾಗಿ ಒಪ್ಪಿಸಿ, ನಂತರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪಿ.ಎಸ್.ಇಟಕಂಪಳ್ಳಿ ಅವರಿಗೆ ಆ ಎರಡು ಮಕ್ಕಳನ್ನು ಒಪ್ಪಿಸಲಾಯಿತು. ಜೊತೆಗೆ ನ್ಯು ಟೌನ್ ಪೋಲಿಸ್ ಠಾಣೆಯ ಅಪರಾಧ ದಳದ ಪಿ.ಎಸ್.ಐ ಶ್ರೀಮಂತ ಎಲ್ಲಾಳ್‍ರಿಗೆ ಹೆಚ್ಚಿನ ವಿಚಾರಣೆಗಾಗಿ ಆ ಯುವತಿಯನ್ನು ಠಾಣೆಗೆ ಕಳುಹಿಸಲಾಯಿತು.

ಕಳೆದ ಐದಾರು ತಿಂಗಳ ಹಿಂದೆ ತನ್ನ ಪತಿ ರಾಮಚಂದ್ರ ತನ್ನನ್ನು ಬಿಟ್ಟು ಓಡಿ ಹೋಗಿದ್ದು, ಬದುಕಲು ದಿಕ್ಕು ಕಾಣದೆ ಈ ಆಲೋಚನೆಗೆ ಇಳಿದಿರುವುದಾಗಿ ತಿಳಿಸಿದ ಲಕ್ಷ್ಮೀ, ತನ್ನ ಗಂಡನ ಬಳಿ ತನ್ನ ಮತ್ತೊಂದು ನಾಲ್ಕು ವರ್ಷದ ಗಂಡು ಮಗು ಸಹ ಇರುವುದನ್ನು ಈ ಸಂದರ್ಭದಲ್ಲಿ ತಿಳಿಸಿದ್ದಾಳೆ. ನಗರದ ನ್ಯು ಟೌನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯರುಗಳಾದ ಶಂಭುಲಿಂಗ ವಾಲ್ದೊಡ್ಡಿ, ಮಹೇಶ ಗೋರನಾಳಕರ್, ಶಿವಕುಮಾರ ಸ್ವಾಮಿ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷ ಸಂಜೀವಕುಮಾರ ಡಾಕುಳಗಿ, ಜಿಲ್ಲಾ ಮಕ್ಕಳ ರಕ್ಷಣಾ ಸಿಬ್ಬಂದಿ ಪ್ರಶಾಂತ, ಡಾನ್ ಬಾಸ್ಕೋ ಸಂಸ್ಥೆಯ ಜಾನ್ಸನ್ ಸೇರಿದಂತೆ ಜಿಲ್ಲೆಯ ಇತರೆ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *