Monthly Farmer Meeting

ಸೆ.28ರಂದು ರೈತ ಸಂಘದ ಮಾಸಿಕ ಸಭೆ

ಬೀದರ: ನಗರದ ಗಾಂಧಿ ಗಂಜ್‍ನಲ್ಲಿನ ರೈತ ಭವನದಲ್ಲಿ ಸೆಪ್ಟೆಂಬರ್ 28ರಂದು ಬೆಳಿಗ್ಗೆ 10.30 ಗಂಟೆಗೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ವಿಶ್ವನಾಥ ಪಾಟೀಲ ಕೌಠಾ ಅವರ ನೇತೃತ್ವದಲ್ಲಿ ಸಂಘದ ಮಾಸಿಕ ಸಭೆ ಹಮ್ಮಿಕೊಳ್ಳಲಾಗಿದೆ.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ್ ಸ್ವಾಮಿ ಭಾಲ್ಕಿ ಅವರ ಅಧ್ಯಕ್ಷತೆಯಲ್ಲಿ  ಜರುಗುವ ಈ ಸಭೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಸರ್ಕಾರ ಬರಗಾಲ ಘೋಷಣೆ ಮಾಡಿದರೂ ಯಾವುದೆ ಪ್ರಯೋಜನ ಆಗದಿರುವುದು, ಇತ್ತಿಚೀಗಷ್ಟೆ ನಗರದ ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿ ಸತತ 19 ದಿನಗಳ ಹಗಲು ರಾತ್ರಿ ಧರಣಿ ನಡೆಸಿದರೂ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸ್ಪಂದಿಸದ ಬಗೆ, 2014-15ನೇ ಸಾಲಿನಲ್ಲಿ ಕಾರ್ಖಾನೆಗಳಿಗೆ ಕಬ್ಬು ಪೂರೈಸಿರುವ ರೈತರಿಗೆ ಎಫ್.ಆರ್.ಪಿ ಪ್ರಕಾರ ಹಣ ನೀಡದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲೆಯ ನಾಲ್ಕು ಕಾರ್ಖಾನೆಗಳಿಗೆ ಬೀಗ ಜಡಿದಿದ್ದರೂ ಇಲ್ಲಿಯ ವರೆಗೆ ಯಾವುದೆ ಕ್ರಮ ಜರುಗಿಸದ ಪರಿ ಸೇರಿದಂತೆ ಇನ್ನು ಅನೇಕ ವಿಷಯಗಳ ಬಗ್ಗೆ ಗಂಭೀರ ಚರ್ಚೆ ನಡೆಯಲಿವೆ.

ಅಂದಿನ ಸಭೆಯಲ್ಲಿ ಬೀದರ ತಾಲೂಕಿನಿಂದ ವೈಜಿನಾಥ ನೌಬಾದೆ, ವೀರಭೂಷಣ ಮನ್ನಳ್ಳಿ, ಶಂಕ್ರೆಪ್ಪ ಪಾರಾ, ಧೂಳಪ್ಪ ಅಣದೂರ, ಭೀಮರೆಡ್ಡಿ, ಭಾಲ್ಕಿ ತಾಲೂಕಿನಿಂದ ಸಿದ್ರಾಮಪ್ಪ ಅಣದುರೆ, ಬಾಬುರಾವ ಜೋಳದಾಬಕಾ, ಶೇಶೆರಾವ ಕಣಜಿ, ಹುಮನಾಬಾದ್ ತಾಲೂಕಿನಿಂದ ಸತೀಷ ನನ್ನುರೆ, ಪರಮೇಶ್ವರ ಪಾಟೀಲ, ಈರಪಣ್ಣ ದುಬುಲಗುಂಡಿ, ಖಾಸಿಮ್ ಅಲಿ, ಸಿದ್ದಣ್ಣ ಭೂಶಟ್ಟಿ, ಔರಾದ್ ತಾಲೂಕಿನಿಂದ ಗುಂಡಪ್ಪ ಬಿರಾದಾರ, ಶ್ರೀಮಂತ ಬಿರಾದಾರ, ಚಂದ್ರಶೇಖರ ಪಾಟೀಲ, ಬಸವಕಲ್ಯಾಣ ತಾಲೂಕಿನಿಂದ ಚಂದ್ರಶೇಖರ ಜಮಖಂಡಿ, ಸಂಗಾರೆಡ್ಡಿ ನಾರಾಯಣಪೂರ, ಸಿದ್ರಾಮಪ್ಪ ಬಾಲಕುಂದೆ, ವಿಠಲರಾವ, ಮಾಣಿಕಪ್ಪ ಮೇಟಿಕಾರ ಹಾಗೂ ಇತರರು ಭಾಗವಹಿಸಲಿದ್ದು, ಜಿಲ್ಲೆಯ ರೈತ ಬಾಂಧವರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಸಭೆ ಯಶಸ್ವಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಮಾಧ್ಯಮ ಪ್ರತಿನಿಧಿ ದಯಾನಂದ ಸ್ವಾಮಿ ಸಿರ್ಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *