Laptop Distribution to handicapped children

ಅಂಧ ವಿಕಲಚೇತನರಿಗೆ ಲ್ಯಾಪ್‍ಟಾಪ್ ವಿತರಣೆ

Laptap Distributionಬೀದರ: ಶುಕ್ರವಾರ ನಗರದ ಮೈಲೂರ್‍ನಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅವರಣದಲ್ಲಿ ಅಂಧ ವಿಕಲಚೇತನರಿಗೆ ಲ್ಯಾಪ್‍ಟಾಪ್ ವಿತರಿಸಲಾಯಿತು.
ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯ ಶಿವಕುಮಾರ ಸ್ವಾಮಿ ಈ ಸಂದರ್ಭದಲ್ಲಿ ಮಾತನಾಡಿ, ವಿಕಲಚೇತನರಿಗೆ ಸಿಗುವ ಸೌಲತ್ತುಗಳು ಅರ್ಹ ಫಲಾನುಭವಿಗಳಿಗೆ ಸಿಗುವಂತಾಗಬೇಕು ಹಾಗೂ ಅವರ ಹೆಸರು ಹೇಳಿಕೊಂಡು ನಕಲಿ ವಿಕಲಚೇತನರು ಸೌಲತ್ತು ಪಡೆಯದಂತೆ ಅಧಿಕಾರಿಗಳು ಎಚ್ಚರ ವಹಿಸುವಂತೆ ಕರೆ ಕೊಟ್ಟರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮುನಿರಾಜು ಮಾತನಾಡಿ, ಇಲಾಖೆಯಿಂದ ಕೊಡುವ ಲ್ಯಾಪ್‍ಟಾಪ್‍ಗಳು ಸ್ವತಃ ಉಪಯೋಗಿಸಿ, ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ತಿಳಿಸಿದ ಅವರು, ಅದನ್ನು ಇತರರಿಗೆ ಮಾರಿಕೊಳ್ಳದಂತೆ ಕಿವಿ ಮಾತು ಹೇಳಿದರು.
ಇಲಾಖೆಯ ಎಲ್ಲ ಸೌಲತ್ತುಗಳು ಅರ್ಹ ಫಲಾನುಭವಿಗಳಿಗೆ ದೊರೆಯುವಂತೆ ಮಾಡಲು ಸಿಬ್ಬಂದಿಗಳು ಮುತುವರ್ಜಿ ವಹಿಸಬೇಕು. ತಪ್ಪಿದಲ್ಲಿ ಮುಲಾಜಿಲ್ಲದೆ ಮನೆಗೆ ಕಳಿಸುವುದಾಗಿ ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಹಾಗೂ ಇಲಾಖೆಯ ಕಾರ್ಯಕ್ರಮ ಯೋಜನಾಧಿಕಾರಿ  ಪಿ.ಎಸ್.ಇಟಕಂಪಳ್ಳಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯರಾದ ಮಹೇಶ ಗೋರನಾಳಕರ್, ಶಾಮರಾವ ನೆಲವಾಡೆ, ವಿಕಲ ಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಯೋಜನಾ ಸಹಾಯಕ ಪ್ರಭುಲಿಂಗಯ್ಯ ಸ್ವಾಮಿ, ಫಲಾನುಭವಿಗಳಾದ ಜಾನ್ಸನ್ ಸಿದ್ರಾಮಪ್ಪ ಡೊಂಗರಗೆ, ಸತೀಷ ಭೀಮಣ್ಣ ಸಾತೋಳಿ, ಎಮ್.ಆರ್.ಡಬ್ಲ್ಯು ಬಾಬುರಾವ ರಾಠೋಡ ಹಾಗೂ ಇತರರಿದ್ದರು.

Leave a Reply

Your email address will not be published. Required fields are marked *