Millenium School

ಶಸ್ತ್ರಾಸ್ತ್ರದಲ್ಲಿ ಸ್ವಾವಲಂಬನೆ ಸಾಧಿಸಲು

ಐಐಟಿ ಜೊತೆಗೆ ನೈತಿಕ ಶಿಕ್ಷಣ ಅಗತ್ಯ: ನ್ಯಾ.ಹಂಚಾಟೆ

kanunu arivu neravu prgm in mileniam public schoolಬೀದರ: ವಿಶ್ವದಲ್ಲಿ ಭಾರತವು ಭಾರಿ ಶಸ್ತ್ರಾಸ್ತ್ರ ತಯಾರಿಸಿ. ಸ್ವಾವಲಿಂಬನೆ ಸಾಧಿಸಲು ನಮ್ಮ ದೇಶದ ಐಐಟಿ ವಿದ್ಯಾರ್ಥಿಗಳು, ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳು ತಾಂತ್ರಿಕ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣ ಕಲಿತಲ್ಲಿ ದೇಶಪ್ರೇಮ, ದೇಶಭಕ್ತಿ ಜಾಗೃತವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ.ಹಂಚಾಟೆ ಸಂಜೀವಕುಮಾರ ಹೇಳಿದರು.

ಶುಕ್ರವಾರ ನಗರದ ಶಿವನಗರ ಉತ್ತರದಲ್ಲಿರುವ ದಿ.ಮಿಲೇನಿಯಮ್ ಪಬ್ಲಿಕ್ ಸ್ಕೂಲ್‍ನ ಅವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಕೇತಕಿ ಪಾರ್ವತಿ ಸಂಗಮೇಶ್ವರ ಟ್ರಸ್ಟ್‍ಗಳ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ವಿಶ್ವ ಸಾಕ್ಷರತಾ ದಿನಾಚರಣೆ ಅಂಗವಾಗಿ ಕಾನೂನು ಅರಿವು-ನೇರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದು ನಮ್ಮ ಯುವಜನರು ಹೆಚ್ಚಾಗಿ ಐಐಟಿ ಶಿಕ್ಷಣದ ಕಡೆ ಒಲವು ತೋರಿಸಿ, ದೇಶ ಬಿಟ್ಟು ವಿದೇಶಗಳಿಗೆ ತೆರಳಿ, ಅಲ್ಲಿ ತಮ್ಮ ಶ್ರಮ ಹಾಗೂ ಬುದ್ದಿ ವ್ಯಯಿಸಿ, ಅಪಾರ ಹಣ ಮಾಡುವ ಸಂಕುಚಿತ ಮನೋವೃತ್ತಿ ಬೆಳೆಸಿಕೊಳ್ಳುತ್ತಿರುವುದರಿಂದ ಬೇರೆ ರಾಷ್ಟ್ರಗಳಿಂದ ಭಾರಿ ಶಸ್ತ್ರಾಸ್ರಗಳು, ಕ್ಷಿಪಣಿಗಳು ಹಾಗೂ ಯುದ್ದ ವಿಮಾನ, ಯುದ್ದ ನೌಕೆಗಳನ್ನು ವಿದೇಶಗಳಿಂದ ಅಮದು ಮಾಡಿಕೊಳ್ಳುತ್ತಿರುವುದು ದೌರ್ಭಾಗ್ಯದ ಸಂಕೇತವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಾಜಿ ರಾಷ್ಟ್ರಪತಿ ದಿ.ಡಾ.ಎ.ಪಿ.ಜೆ ಅಬ್ದುಲ್ ಕಲಾಮ್ ಅವರು ಈಗಿನ ಐಐಟಿ ವಿಜ್ಞಾನಿಗಳ ತರಹ ವಿದೇಶಕ್ಕೆ ಹಾರಿ ಹೋಗಿದ್ದರೆ, ಅಣು ಶಕ್ತಿಯಲ್ಲಿ ಹಾಗೂ ಅತ್ಯಾಧುನಿಕ ಕ್ಷಿಪಣಿಗಳನ್ನು ಕಂಡು ಹಿಡಿದು, ನಮ್ಮ ದೇಶ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲವಾದ್ದರಿಂದ ಕಲಾಮ್‍ರನ್ನು ಮಾದರಿಯಾಗಿಟ್ಟುಕೊಂಡು ವಿದ್ಯಾರ್ಥಿಗಳು ಮುಂದೆ ಬರುವಂತೆ ಕರೆ ನೀಡಿದರು.

1986ರಿಂದ ಇಲ್ಲಿಯ ವರೆಗೆ ಯಾರೊಬ್ಬ ಐಐಟಿ ತಂತ್ರಜ್ಞರು ಸೈನಿಕರಾಗದೆ ಇರುವುದು ಗಮನಾರ್ಹ ಸಂಗತಿ ಎಂದ ಅವರು, ಶಿಕ್ಷಣ ಎನ್ನುವುದು ಬರೀ ಹಣ ಗಳಿಕೆಯ ಕುಂಡವಾಗದೆ, ಸಮಾಜ ಹಾಗೂ ರಾಷ್ಟ್ರೀಯ ಪೂನರ್ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವಂತಾಗಬೇಕೆಂದರು.

ಒಟ್ಟಾರೆ ಶಿಕ್ಷಣದಲ್ಲಿ ಬೌದ್ದಿಕ, ಅಧ್ಯಾತ್ಮಿಕ, ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಆಯಾಮ ಗುರಿತಿಸಿಕೊಂಡಲ್ಲಿ ಸಮಾಜ ಪರಿವರ್ತನೆ ಜೊತೆಗೆ ಮೌಲ್ಯಾಧಾರಿತ ಬದುಕು ರೂಪಿಸಲು ಸಾಧ್ಯವಾಗಲಿದೆ ಎಂದು ಹೇಳಿ, ಸಂಸ್ಕøತಿ, ಸಂಸ್ಕಾರ, ಸನ್ನಡತೆ, ಸತ್‍ಚಾರಿತ್ತ್ಯೆ, ಸದುವಿನಯತೆ ಹಾಗೂ  ಸಹೃದಯಇಗಳಾಗಿ ಪರಿವರ್ತನೆಯಾಗುವಿರೆಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.

ಕೇತಕಿ ಪಾರ್ವತಿ ಸಂಗಮೇಶ್ವರ ಟ್ರಸ್ಟ್ ಅಧ್ಯಕ್ಷ ರಾಜಶೇಖರ ಗಾದಾ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರೂ, ಜಿಲ್ಲಾ ನ್ಯಾಯಿಕ ದಂಡಾಧಿಕಾರಿಗಳು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಜಿ.ಶಿವಳ್ಳಿ, ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶರೂ ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳಾದ ಸೋಮಶೇಖರ.ಸಿ.ಬಾದಾಮಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮಹಾದೇವ ಪಾಟೀಲ, ಸಂಘದ ಪ್ರಧಾನ ಕಾರ್ಯದರ್ಶಿ ಧನರಾಜ ಬಿರಾದಾರ, ಬಾಲ ನ್ಯಾಯ ಮಂಡಳಿ ಸದಸ್ಯ ಬಿ.ಎಸ್.ಪಾಟೀಲ, ಸ್ಥಳಿಯ ಪ್ರೌಢಶಾಲೆಯ ಮುಖ್ಯ ಗುರು ಆನಂದ ಕೌರ್ ಹಾಗೂ ಸಂಸ್ಥೆಯ ಅಡಳಿತಾಧಿಕಾರಿ ರವಿಂದ್ರ ರೆಡ್ಡಿ ವೇದಿಕೆಯಲ್ಲಿದ್ದರು.

ಆರಂಭದಲ್ಲಿ ಶಾಲೆಯ ವಿದ್ಯಾರ್ಥಿನಿ ನಿಷ್ಟಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ತುಕಾರಾಮ ಮೇತ್ರೆ ಸ್ವಾಗತಿಸಿ, ನಿರೂಪಿಸಿ, ವಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಾಯಕ ಶಂಕ್ರೆಪ್ಪ ಜನಕಟ್ಟಿ, ಇತರೆ ನ್ಯಾಯವಾದಿಗಳು, ಸ್ಥಳಿಯ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *