Judge visits Navjeevan Mentally Retarded School

ನವಜೀವನ ಬುದ್ದಿಮಾಂದ್ಯ ಶಾಲೆಗೆ ನ್ಯಾಯಾಧೀಶರ ಭೇಟಿ

Principal Judge & team visit to NavaJeevan mentally schoolಬೀದರ: ಡಾ.ಬಿ.ಆರ್.ಅಂಬೇಡ್ಕರ್ ಕಲ್ಚರಲ್ ಐಂಡ್ ವೆಲಫೇರ್ ಸೊಸೈಟಿ ಆಶ್ರಯದಲ್ಲಿ ನಗರದ ವಿದ್ಯಾನಗರ ಬಡಾವಣೆಯಲ್ಲಿ ನಡೆಯುತ್ತಿರುವ ನವಜೀವನ ಬುದ್ದಿ ಮಾಂದ್ಯ ವಸತಿ ಶಾಲೆಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ.ಹಂಚಾಟೆ ಸಂಜೀವಕುಮಾರ ಮತ್ತು ನ್ಯಾಯಾಧೀಶರನ್ನೊಳಗೊಂಡ ತಂಡವು ಇಂದು ಭೇಟಿ ನೀಡಿ, ಅಲ್ಲಿಯ ಮಕ್ಕಳ ಸ್ಥಿತಿ ಗತಿ ಹಾಗೂ ಅಲ್ಲಿಯ ವ್ಯವಸ್ಥೆ ಬಗ್ಗೆ ಪರಿಶಿಲಿಸಿದರು.

ಅಲ್ಲಿಯ ಸಮಸ್ಯಗಳ ಬಗ್ಗೆ ಡಾ.ಬಿ.ಆರ್.ಅಂಬೇಡ್ಕರ್ ಕಲ್ಚರಲ್ ಐಂಡ್ ವೆಲಫೇರ್ ಸೊಸೈಟಿ ಅಧ್ಯಕ್ಷ ಅನಿಲಕುಮಾರ ಬೆಲ್ದಾರ್ ಅವರು ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಟ್ಟು, ಈ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಸತತ ಒಂಬತ್ತು ವರ್ಷಗಳಿಂದ ನಮ್ಮ ಸಂಸ್ಥೆ ಪ್ರಯತ್ನಿಸುತ್ತಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅಗತ್ಯ ನೆರವು ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಇಷ್ಟು ಸಣ್ಣ ಸ್ಥಳದಲ್ಲಿ ಈ ಮಕ್ಕಳಿಗೆ ಪೋಷಣೆ ಮಾಡಲು ಕಷ್ಟಸಾಧ್ಯವಾಗುತ್ತಿದ್ದು, ಸರ್ಕಾರ ಸ್ಥಳಾವಕಾಶ ಕಲ್ಪಿಸಿದರೆ, ಈ ಮಕ್ಕಳ ಸರ್ವಾಂಗಿಣ ಅಭಿವೃದ್ಧಿ ವಾತಾವರಣ ನಿರ್ಮಾಣ ಮಾಡಲು ಸಾಧ್ಯವಾಗಿದೆ ಎಂದು ಬೆಲ್ದಾರ್ ನ್ಯಯಾಧೀಶರ ಗಮನಕ್ಕೆ ತಂದಾಗ ಈ ಮಾತಿಗೆ ಸ್ಪಂದಿಸಿದ ನ್ಯಾಯಾಧೀಶರು, ನಿಮ್ಮ ಸಂಸ್ಥೆಯಿಂದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗುವುದೆಂದು ಹೇಳಿದರು.
ನಂತರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಾಧೀಶರು, ಬುದ್ದಿ ಮಾಂದ್ಯ ಮಕ್ಕಳು ಸಹ ಈ ಸಮಾಜದ ಮುಖ್ಯ ಆಸ್ತಿಯಾಗಿದ್ದು, ಅವರ ಸರ್ವಾಂಗಿಣ ವಿಕಾಸ ಜರೂರಿ ಇದ್ದು, ಇದಕ್ಕೆ ಸರ್ವರು ಕೃಜೋಡಿಸಬೇಕಾಗಿದೆ ಎಂದರು.ಇಂತಹ ಮಕ್ಕಳ ಸೇವೆ ಮಾಡುತ್ತಿರುವ ಈ ಸಂಸ್ಥೆಯ ಶ್ರಯ ಮೆಚ್ಚುವಂಥದ್ದು ಎಂದ ಅವರು, ಕೆಲವೇ ದಿನಗಳಲ್ಲಿ ಬೀದರ್ ತಾಲೂಕಿನ ಮನ್ನಳ್ಳಿ ಗ್ರಾಮದಲ್ಲಿ ಬುದ್ದಿಮಾಂದ್ಯ ಮಕ್ಕಳ ತಂದೆ ತಾಯಿಗಳಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಸಿವಿಲ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಎಂ.ಜಿ.ಶಿವಳ್ಳಿ, ಇತರೆ ನ್ಯಾಯಾಧೀಶರಾದ ನ್ಯಾ.ಹೇಮಾ ಪಸ್ತಾಪೂರ, ನ್ಯಾ.ಉಜ್ವಲಾ ವೀರಣ್ಣ, ನ್ಯಾ.ಪರ್ವಿಣ ಬಂಕಾಪೂರ, ಶಾಲೆಯ ಮುಖ್ಯ ಗುರು ಪಂಕಜ್ ಚೌಡೇಕರ್, ಸಹ ಶಿಕ್ಷಕರುಗಳಾದ ಯೋಗೇಶ ಸುಂದಾಳೆ, ವಿಶ್ವನಾಥ ಯರವiನಿ, ಜೈಶ್ರೀ ಭೋಸ್ಲೆ, ಮೀನಾ ಸೂರ್ಯವಂಶಿ, ವಿಜಯಲಕ್ಷ್ಮೀ ನಾಗೂರೆ, ಪ್ರವಿಣ ಪಾಟೀಲ, ಸಂತೋಷ ಬಿರಾದಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಡಳಿತ ಸಹಾಯಕ ಶಂಕ್ರೆಪ್ಪ ಜನಕಟ್ಟಿ ಸೇರಿದಂತೆ ಅಲ್ಲಿಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *