Jaanpada utsav Program

ನೆಮ್ಮದಿ ಬೇಕಾದಲ್ಲಿ ಭಜನೆ ಮಾಡಿ: ಶಿವಯ್ಯ ಸ್ವಾಮಿ

cultural prgm in nittur(b)ಬೀದರ: ಜೀವನದಲ್ಲಿ ಸದಾ ಶಾಂತಿ ಹಾಗೂ ನೆಮ್ಮದಿ ಬೇಕಾದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು, ಅದರಲ್ಲೂ ಭಜನೆಗೆ ಮಾರು ಹೋಗಿ ಎಂದು ಭಾರತಿಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಶಿವಯ್ಯ ಸ್ವಾಮಿ ಕರೆ ನೀಡಿದರು.

ಇತ್ತಿಚೀಗೆ ಭಾಲ್ಕಿ ತಾಲೂಕಿನ ನಿಟ್ಟೂರ್(ಬೀ) ಗ್ರಾಮದ ಮಹಾತ್ಮ ಜ್ಯೋತಿಬಾ ಫುಲೆ ಪದವಿ ಪೂರ್ವ ಮಹಾವಿದ್ಯಾಲಯದ ಅವರಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಬುದ್ದ ಬಸವ ಅಂಬೇಡ್ಕರ್ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಭಾಲ್ಕಿ ತಾಲೂಕು ಮಟ್ಟದ ಜಾನಪದ ಕಲಾ ಉತ್ಸವ ಹಾಗೂ ಪ್ರಾಯೋಜಿತ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದು ಪಾಶ್ಚಾತ್ಯ ಸಂಸ್ಕøತಿಯಿಂದ ಮನುಷ್ಯ ಉದಾಸಿನನಾಗಿ ಬದುಕು ಸಾಗಿಸುತ್ತ, ತನ್ನೆಲ್ಲವನ್ನು ಮರೆತು ಕಾಡು ಪ್ರಾಣಿಗಳ ಹಾಗೆ ಅನಾಗರಿಕನಾಗಿ ಬದುಕುತ್ತಿರುವುದು ದಯನಿಯ ಬೆಳವಣಿಗೆಯಾಗಿದ್ದು, ಭಾರತಿಯ ಕಲೆ, ಸಂಸ್ಕøತಿ, ಸಾಹಿತ್ಯ ಇದೆಲ್ಲವನ್ನು ಶ್ರೀಮಂತಗೊಳ್ಳಲು ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯುತ್ತಿರಬೇಕೆಂದು ತಿಳಿಸಿದರು.

ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯ ಶಿವಕುಮಾರ ಸ್ವಾಮಿ ಮಾತನಾಡಿ, ಇತಿಹಾಸದುದ್ದಕ್ಕು ನಮ್ಮ ಸಂಸ್ಕøತಿ ಇಡೀ ಜಗತ್ತಿಗೆ ಮಾದರಿಯಾಗಿದ್ದು, ಪೂಜ್ಯನಿಯವು ಹೌದು. ಅಂತಹ ಶ್ರೀಮಂತ ಸಂಸ್ಕøತಿಯನ್ನು ಅನುಕರಿಸುವ ಬದಲು ಅರ್ಥಹೀನ ವಿದೇಶಿ ಸಂಸ್ಕøತಿಯನ್ನು ಸ್ವೀಕರಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಜಾನಪದ ರಸರುಚಿಯುಳ್ಳ ಜನಪದ ಕಲೆ ಸಾಹಿತ್ಯ ಬೇಳೆಸಿ, ಪೋಷಿಸಿ, ಜೀವನದುದ್ದಕ್ಕೂ ಅದನ್ನು ಪ್ರೀತಿಸುವಂತಾಗಬೇಕೆಂದು ಕರೆಯಿತ್ತರು.

ಕಾಲೇಜಿನ ಪ್ರಾಚಾರ್ಯ ಬಾಬುರಾವ ಮಾಳಗೆ ಅಧ್ಯಕ್ಷತೆ ವಹಿಸಿದ್ದರು. ಬುದ್ದ ಬಸವ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಮಹೇಶ ಗೋರನಾಳಕರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರವಿಣ ನಿರೂಪಿಸಿದರೆ, ರವಿಕುಮಾರ ಮಂಠಾಳೆ ವಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಯುವ ಕಲಾವಿದೆ ಅನುಷಾ ಹಾಗೂ ಸಂಗಡಿಗರು ಮೋಹರಂ ಗೀತೆ ಹಾಡಿದರೆ, ಸೀಮಾದೇವಿ ಹಾಗೂ ಸಂಗಡಿಗರು ಜನಪದ ಗೀತೆ ಹಾಡಿದರು. ಪೂಜಾ ಹಾಗೂ ಸಂಗಡಿಗರು ಗೀಗೀ ಪದ ಹಾಡುವ ಮೂಲಕ ಒಟ್ಟು 6ಕ್ಕೂ ಅಧಿಕ ಕಲಾ ತಂಡಗಳು ಭಾಗವಹಿಸಿದವು.

Leave a Reply

Your email address will not be published. Required fields are marked *