Ladgeri Matha event

ಪತ್ರಿಕಾ ಪ್ರಕಟಣೆ ಕೃಪೆಗಾಗಿ

ಅಂತರಂಗದ ದೈವತ್ವ ಸಂಪತ್ತು ಹೆಚ್ಚಿಸಿಕೊಳ್ಳಬೇಕೆಂದು

–ರಮೆಶ ಮೈಲೂರುಕರ

Ladgari photoಬೀದರ ನ.27:– ಬದುಕು ಅರ್ಥ ಪೂರ್ಣವಾಗಬೇಕಾದರೆ ಅಂತರಂಗದ ದೈವತ್ವ ಸಂಪತ್ತು ಹೆಚ್ಚಿಸಿಕೊಳ್ಳಬೇಕೆಂದು ಸಿಪಿಐ ರಮೇಶ ಮೈಲೂರಕರ್ ಅವರು ಕರೆ ನೀಡಿದರು. ಅವರು ಇತ್ತೀಚಿಗೆ ಬೀದರಿನ  ಲಾಡಗೇರಿ ಹಿರೇಮಠ ಸಂಸ್ಥಾನದಲ್ಲಿ  ದಿವ್ಯ ಜ್ಯೋತಿ ಜಾಗೃತಿ ಸಂಸ್ಥಾನ ಮತ್ತು  ಮಠದ ಸಂಯುಕ್ತಾಶ್ರಯದಲ್ಲಿ  ಏರ್ಪಡಿಸಲಾದ ಲಕ್ಷ ದಿಪೋತ್ಸವ ಕಾರ್ಯಕ್ರಮದ ನಿಮಿತ್ಯದ  ಪ್ರವಚನ ಉದ್ಘಾಟಿಸಿ ಮಾತನಾಡುತ್ತಿದ್ದರು.
ದಿವ್ಯ ಜ್ಯೋತಿ ಜಾಗೃತಿ ಸಂಸ್ಥಾನದ  ಸಾಧವಿ ಉನ್ಮೋಷಾ ಭಾರತಿ ಮಾತನಾಡಿದರು. ಮೇಹಕರ್ ತಡೋಳದ ಷ.ಬ್ರ. ಶ್ರೀ ರಾಜೇಶ್ವರ ಶಿವಾಚಾರ್ಯರು ಮಾತನಾಡಿ  ಭಾರತದ ಸಂಸ್ಕøತಿಯಲ್ಲಿ ಜೀವನಕ್ಕೆ ಅತ್ಯಂತ ಹೆಚ್ಚು ಮಹತ್ವ ನೀಡಿದ್ದು  ಧರ್ಮಾಚರಣೆ ಸಂದರ್ಭದಲ್ಲಿ  ಪರರ ಮನಸ್ಸಿಗೆ  ನೋವು ತರದಂತೆ ಬದುಕಬೇಕೆಂದರು.
ನಗರ ಸಭೆ ಸದಸ್ಯ  ನಾಗಶೆಟ್ಟಿ ವಗದಾಳೆ ಮಾತನಾಡಿ ಮನಸ್ಸಿನಲ್ಲಿ ತುಂಬಿರುವ ಅಂಧಕಾರ ಹೋಗಲಾಡಿಸಲು ಲಕ್ಷ ದಿಪೋತ್ಸವಗಳನ್ನು  ಆಗಾಗ ಹೆಚ್ಚೆಚ್ಚು ಏರ್ಪಡಿಸಿದರೆ  ಅನುಕೂಲವಾಗುತ್ತವೆ ಎಂದರು. ನವೆಂಬರ್ 28ರವರೆಗೆ ಪ್ರವಚನ ನಡೆಯಲಿದ್ದು  ಅಂದು  ಸಂಜೆ ಲಕ್ಷ ದಿಪೋತ್ಸವ ನಡೆಯಲಿದೆ.
ಷ.ಬ್ರ. ಗಂಗಾಧರ ಶಿವಚಾರ್ಯರರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ವೇದಿಕೆಯ ಮೇಲೆ ಬಂಡೆಪ್ಪ ಗಿರಿ ಶಿವಕುಮಾರ ದಾನಪ್ಪನೂರ, ನಾಗಶೆಟ್ಟಿ ಧರ್ಮಪೂರ, ಮಲ್ಲಪ್ಪ ಹುಲೆಪ್ಪನೌರ, ಶರಣಪ್ಪ ಮೈಲೂರು, ಶಂಕರ ಮಂಡ್ರೆಪ್ಪನೊರು, ನಾಗಶೆಟ್ಟಿ ದುಗಾಣಿ, ನಾಗಶೆಟ್ಟಿ ಪಾಟೀಲ ಲಾಡಗೇರಿ ಉಪಸ್ಥಿತರಿದ್ದರು.
ರಾಜಕುಮಾರ ಮರಖಲ್ ತಂಡದಿಂದ ಪ್ರಾರ್ಥನ ಗೀತೆ ಮತ್ತು ವಚನ ಗಾಯನ ನಡೆಯಿತು. ಪ್ರೊ. ವೀರಶೆಟ್ಟಿ ಮೈಲೂರಕರು ಸ್ವಾಗತಿಸಿ, ನಿರೂಪಿಸಿ ವಂದಿಸಿದರು.
ಧನ್ಯವಾದಗಳೊಂದಿಗೆ,
ತಮ್ಮ ವಿಶ್ವಾಸಿ
ಷ.ಬ್ರ. ಗಂಗಾಧರ ಶಿವಾಚಾರ್ಯರು
ಹೀರೆಮಠ ಸಂಸ್ಥಾನ ಲಾಡಗೇರಿ,ಬೀದರ

Leave a Reply

Your email address will not be published. Required fields are marked *