Honour Prgram in Kannada Sahitya Sangh

ಸಾರ್ವಜನಿಕ ಹುದ್ದೆಯಲ್ಲಿದ್ದವರು

ಚಾರಿತ್ರ್ಯೆವಂತವರಾಗಿರಬೇಕು: ಮನು ಬಳಿಗಾರ

ಬೀದರ: ಸಾರ್ವಜನಿಕ ಹುದ್ದೆಯಲ್ಲಿರುವ ಪ್ರತಿಯೊಬ್ಬರು ಚಾರಿತ್ರ್ಯೆವಂತವರಾಗಿದ್ದಾಗಲೇ ಸಮಾಜ ಗೌರವದಿಂದ ಅವರನ್ನು ಕಾಣಲು ಸಾಧ್ಯವಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿವೃತ್ತ ಆಯುಕ್ತರೂ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಮನು ಬಳಿಗಾರ ಹೇಳಿದರು.

ನಗರದ ಹೃದಯಭಾಗದಲ್ಲಿರುವ ಕರ್ನಾಟಕ ಸಾಹಿತ್ಯ ಸಂಘದ ಕಾರ್ಯಾಲಯದಲ್ಲಿ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಬೀದರ ಜಿಲ್ಲೆಯನ್ನು ಕೆಲವರು ಹಿಂದುಳಿದ ಜಿಲ್ಲೆ ಎಂದು ಕರೆದರೂ ನಾನು ಯಾವತ್ತು ಹಾಗೆ ಹೇಳುವುದಿಲ್ಲ. ಎಕೆಂದರೆ, ಬೀದರ ಜಿಲ್ಲೆಯು ಸದಾ ಸಾಹಿತ್ಯ, ಸಂಸ್ಕøತಿ, ಕಲೆ, ಜಾನಪದ ಪರಿಷತ್ತಿನ ಖಣಜ ಎಂಬುದು ಯಾವತ್ತೂ ಮರೆಯುವಂತಿಲ್ಲ. ಎಲ್ಲಕ್ಕೂ ಮಿಗಿಲಾಗಿ ಶೋಷಿತ ವರ್ಗವನ್ನು ಮೇಲೆತ್ತುವ ಕಾರ್ಯ ಮಾಡಿದ ಪೂಣ್ಯ ಭೂಮಿ ಇದು, ಇಡೀ ಜಗತ್ತಿಗೆ ಮಾದರಿ ಎಂಬುದು ಮನಗಾಣಬೇಕಿದೆ. ದಲಿತರನ್ನು ಮೇಲೆತ್ತಲು ಇಲ್ಲಿನ ಮೇಲ್ವರ್ಗದ ಜನಗಳು ಹೋರಾಡಿದ ಪರಿ ವಿಶ್ವಮಾನ್ಯವಾದುದರಿಂದ ತನ್ನ ಅಧಿಕಾರದ ಅವಧಿಯಲ್ಲಿ ಹೆಚ್ಚಿನ ಅನುದಾನ ಬೀದರ ಜಿಲ್ಲೆಗೆ ನೀಡಿದ್ದು ಹೆಮ್ಮೆಯಿಂದ ಹೇಳಿಕೊಂಡಿರುವುದಾಗಿ ತನ್ನ ಮನದಾಳದ ಮಾತು ಬಿಚ್ಚಿಟ್ಟರು.

ಇಂತಹ ಕ್ರಾಂತಿ ಭೂಮಿ ಬೀದರ ಜಿಲ್ಲೆಯಿಂದಲೇ ಕನ್ನಡಮ್ಮನ ಸೇವೆಗಾಗಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ತನ್ನ ಪ್ರಚಾರ ಕಾರ್ಯ ಆರಂಭಿಸಿರುವುದಾಗಿ ತಿಳಿಸಿ, ಎಂ.ಎಸ್ ಬಿಲ್ಡಿಂಗ್‍ನಲ್ಲಿ ಒಂದು ಕಡೆ ಕುಳಿತು ರಾಜ್ಯದ ಸಾಂಸ್ಕøತಿಕ, ಸಾಹಿತ್ತಿಕ ಹಾಗೂ ಕಲಾವಿದರ ಸೇವೆ ಮಾಡುವ ಸೌಭಾಗ್ಯ ದೊರೆತ್ತಿದ್ದು, ಇನ್ನು ಮುಂದೆ 6 ವರೆ ಕೋಟಿ ಕನ್ನಡಿಗರ ಮನೆ ಮಗನಾಗಿ ಸೇವೆ ಮಾಡುವ ಮಹತ್ವಕಾಂಕ್ಷಿಯಾಗಿ ಸ್ಪರ್ಧೆ ಬಯಸಿರುವುದಾಗಿ ಹೇಳಿ, ಬೀದರ ಜಿಲ್ಲೆಯ ಜನತೆಯ ಆಶಿರ್ವಾದ ಸಿಕ್ಕರೆ ನಾಡಿನ ಆಶಿರ್ವಾದ ಫಲಿಸುವ ಭರವಸೆ ವ್ಯಕ್ತಪಡಿಸಿದರು.

ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಡಾ.ಜಗನ್ನಥ ಹೆಬ್ಬಾಳೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಈ ಭಾಗದ ಸಾಹಿತ್ಯ ಹಾಗೂ ಸಂಸ್ಕøತಿಯ ಶ್ರೀಮಂತಿಕೆಗೆ ತಮ್ಮ ಅಮುಲ್ಯ ಸೇವೆ ಮಾಡಿ, ಹೆಚ್ಚಿನ ಅನುದಾನ ನೀಡಿರುವುದು ಸ್ಮರಣಿಯವಾಗಿದ್ದು, ತಮ್ಮ ಸೇವೆಯ ರುಣ ತೀರಿಸಲು ಜಿಲ್ಲೆಯ ಪ್ರತಿಯೋರ್ವ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರುಗಳು ಪ್ರಚಂಡ ಬಹುಮತ ನೀಡುತ್ತೇವೆಂದರು.

ಈ ಸಂದರ್ಭದಲ್ಲಿ ಕರ್ನಾಟಕ ಸಾಹಿತ್ಯ ಸಂಘದ ಟ್ರಸ್ಟ್ ಅಧ್ಯಕ್ಷ ಶಂಕ್ರೆಪ್ಪ ಹೊನ್ನಾ, ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಅದ್ಯಕ್ಷ ಪ್ರೊ.ಎಸ್.ಬಿ.ಬಿರಾದಾರ, ಕರ್ನಟಕ ಬಾಲವಿಕಾಸ ಅಕಾಡೆಮಿ ನೂತನ ಸದಸ್ಯ ಶಿವಕುಮಾರ ಸ್ವಾಮಿ, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯ ರಾಜೇಂದ್ರಸಿಂಗ್ ಪವಾರ, ಕರ್ನಾಟಕ ಕಾಲೇಜಿನ ಆಂಗ್ಲ ಸ್ನಾತ್ತಕೊತ್ತರ ವಿಭಾಗದ ಮುಖ್ಯಸ್ಥ ಉಮಾಕಾಂತ ಪಾಟೀಲ, ಪಂಚಾಕ್ಷರಿ ಗವಾಯಿ ಸೇವಾ ಸಂಘದ ಕಾರ್ಯದರ್ಶಿ ರಾಜೇಂದ್ರ ಬಿರಾದಾರ, ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಎಸ್.ಬಿ.ಕುಚಬಾಳ್, ಖಜಾಂಚಿ ಲಕ್ಷ್ಮಣರಾವ ಕಾಂಚೆ, ಕನ್ನಡ ಸಾಹಿತ್ಯ ಸಂಘದ ಅದ್ಯಕ್ಷ ಸುರೇಶ ಚನ್ನಶಟ್ಟಿ, ದೇಶಪಾಂಡೆ ಪ್ರತಿಷ್ಟಾನದ ಅಧ್ಯಕ್ಷ ಎಂ.ಜಿ.ದೆಶಪಾಂಡೆ, ಕರುಣಾಮಯ ಯುವಕ ಸಂಘದ ಅಧ್ಯಕ್ಷ ರಾಜಕುಮಾರ ಹೆಬ್ಬಾಳೆ, ಓಂ ಸಾಯಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಶಿವಶರಣಪ್ಪ ಗಣೇಶಪೂರ, ಕರ್ನಾಟಕ ಜಾನಪದ ಪರಿಷತ್ತಿನ ಕಮಠಾಣ ವಲಯ ಅಧ್ಯಕ್ಷ ಬಸಯ್ಯ ಸ್ವಾಮಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಅದ್ಯಯನ ಕೇಂದ್ರದ ಅತಿಥಿ ಉಪನ್ಯಾಸಕರುಗಳಾದ ಶಂಕರ ಚೊಂಡಿ, ರಾಜಕುಮಾರ ಬಿದ್ರಿ, ಎಂ.ಎಂ ಗಜರೆ, ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಾನಂದ ಗುಂದಗಿ, ನಿಕಟಪೂರ್ವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನಾಗಶೆಟ್ಟಿ ಜ್ಯೋತೆಪ್ಪನೋರ್, ನೃತ್ಯ ಕಲಾವಿದ ಜೀವರಾಜ ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *