Jaanpada program

13.bidar-8.ಕರ್ನಾಟಕ ಪಬ್ಲಿಕ್ ಸ್ಕೂಲ್‍ನಲ್ಲಿ

ಜನಮನ ಸೆಳೆದ ವಸ್ತು ಪ್ರದರ್ಶನ

ಬೀದರ: ನಗರದ ಕರ್ನಾಟಕ ಕಾಲೇಜಿನ ಅವರಣದಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್‍ನಲ್ಲಿ ಪ್ರಸಕ್ತ ಸಾಲಿನ ಶಾಲೆಯ ವಾರ್ಷಿಕೋತ್ಸವ ನಿಮಿತ್ಯ ಹಳ್ಳಿಗಾಡಿನ ಉತ್ಸಾಹದ ಮತ್ತು ನೆಮ್ಮದಿಯುತ ಜನಪದ ಶೈಲಿಯನ್ನು ಒತ್ತಡದ ಬದುಕಿನಲ್ಲಿ ಒದ್ದಾಡುತ್ತಿರುವ ನಗರ ವಾಸಿಗಳಿಗೆ ಪರಿಚಯಿಸಲು ವಿವಿಧ ಸನ್ನಿವೇಶ ಪ್ರದರ್ಶಿಸಲಾಯಿತು.
ಈ ಪ್ರದರ್ಶನದಲ್ಲಿ ಹಳ್ಳಿಗಾಡಿನ ದೇವರ ಜಗುಲಿ, ಊಟಕ್ಕೆ ಕುಳಿತ ಜಂಗಮನ ಪಾತ್ರ, ಉಣಬಡಿಸಲು ಹಳ್ಳಿಗಾಡಿನ ಜನಪದ ಶೈಲಿಯ ಹುಗ್ಗಿ, ಕಡುಬು, ಜೋಳದ ಬೋನ, ಬಜ್ಜಿ, ಅಂಬಲಿ ಇತ್ಯಾದಿ ಪದಾರ್ಥಗಳು ತಟ್ಟೆಯಲ್ಲಿ ನೀಡಿ ಉಣಬಡಿಸುತ್ತಿರುವ ದೃಶ್ಯ, ಗೌಡನು ಹೊಲದಲ್ಲಿ ಕುಳಿತು ಎಲೆ ಅಡಿಕೆ ತಿನ್ನುತ್ತಿರುವ ಪರಿ, ಸುಮಂಗಲೆಯರು ಗೌಡರ ಮಗನಿಗೆ ನಾಮಕರಣ ಮಾಡಲು ತೊಟ್ಟಿಲು ತೋಗುತ್ತಿರುವ ದೃಶ್ಯ. ಸಂತೆಯಲ್ಲಿ ಬಳೆ ಮಾರುತ್ತಿರುವುದು, ದಸವ ಧಾನ್ಯಗಳು, ಬಟ್ಟೆಗಳು, ಕಾಯಿಪಲ್ಲೆ, ಹಣ್ಣು ಹಂಪಲು ಮಾರುತ್ತಿರುವ ಸನ್ನಿವೇಶ, ಜನಪದ ಶೈಲಿಯ ಮನೆ, ಅಡುಗೆ ಮನೆ, ಒಲೆ, ಒಲೆಯಲ್ಲಿ ಕಟ್ಟಿಗೆ, ಹಂಚು, ಇತ್ಯಾದಿ ತಿಂಡಿ ತಿನಿಸು ಮಾಡಲು ಬಳಿಸುವ ದಿನ ಬಳಿಕೆ ವಸ್ತುಗಳು, ಹೈನುಗಾರಿಕೆ, ರೇಷ್ಮೆ ಸಾಕಾಣಿಕೆ, ಕುಂಬಾರಿಕೆ, ಕಂಬಾರ, ಬಗಿಡತನ, ಗಿಸಡಿ ಕೆಲಸ ಮಾಡುವ ಭಂಗಿ, ಕುಟ್ಟುವ ಹಾಗೂ ಬೀಸುವ ಸುಮಂಗಲೆಯರು ಇಲಕಲ್ಲಿನ ಸೀರೆಗಳಲ್ಲಿ ಕಲಾವಿದೆಯರ ರೂಪದಲ್ಲಿ ಕಂಗೊಳಿಸುತ್ತಿರುವುದು, ಕೋಳಿ, ಕುರಿ, ಮೀನು, ಜೇನು ಸಾಕಾಣಿಕೆ, ಹೊಲದಲ್ಲಿ ಹಂತಿ ಹೊಡೆದು ರಾಶಿ ಮಾಡುವ ದೃಶ್ಯ ಹೀಗೆ ಅನೇಕ ವೈವಿಧ್ಯಮಯ ಜನಪದ ಶೈಲಿಯ ದೃಶ್ಯಗಳನ್ನು ಪ್ರದರ್ಶಿಸಲಾಯಿತು.
ಈ ಪ್ರದರ್ಶನ ವಿಕ್ಷಣೆಗಾಗಿ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಟ್ರಸ್ಟ್ ಅಧ್ಯಕ್ಷ ಡಾ.ಚನ್ನಬಸಪ್ಪ ಹಾಲಹಳ್ಳಿ, ಕರಾಶಿ ಸಂಸ್ಥೆ ಕಾರ್ಯದರ್ಶಿ ಬಸವರಾಜ ಜಾಬಶೆಟ್ಟಿ, ಟ್ರಸ್ಟ್ ಕಾರ್ಯದರ್ಶಿ ಮಡಿವಾಳಪ್ಪ ಗಂಗಶೆಟ್ಟಿ, ಸಂಸ್ಥೆ ಸದಸ್ಯರಾದ ಚಂದಾ ಶಾಂತಕುಮಾರ, ನಾಗಶೆಟ್ಟಿ ಹಂಗರಗಿ, ವಿಜಯಕುಮಾರ ಗುನ್ನಳ್ಳಿ, ಶಿವಶಂಕರ ಶಟಕಾರ ಹಾಗೂ ಇತರರು ಆಗಮಿಸಿದ್ದರು.
ಶಾಲೆಯ ಸಹ ಶಿಕ್ಷಕಿ ಶ್ರೀವಾಣಿ ದೇಶಮುಖ ಪ್ರಾರ್ಥನೆ ಸಲ್ಲಿಸಿದರು. ಶಾಲೆಯ ಪ್ರಾಂಶುಪಾಲ ಪ್ರೊ.ಎಸ್.ಎಸ್.ದೇವರಕಲ್ ಸರ್ವರನ್ನು ಸ್ವಾಗತಿಸಿದರು. ಸಹ ಶಿಕ್ಷಕಿ ಪ್ರೀತಿ ನಿರೂಪಿಸಿದರೆ, ಸರಿತಾ ವಂದನೆ ಸಲ್ಲಿಸಿದರು.


 

Leave a Reply

Your email address will not be published. Required fields are marked *