Kanunu Arivu Neravu program

ಮಹಿಳಾ ದೌರ್ಜನ್ಯ ತಡೆಗೆ ಕಾನೂನು ಹೋರಾಟ ಅಗತ್ಯ

: ನ್ಯಾ.ಹೇಮಾ ಪಸ್ತಾಪೂರ

kanunu arivu-neravu prgm .ಬೀದರ: ಇಂದು ದೇಶಾದ್ಯಂತ ಮಹಿಳೆಯರ ಮೇಲೆ ಅತ್ಯಾಚಾರ, ಶೋಷಣೆ ಹಾಗೂ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅವುಗಳ ತಡೆಗೆ ಮಹಿಳೆಯರು ಒಗ್ಗೂಡಿ ಕಾನೂನು ಹೋರಾಟಕ್ಕೆ ಸಜ್ಜಾಗುವಂತೆ ಪ್ರಧಾನ ಸಿವಿಲ ನ್ಯಾಯಾಧೀಶರೂ ಮತ್ತು ಜೆ.ಎಮ್.ಎಫ್.ಸಿಯ ನ್ಯಾ.ಹೇಮಾ ಪಸ್ತಾಪೂರ ಕರೆ ನೀಡಿದರು.
ಗುರುವಾರ ನಗರದ ಮೈಲೂರು ಬಳಿ ಇರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅವರಣದಲ್ಲಿರುವ ಶಿಶು ಅಭಿವೃದ್ಧಿ ಇಲಾಖೆ ಪ್ರಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕಿಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಜಂಟಿ ಆಶ್ರಯದಲ್ಲಿ ಮಹಿಳೆಯರ ವಿರೂದ್ಧ ದೌರ್ಜನ್ಯ ನಿರ್ಮೂಲನಾ ಅಂತರಾಷ್ಟ್ರೀಯ ದಿನಾಚರಣೆ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆ ಇಲ್ಲದ ಸಮಾಜ ಮಸಣಕ್ಕೆ ಸಮಾನ ಎಂಬ ವಾಕ್ಯ ಭಾಷಣಕ್ಕೆ ಮಾತ್ರ ಸೀಮಿತವಾಗಿರುವುದು ಕಳವಳಕರ ಸಂಗತಿಯಾಗಿದ್ದು, ಪ್ರತಿಯೊಬ್ಬ ಪುರುಷರ ಮನೆಗಳಲ್ಲಿ ತಾಯಿ, ಸಹೋದರಿ, ಹೆಂಡತಿ, ಮಗಳು ಎಲ್ಲರು ಹೆಣ್ಣು ಎಂಬುದು ಮರೆತು ಜಾನುವಾರುಗಳ ಹಾಗೆ ಹೆಣ್ಣಿನ ಮೇಲೆ ಅತ್ಯಾಚಾರ, ದೌರ್ಜನ್ಯ ಎಗ್ಗಿಲ್ಲದೆ ನಡೆಯುತ್ತಿದ್ದು, ಸಮಾಜ ಅದನ್ನು ತಮಾಸೆಯಾಗಿ ಕಾಣುತ್ತಿರುವುದು ನಾಚಿಕೆಗೀಡು ಪ್ರಸಂಗವಾಗಿದ್ದು, ಬರೀ ದಾಖಲೆಗಳಲ್ಲಿ ಅಡಕವಾಗಿರುವ ಮಹಿಳೆಯರ ಬಗೆಗಿನ ಕಾನೂನು ಕ್ಷಿಪ್ರ ಕಾರ್ಯರೂಪಕ್ಕೆ ತರಲು ಪ್ರತಿಯೊಬ್ಬರು ಕೈಜೋಡಿಸುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರಿ ಉಪ ನಿರ್ದೇಶಕ ಪಿ.ಎಸ್.ಇಟಕಂಪಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಜವಾದ ಪ್ರಾಮಾಣಿಕತೆ ಏನಾದರೂ ಇದ್ದರೆ ಅದು ಮಹಿಳೆಯರಲ್ಲಿ ಮಾತ್ರ ಜೀವಂತವಾಗಿ ನೋಡಲು ಸಾಧ್ಯವಾಗಿದ್ದು, ಇಂತಹ ಸತ್ಯ, ಪುರುಷ ಪ್ರಧಾನ ಸಮಾಜ ಅರಿತು ಮಹಿಳೆಯರ ವಿಕಾಸಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಹಾಗೂ ಒಬ್ಬ ಮಹಿಳೆಯೇ ಇನ್ನೊಬ್ಬ ಮಹಿಳೆಯ ಶತ್ರು ಎಂಬ ಗಾಢ ವಾಕ್ಯ ಹರಿದು ಹಾಕಿ, ತಮ್ಮಲ್ಲಿನ ಭೇದ ಮರೆತು ಪುರುಷ ಜಾತಿಗೆ ಸರಿ ಸಾಠಿಯಾಗಿ ನಿಲ್ಲುವಂತೆ ಹೇಳಿದರು.
ಜಿಲ್ಲಾ ವಕಿಲರ ಸಂಘದ ಅಧ್ಯಕ್ಷ ಮಹಾದೇವ ಪಾಟೀಲ ಮುಖ್ಯ ಅತಿಥಿಗಳಾಗಿ ಮಾತನಾಡಿ, ಇಂದು ಮಹಿಳೆಯರಿಗೆ ಎಲ್ಲ ರಂಗಗಳಲ್ಲಿ ಶೆಕಡಾ 50 ಪ್ರತಿಶತದಷ್ಟು ಅವಕಾಶಗಳಿದ್ದರು ಸ್ವತಃ ನಿರ್ಧಾರ ತೆಗೆದುಕೊಳ್ಳುವ ಮನೋವೃತ್ತಿಗೆ ಮಹಿಳೆ ಬರದೆ, ತಮ್ಮ ಗಂಡಂದಿರಿಗೆ ಅಧಿಕಾರ ನಡೆಸುವ ಅವಕಾಶ ಸ್ವತ ಮಹಿಳೆಯರೆ ನೀಡುವ ಮೂಲಕ ತಮ್ಮ ಸ್ವತಂತ್ರ ತಾವೇ ಹಾಳು ಮಾಡಿಕೊಳ್ಳುತ್ತಿದ್ದು, ಮಹಿಳೆ ಧೈರ್ಯದಿಂದ ಮುಂದೆ ಬಂದು ದೃಢ ನಿರ್ಧಾರ ತೆಗೆದುಕೊಳ್ಳುವ ಗಟ್ಟಿತನ ಬೆಳೆಸಿಕೊಳ್ಳುವಮತೆ ಕರೆ ಕೊಟ್ಟರು.
ಬಾಲ ನ್ಯಾಯ ಮಂಡಳಿ ಸದಸ್ಯ ಬಿ.ಎಸ್ ಪಾಟೀಲ ಮಾತನಾಡಿ, ಹೆಣ್ಣು ಜಗತ್ತಿನ ಕಣ್ಣು ಎಂಬ ವೇದ ವಾಕ್ಯ ಇಂದು ಮಣ್ಣು ಪಾಲಾಗುತ್ತಿದೆ, ಎಲ್ಲಿ ನೋಡಿದರಲ್ಲಿ ಅತ್ಯಾಚಾರ, ಶೋಷಣೆ, ದೌರ್ಜನ್ಯಗಳು ಸಾಮಾನ್ಯ ಸಂಗತಿಯಾದರೂ ಪುರುಷರಾದವರು ಬರೀ ಭಾಷಣ ಮಾಡುತ್ತ ಮುಂದುವರಿದಿದ್ದೆವೆ ವಿನಃ ಆಕೆಯ ಕಣ್ಣು ವರೆಸುವ ಪ್ರಾಮಾಣಿಕತೆ ಮಾಡುತ್ತಿಲ್ಲವೆಂದ ಅವರು, ತಮ್ಮ ಮೇಲೆ ಎಸಗುವ ದೌರ್ಜನ್ಯದ ವಿರುದ್ಧ ಸಿಡಿದೆದ್ದು, ಏಕತೆಯ ಹೋರಾಟಕ್ಕೆ ಸಿದ್ಧರಾಗುವಂತೆ ತಿಳಿಸಿದರು.
ಇನ್ನೋರ್ವ ಬಾಲ ನ್ಯಾಯ ಮಂಡಳಿ ಸದಸ್ಯೆ ಕವಿತಾ ಹುಷಾರೆ ಮಾತನಾಡಿ, ಮಹಿಳೆಯರ ದೌರ್ಜನ್ಯ ನಿವಾರಣೆಗೆ ಹಲವಾರು ಕಾನೂನುಗಳು ಜಾರಿಯಾಗಿದ್ದರೂ ಮಹಿಳೆ ಮನೆ, ಸಮಾಜ, ಸಮುದಾಯಕ್ಕೆ ಹೆದರಿ ಹೊರ ಬರುತ್ತಿಲ್ಲ, ಬದಲಾಗಿ ಶೋಷಣೆ ತಾಳಿಕೊಳ್ಳುತ್ತ ಬದುಕು ಸಾಗಿಸುತ್ತಿರುವುದು ಸಹ ಕಾನೂನು ಅಪರಾಧವಾಗಿದ್ದು, ಮಹಿಳೆ ತಾನೂ ಎಂದಿಗೂ ಅಬಲೆ ಅಲ್ಲ, ಸಂಪೂರ್ಣ ಸಬಲೆ ಎಂದು ನಂಬಿ, ಶೋಷಣೆ ವಿರೂದ್ಧದ ಸಮಾಜಕ್ಕೆ ನಾಂದಿ ಹಾಡಲು ಒಕ್ಕೂರಲ ಧ್ವನಿ ಎತ್ತಬೇಕೆಂದರು.
ಸಮಾರಂಭದಲ್ಲಿ 1ನೇ ಹೆಚ್ಚುವರಿ ಸಿವಿಲ ನ್ಯಾಯಾಧೀಶರೂ ಮತ್ತು ಜೆ.ಎಮ್.ಎಫ್.ಸಿಯ ಪರ್ವಿನ್ ಬಂಕಾಪೂರ, 2ನೇ ಹೆಚ್ಚುವರಿ ಸಿವಿಲ ನ್ಯಾಯಾಧೀಶರೂ ಮತ್ತು ಜೆ.ಎಮ್.ಎಫ್.ಸಿಯ ಉಜ್ವಲಾ ವೀರಣ್ಣ, ಬೀದರ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಬಲ್ಲೂರೆ ವೇದಿಕೆಯಲ್ಲಿದ್ದರು.
ಆರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಪ್ರೇಮಲತಾ ಸ್ವಾಗತ ಗೀತೆ ಹಾಡಿದರು. ಇನ್ನೋರ್ವ ಮೇಲ್ವಿಚಾರಕಿ ಯಲ್ಲಮ್ಮ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ದೇವೆಂದ್ರಪ್ಪ ನಾಟೇಕರ್ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನುನು ಸೇವಾ ಪ್ರಾಧಿಕರದ ಸಹಾಯಕ ಶಂಕ್ರೆಪ್ಪ ಜನಕಟ್ಟಿ, ಇತರೆ ವಕಿಲರು, ಇಲಾಖೆಯ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಗುಂಪಿನ ಸದಸ್ಯರುಗಳು ಇದ್ದರು.

Leave a Reply

Your email address will not be published. Required fields are marked *