krishna Janmastami in siddharrodh school

ಶ್ರೀ ಸಿದ್ಧಾರೂಢ ಪಬ್ಲಿಕ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ವೈಭವದಿಂದ ಆಚರಣೆ.

ಇಂದು ನಗರದ ಶ್ರೀ ಸಿದ್ಧಾರೂಢ ಪಬ್ಲಿಕ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಶ್ರೀ ಕೃಷ್ಣನ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖ ಹಬ್ಬವಾಗಿದ್ದು. ಕೃಷ್ಣನ ಹುಟ್ಟಿದ ದಿನವನ್ನ ಶ್ರೀ ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿಯಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀ ಕೃಷ್ಣನ ಜನ್ಮದಿನವನ್ನ ಚಂದ್ರಮಾನ ರೀತಿಯಲ್ಲಿ ಶ್ರಾವಣ ಮಾಸದ ಪವಿತ್ರ ದಿನಗಳಲ್ಲಿ ಈ ಹಬ್ಬವಾಗಿ ಆಚರಣೆ ಮಾಡಲಾಗುತ್ತಿದೆ. ಈ ಒಂದು ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿರುವ ಎನ್.ಕೆ. ಜಾಬಶೇಟ್ಟಿ ಆಯುರ್ವೇದಿಕ ಮಹಾ ವಿದ್ಯಾಲಯದ ಸಂಸ್ಕøತ ಉಪನ್ಯಾಸಕರಾದ ಶ್ರೀ ಪರಮೇಶ್ವರ ಭಟ್ಟ ತಮ್ಮ ಕಮಲ ಹಸ್ತದಿಂದ ಜ್ಯೋತಿ ಪ್ರಜ್ವಲಗೊಳಿಸುವ ಮತ್ತು ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲೆಯ ಚಿಕ್ಕ ಪುಟಾಣಿ ವಿದ್ಯಾರ್ಥಿಗಳು ಶ್ರೀ ಕೃಷ್ಣನ ಹಾಡನ್ನು ಹಾಡುವ ಮೂಲಕ ವಿದ್ಯಾರ್ಥಿಗಳಿಗು ಅಥಿತಿಗಳಿಗು ಹಾಗೂ ಶಾಲೆಯ ಪಾಲಕರಿಗೆ ಸ್ವಾಗತ ಕೊರಿದರು.
ಈ ಒಂದು ಕಾರ್ಯಕ್ರಮವನ್ನ ಶಾಲೆಯ ಸೂಮಾರು 300 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಶ್ರೀ ಕೃಷ್ಣ ಹಾಗೂ ರಾಧೆಯ ವೇಷ ಧರಿಸಿಕೊಂಡಿದ್ದು ವಿಶಿಷ್ಟವಾಗಿತ್ತು. ವಿದ್ಯಾರ್ಥಿಗಳು ವಿವಿಧ ಧರ್ಮಜಾತಿಯವರು ಆಗಿದ್ದುರು ಲೇಕ್ಕಿಸದೆ ವೇಷ ಧರಿಸಿರುವುದು ಕಾರ್ಯಕ್ರಮದಲ್ಲಿ ನೆರೆದಿರುವ ಪಾಲಕರಿಗೆ ಅತೀವ ಸಂತೋಷ ತಂದುಕೊಟ್ಟಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಪರಮೇಶ್ವರ ಭಟ್ಟನವರು ಶಾಲೆಯ ಎಲ್ಲಾ ವಿಧ್ಯಾರ್ಥಿಗಳಿಗೆ ಬೆಣ್ಣೆಯನ್ನು ತಿನ್ನಿಸಿದರು. ನಂತರ ಉದ್ಘಾಟನೆಯ ಮಾತುಗಳನ್ನ ಆಡುತ್ತಾ ಈ ಪ್ರಪಂಚದಲ್ಲಿ ಭಾರತ ದೇಶದ ನೆಲ ಪುಣ್ಯ ಭೂಮಿಯಾಗಿದ್ದು ಈ ಪುಣ್ಯ ಭೂಮಿಯಲ್ಲಿ ಅನೇಕ ಮಹಾನ್, ಮಹಾತ್ಮರು ಹಾಗೂ ಪುಣ್ಯವಂತರು ಜನ್ಮಿಸಿದ್ದು ನಮ್ಮೆಲ್ಲಾರ ಭಾಗ್ಯ. ದೇವರ ಅವತಾರವನ್ನ ಹಿಂದುಗಳು ಒಪ್ಪಿಕೊಳ್ಳುತ್ತಾರೆ. ಭಗವಂತ ಮನುಷ್ಯನ ರೂಪದಲ್ಲಿ ಧರೆಗೆ ಅವತರಿಸಿ ಅವನ ಕೈಯಿಂದಲೆ ಲೋಕ ಕಲ್ಯಾಣವನ್ನ ಮಾಡಿಸುತ್ತಾನೆ. ಹಾಗೂ ಶ್ರೀ ಕೃಷ್ಣನು ಸುಮಾರು 500 ವರ್ಷಗಳ ಹಿಂದೆ ಈ ಭೂಮಿ ಮೇಲೆ ಅವತರಿಸಿದ್ದ. ಅವನು ಸು. 115 ವರ್ಷಗಳ ಕಾಲ ಬದುಕಿ ಬಾಳಿದ ಅದು ದ್ವಾಪರಯುಗದಲ್ಲಿ ಇವಾಗ ಕಲಿಯುಗದಲ್ಲಿ ನಾವೇಲ್ಲರು ಬಾಳ್ವಿಕೆ ಮಾಡುತ್ತಿದ್ದೆವೆ ಎಂದು ನುಡಿದರು.
ಶಾಲೆಯ ಪ್ರಾಂಶುಪಾಲರು ಮಾತನಾಡುತ್ತಾ ಶಾಲೆಯಲ್ಲಿ ವಿದ್ಯಾರ್ಥಿಗಳು ಅತ್ಯಂತ ಪ್ರೀತಿ ಪೂರ್ವಕವಾಗಿ ಸ್ನೇಹ ಜೀವಿಯಾಗಿ ಹಾಗೂ ಹಿಂದೆ ಶ್ರೀ ಕೃಷ್ಣ ತನ್ನ ಗೆಳೆಯನೋಡೆನೆ ಇದ್ದಿರುವ ಮಧುರ ಕಾಲವನ್ನ ನೆನಪಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಶ್ರೀ ಕೃಷ್ಣನ ಮಹಿಮೆ ಹಾಗೂ ಗೋಕುಲದಲ್ಲಿ ಇದ್ದ ಸಂಧರ್ಭವನ್ನ ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ನುಡಿದರು.
ಶಾಲೆಯ ಎಲ್ಲಾ ಸಿಬ್ಬಂದಿವರ್ಗ ಹಾಗೂ ಪಾಲಕರು ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


 

Leave a Reply

Your email address will not be published. Required fields are marked *