Law Awareness Program

ಸುಸಜ್ಜಿತ ತರಬೇತಿಯಿಂದ ಬಲಿಷ್ಟ ನ್ಯಾಯಾಂಗ ಅಭಿವೃದ್ಧಿ:

ನ್ಯಾ.ಹಂಚಾಟೆ

Kanun Arivu Prog 1
ಬೀದರ: ಸಾರ್ವಜನಿಕ ವಲಯದಲ್ಲಿ ಪ್ರತಿಯೊಬ್ಬರಿಗೂ ತರಬೇತಿ ಅಗತ್ಯವಾಗಿದ್ದು, ಅದಕ್ಕೆ ನ್ಯಾಯಾಂಗ ವ್ಯವಸ್ಥೆ ಹೊರತಲ್ಲ, ಅಲ್ಲಿಯ ಸಿಬ್ಬಂದಿಗಳಿಗೆ ಪರಿಪೂರ್ಣ ಹಾಗೂ ಸುಸಜ್ಜಿತ ತರಬೇತಿ ನೀಡಿದಲ್ಲಿ ಬಲಿಷ್ಟ ನ್ಯಾಯಾಂಗ ವ್ಯವಸ್ಥೆ ರೂಪಗೊಳ್ಳಲು ಸಾಧ್ಯ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ.ಹಂಚಾಟೆ ಸಂಜೀವಕುಮಾರ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ನ್ಯಾಯಾಲಯದ ಅವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ನ್ಯಾಯಾಂಗ ಇಲಾಖೆಯ ಸಹಯೋಗದಲ್ಲಿ ನ್ಯಾಯಾಂಗ ಇಲಾಖೆಯ ಸಿಬ್ಬಂದಿಗಳಿಗೆ ಮಕ್ಕಳ ಮತ್ತು ಮಹಿಳೆಯರ ಕುರಿತು ಸಂವೇದನಾಶೀಲತೆ, ಸಾಮಥ್ರ್ಯ ಬಲವರ್ಧನೆ ಹಾಗೂ ನೊಂದವರಿಗೆ ಪರಿಹಾರ ಕುರಿತು ಕಾನೂನು ಅರಿವು ಮತ್ತು ನೆರವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸಿಬ್ಬಂದಿಗಳು ಯಾವತ್ತು ಪ್ರೀತಿ, ವಿಶ್ವಾಸ, ಸಮಯ ಪ್ರಜ್ಞೆ, ಸಹಕಾರ ಮನೋಭಾವನೆಯಿಂದ ಕಾರ್ಯ ಮಾಡಿದಲ್ಲಿ ಪರಿಪೂರ್ಣ ಅಡಳಿತ ವ್ಯವಸ್ಥೆ ರೂಪಗೊಳ್ಳುತ್ತದೆ. ಅದಕ್ಕಾಗಿ ಸಿಬ್ಬಂದಿಗಳು ಕಾಟಾಚಾರದ ಕಾರ್ಯವೆಸಗದೆ, ಮನಪೂರ್ತಿ ಹಾಗೂ ಉದಾಸಿನ ಮನೊಭಾವನೆಗೆ ಮುಂದಾಗುವಂತೆ ಕರೆ ನೀಡಿದರು.

ಸಾರ್ವಜನಿಕರು ನೊಂದುಕೊಂಡು ಬರುವುದು ನ್ಯಾಯಾಲಯ ಹಾಗೂ ಆಸ್ಪತ್ರೆಗೆ, ಅವರ ಕಷ್ಟ, ಸುಖಗಳಿಗೆ ಸ್ಪಂದಿಸಿ, ಅವರ ಸೇವೆ ನಿಜವಾದ ದೇವರ ಸೇವೆ ಎಂದು ಭಾವಿಸಿ ಕಾರ್ಯತತ್ಪರರಾಗುವಂತೆ ಸಿಬ್ಬಂದಿಗಳಿಗೆ ಕಿವಿ ಮಾತು ಹೇಳಿದರು.

ಪರಿಪೂರ್ಣ ಸಿಬ್ಬಂದಿ ಎನಿಸಿಕೊಳ್ಳಬೇಕಾದರೆ ಆತನಲ್ಲಿ ಪರಿಪೂರ್ಣ ಭಾಷಾ ಜ್ಞಾನ ಅವಶ್ಯಕ, ಅದು ಬರಬೇಕಾದರೆ, ಪ್ರತಿ ದಿನ ಪತ್ರಿಕೆ ಓದುವುದು ರೂಢಿ ಮಾಡಿಕೊಳ್ಳಬೇಕೆಂದು ಕರೆಯಿತ್ತರು.

ಪ್ರತಿಯೊಂದು ಮೊಕದ್ದಮೆಗಳು 20 ತಿಂಗಳಲ್ಲಿ ಇತ್ಯರ್ಥವಾಗಲೇಬೇಕೆಂದು ಇತ್ತಿಚೀಗೆ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವಾಗಿದ್ದು,. ಅದಕ್ಕಾಗಿ ಬೀದರ ಜಿಲ್ಲೆಯನ್ನು ಈ ವ್ಯವಸ್ಥೆಯಡಿ ಪ್ರಾಯೋಗಿಕವಾಗಿ ತೆಗೆದುಕೊಳ್ಳಲಾಗಿದೆ ಆದ್ದರಿಂದ ನ್ಯಾಯಾಲಯದ ಆದೇಶ ಮನ್ನಿಸಿ, ಎಲ್ಲರು ಸೇರಿ ಈ ಪ್ರಾಯೋಗಿಕ ಪರಿಕ್ಷೆ ಯಶಸ್ವಿಗೊಳಿಸಬೇಕೆಂದರು.

ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಜಿ.ನಂಜುಂಡಯ್ಯ, ಎರಡನೆ ಹೆಚ್ಚುವರಿ ಸತ್ರ ನ್ಯಾಯಾಧೀಶರಾದ ಮಾರೂತಿ ಭಗಾಡೆ, ಪ್ರಧಾನ ಸಿವಿಲ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಜಿ.ಶಿವಳ್ಳಿ, ಇತರೆ ನ್ಯಾಯಾಧೀಶರುಗಳಾದ ಪ್ರಕಾಶ ಯಾಳವಾರ, ಸಿದ್ರಾಮ್, ಕೆಂಪರಾಜ, ಪದ್ಮಾಕರ ವೇಣಕುದುರೆ, ಸೋಮಶೇಖರ ಬಾದಾಮಿ, ಹೇಮಾ ಪಸ್ತಾಪುರ, ಪರ್ವಿನ್ ಬಂಕಾಪುರೆ, ಜೀವನರಾವ ಕುಲಕರ್ಣಿ  ಹಾಗೂ ಇತರರು ಮಾತಮಾಡಿದರು.

ಈ ಸಂದರ್ಭದಲ್ಲಿ ನ್ಯಾಯಾಂಗ ಇಲಾಖೆಗೆ ನೂತನವಾಗಿ ನೇಮಕಗೊಂಡ 7 ಜನ ಶಿಘ್ರ ಲಿಪಿಗಾರರಿಗೆ ಸನ್ಮಾನಿಸಲಾಯಿತು.

ಆರಂಭದಲ್ಲಿ ನ್ಯಾಯಾಲಯದ ಸಿಬ್ಬಂದಿ ಸಂಜಯ ಪಾಟೀಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರೆ, ಸಂತೋಷ ಪಟವಾರಿ ವಂದಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಡಳಿತ ಸಹಾಯಕ ಶಂಕ್ರೆಪ್ಪ ಜನಕಟ್ಟಿ ಕಾರ್ಯಕ್ರಮ ನರ್ವಹಿಸಿದರು. ಕಾರ್ಯಾಗಾರದಲ್ಲಿ ಇತರೆ ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *