Invitation to Jaanpada Samelan

ಸಮ್ಮೇಳನಾಧ್ಯಕ್ಷರಿಗೆ ಅಮಂತ್ರಣ

invatation to janapada sammelana adhyakshyaಬೀದರ: ನಗರದ ನೌಬಾದ್‍ನಲ್ಲಿ ಶುಕ್ರವಾರ ಕರ್ನಾಟಕ ಜಾನಪದ ಪರಿಷತ್ತಿನ ಬೀದರ್ ತಾಲೂಕು ಪ್ರಥಮ ಜಾನಪದ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷರಾಗಿ ನಿಯೋಜಿತರಾದ ಶೇಷರಾವ ಸೋಪಾನರಾವ ಬೆಳಕುಣಿಕರ್ ಅವರನ್ನು ಅವರ ನಿವಾಸದಲ್ಲಿ ಅಮಂತ್ರಿಸಿ, ಸಂಪ್ರದಾಯದಂತೆ ವಿಳ್ಳೆ ನೀಡಿ, ಸನ್ಮಾನ ಮಾಡಲಾಯಿತು.

ಈ ತಿಂಗಳ 10ರಂದು ನಗರದ ಕರ್ನಾಟಕ ಸಾಹಿತ್ಯ ಸಂಘದ ಅವರಣದಲ್ಲಿ ಜರುಗಲಿರುವ ಬೀದರ್ ತಾಲೂಕು ಪ್ರಥಮ ಜಾನಪದ ಸಮ್ಮೇಳದ ಸರ್ವಾಧ್ಯಕ್ಷರನ್ನಾಗಿ ಶೇಷರಾವ ಅವರನ್ನು ಇತ್ತಿಚೀಗೆ ಜಿಲ್ಲಾ ಜಾನಪದ ಪರಿಷತ್ತಿನ ಕಾರ್ಯಕಾರಿ ಸಭೆಯಲ್ಲಿ ನಿಯೋಜಿಸಲಾಗಿರುವ ಪ್ರಯುಕ್ತ ಈ ಸನ್ಮಾನ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಕಜಾಪ ಜಿಲ್ಲಾಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ, ತಾಲೂಕು ಕಜಾಪ ಅಧ್ಯಕ್ಷ ಎಸ್.ಬಿ.ಕುಚಬಾಳ್, ಕೋಶಾಧ್ಯಕ್ಷ ಲಕ್ಷ್ಮಣ ಕಾಂಚೆ, ಕಾರ್ಯದರ್ಶಿ ಮುಕ್ತೆದಾರ್ ತಾಜ್, ಭಾರತಿಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಶಿವಯ್ಯ ಸ್ವಾಮಿ, ಕದಂಬ ಸಂಸ್ಥೆ ಅಧ್ಯಕ್ಷ ರಾಜಕುಮಾರ ಹೆಬ್ಬಾಳೆ, ನಿವೃತ್ತ ಪ್ರಾಚಾರ್ಯ ಅರವಿಂದ ಹೇಡೆ, ಹಿರಿಯ ಸಾಹಿತಿ ನೀಲಕಂಠರಾವ, ಉಪನ್ಯಾಸಕ ಗೌತಮ ಸೇರಿದಂತೆ ಜಾನಪದ ಪರಿಷತ್ತಿನ ಇತರೆ ಪದಾಧಿಕಾರಿಗಳು, ಜಾನಪದ ವಿದ್ವಾಂಶರು, ಸಾಹಿತಿಗಳು ಉಪಸ್ಥಿತರಿದ್ದರು.

Sanjevani : News Editor : Mr.Shivkumar Swamy

Leave a Reply

Your email address will not be published. Required fields are marked *