Jaanpada Cultural Program

ಸಂಗೀತದಿಂದ ಸಂಸ್ಕøತಿ ಪ್ರಾಪ್ತಿ: ಎಮ್.ಕೆ.ವಗ್ಗೇರ್

Cultural Prgm In Janapada Stuy Centreಬೀದರ: ವಿದ್ಯೆಯಿಂದ ಸಂಸ್ಕಾರ ದೊರೆತರೆ, ಸಂಗೀತದಿಂದ ಸಂಸ್ಕøತಿ ಪ್ರಾಪ್ತವಾಗುವುದೆಂದು ಭಾರತ ಸಂಚಾರ ನಿಗಮದ ಜಿಲ್ಲಾ ಪ್ರಧಾನ ವ್ಯವಸ್ಥಾಪಕ ಎಮ್.ಕೆ.ವಗ್ಗೇರ್ ಅಭಿಪ್ರಾಯ ಪಟ್ಟಿರುವರು.
ಬುಧವಾರ ನಗರದ ಜನವಾಡಾ ರಸ್ತೆಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಅಧ್ಯಯನ ಕೇಂದ್ರದ ಅವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಭಾರತ್ ಯುತ್ ವೆಲಫೇರ್ ಏಜ್ಯುಕೇಶನ್ ಐಂಡ್ ರೂರಲ್ ಡೆವಲಪಮೆಂಟ್ ಸೊಸೈಟಿ, ಸ್ವಾಮಿ ವಿವೇಕಾನಂದ ಯುವ ಶಕ್ತಿ ಕೇಂದ್ರ ಕಾಳಸರ ತುಗಾಂವ, ಬುದ್ದ ಬಸವ ಅಂಬೇಡ್ಕರ್ ಯುವಕ ಸಂಘ ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಅಧ್ಯಯನ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ  ದಿವ್ಯ ಚೇತನ ಸ್ವಾಮಿ ವಿವೇಕಾನಂದರ 153ನೇ ಜಯಂತ್ಯೋತ್ಸವದ ನಿಮಿತ್ಯ ರಾಷ್ಟ್ರೀಯ ಯುವ ದಿನ ಹಾಗೂ ಸಪ್ತಾಹದಡಿ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿದಿ ಮಾತನಾಡಿದರು.
ಇಂದು ಯುವಶಕ್ತಿ ಪಾಶ್ಚಾತ್ಯ ಸಂಸ್ಕøತಿಗೆ ಮಾರು ಹೋಗಿ, ದೇಶಿ ಕಲೆ, ಸಾಹಿತ್ಯ, ಸಂಗೀತವೆಲ್ಲ ಮರೆತು ಬರೀ ಡೀಜೆ ಸೌಂಡ್ ಹಚ್ಚಿ, ಅರ್ಥವಿಲ್ಲದ ಹಾಡುಗಳಿಗೆ ತಾಳ ಹಾಕುತ್ತ ಕುಣಿಯುತ್ತಿರುವುದನ್ನು ಗಮಿನಿಸಿರೆ, ನಮ್ಮ ಯುವಜನರಿಗೆ ದೆವ್ವ ಹಿಡಿದ ಹಾಗೆ ಕಾಣುತ್ತಿದ್ದು, ಇಡೀ ಪ್ರಪಂಚ ಗೌರವಿಸುವ ವಿವೇಕಾನಂದರ ನಾಡಾದ ನಮ್ಮ ಭರತ ಭೂಮಿಯ ಗೌರವ ಉಳಿಸಲು ಜನಪದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ಜಾನಪದ ದೇಶಿ ಕಲೆ ಹಾಗೂ ಸಂಸ್ಕøತಿ ಮೈಗೂಡಿಸಿಕೊಳ್ಳ:ಲು ಕರೆ ನೀಡಿದರು.
ಸಂಗೀತದಿಂದ ಮನಸ್ಸಿಗೆ ಮದ, ಮನೊರಂಜನೆ ಜೊತೆಗೆ ನಮ್ಮ ಉಲ್ಲಾಸ, ಹುಮ್ಮಸ್ಸು ಇಮ್ಮಡಿಗೊಳಿಸುತ್ತದೆ. ನಮ್ಮ ಆರೊಗ್ಯ ಅಭಿವೃದ್ಧಿಗಾಗಿ ಸಹ ಜನಪದ ಶೈಲಿ ಹಾಡುಗಳು ಸಹಕಾರಿಯಾಗಿರುವವು. ಆದರೆ ಇಂದಿನ ಬೃಹತ್ ಪ್ರಮಾಣದ ಡೀಜೆ ಸೌಂಡ್ ನಮ್ಮ ಆಯುಷ್ಯ ಕ್ಷೀಣಿಸುವಂತೆ ಮಾಡುವುದಲ್ಲದೆ, ಹೃದಯಘಾತ, ರಕ್ತದೊತ್ತಡಗಳಂತಹ ಭೀಕರ ಕಾಯಿಲೆಯಡೆಗೆ ಕೊಂಡೊಯ್ಯುತ್ತಿದ್ದು, ಇದನ್ನು ತಪ್ಪಿಸಲು ಜನಪದ ಕಲೆ, ಸಾಹಿತ್ಯ, ಸಂಸ್ಕøತಿ ನಮ್ಮ ದೈನಂದಿನ ಬದುಕಿಗೆ ಮಾರ್ಗದರ್ಶನವಾಗಬೇಕಿದೆ ಎಂದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಅಧ್ಯಯನ ಕೇಂದ್ರದ ಅತಿಥಿ ಉಪನ್ಯಾಸಕ ರಾಜಕುಮಾರ ಹೆಬ್ಬಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಟಿವಿ ಹಾಗೂ ಚಲನ ಚಿತ್ರಗಳು ನಮ್ಮ ಮನಸ್ಸು ಸಂಕುಚಿತ ಮನೋಭಾವಕ್ಕೆ ಜಾರುವಂತೆ ಮಾಡಿದಲ್ಲದೆ, ಪ್ರೀತಿ, ವಾತ್ಸಲ್ಯಗಳಿಂದ ದೂರ ಇರಿಸಿದ್ದು, ಇದು ಪರಸ್ಪರ ದ್ವೇಷ, ಅಸುಯೆಗಳಿಗೂ ಸಹ ನೇರ ಕಾರಣವಾಗುತ್ತಿದ್ದು, ಈ ದೇಶ ಮತ್ತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಲು ವಿವೇಕಾನಂದರ ಸ್ವಾಭಿಮಾನ, ದೇಶಭಕ್ತಿ, ಸಹೃದಯ, ಸಹಕಾರ ಮನೋಭಾವ ಜಾಗೃತವಾಗಬೇಕಾಗಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂಬರುವ ದಿನಗಳಲ್ಲಿ ಸಂಗೀತ, ಸಾಹಿತ್ಯ, ಕಲೆ ಉಳಿಸಲು ಪ್ರತ್ಯೇಕ ಪ್ರಾಧಿಕಾರಗಳನ್ನು ಹುಟ್ಟು ಹಾಕಿ, ಜಾನಪದ ಸೊಗಡಿನ ಹಳ್ಳಿ ಜೀವನಕ್ಕೆ ಒತ್ತು ಕೊಡಬೇಕಾಗಿದೆ. ಜೊತೆಗೆ ದೂರದರ್ಶನ ಹಾಗೂ ವಿವಿಧ ತಾಂತ್ರಿಕ ಉಪಕರಣಗಳಲ್ಲಿ ದೇಶಿ ಕಲೆಗೆ ಪ್ರೋತ್ಸಾಹ ಕೊಡುವಂತಹ ಕಾರ್ಯಕ್ರಮಗಳು ಪ್ರಸಾರಗೋಳ್ಳಬೇಕು, ಯುವ ಜನರು ಹೆಚ್ಚಾಗಿ ಇಂತಹ ಜಾನಪದ ಶೈಲಿಯ ಅಧ್ಯಯನ ಮಾಡಿ, ಉದ್ಯೋಗ ಗಿಟ್ಟಿಸಿಕೊಳ್ಳುವುದಲ್ಲದೆ, ಇತರರಿಗೂ ಮಾದರಿಯಾಗಿ ಬದುಕು ಸಾಗಿಸುವಂತೆ ಕರೆ ಕೊಟ್ಟರು.
ಅಧ್ಯಯನ ಕೇಂದ್ರದ ಅತಿಥಿ ಉಪನ್ಯಾಸಕಿ ಅಂಜನಾ ಪಾಟೀಲ, ಮಂಗಲಾ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಮಂಗಲಾ ಮರಕಲೆ, ರಾಜ್ಯ ಸಂಪನ್ಮೂಲ ವ್ಯಕ್ತಿ ಡಾ.ಆರ್.ಕೆ.ಚಾರಿ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಸಂಜುಕುಮಾರ ಕಾರಗಾ, ರಾಜಕುಮಾರ ಬಿದ್ರಿ, ಪವನಕುಮಾರ ನಾಟೇಕರ್, ಲಿಂಗಪ್ಪ ಮಡಿವಾಳ್, ಸುನಿತಾ ಹಾಗೂ ಇತರರಿದ್ದರು.
ಆರಂಭದಲ್ಲಿ ಕು.ಜೈಶ್ರೀ ಮೇತ್ರೆ ಪ್ರಾರ್ಥನೆ ಸಲ್ಲಿಸಿದರು. ಕಲಾವಿದ ಶಂಕರ ಚೊಂಡಿ ಜಾನಪದ ಗೀತೆಗಳು ಹಾಡಿ, ಸಭಿಕರ ಮನರಂಜಿಸಿದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕøತರೂ ಹಾಗೂ ಸ್ವಾಮಿ ವಿವೇಕಾನಂದ ಯುವಶಕ್ತಿ ಕೇಂದ್ರದ ಅಧ್ಯಕ್ಷ ಶಿವಕುಮಾರ ಸ್ವಾಮಿ ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯರೂ ಹಾಗೂ ಬುದ್ದ ಬಸವ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಮಹೇಶ ಗೋರನಾಳಕರ್ ಕಾರ್ಯಕ್ರಮ ನಿರೂಪಿಸಿದರೆ, ರಾಷ್ಟ್ರೀಯ ಕಿರಿಯ ಸಂಶೋಧನಾ ಫೆಲೋಶಿಪ ಪುರಸ್ಕøತ ಶಿವಶರಣಪ್ಪ ಗಣೇಶಪೂರ ವಂದನೆ ಸಲ್ಲಿಸಿದರು.

Leave a Reply

Your email address will not be published. Required fields are marked *