Honor Prgoram in Bidarcity

ಯುವ ಸಬಲೀಕರಣ ಅಧಿಕಾರಿ ಅಷ್ಟಗಿಗೆ ಆತ್ಮಿಯ ಸನ್ಮಾನ

Honour To News AD DYSSO Amratkumar Astagiuಬೀದರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನೂತನ ಸಹಾಯಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿರುವ ಕಲಬುರ್ಗಿ ಜಿಲ್ಲೆಯ ಅಮೃತಕುಮಾರ ಅಷ್ಟಗಿ ಅವರನ್ನು ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಗುರುವಾರ ಆತ್ಮಿಯವಾಗಿ ಸನ್ಮಾನಿಸಿಒದರು.
ಕಳೆದ ಹಲವು ವರ್ಷಗಳಿಂದ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಪ್ರಭಾರಿಗಳ ಕಾರಬಾರು ಜೋರಾಗಿತ್ತು. ಮಿಗಿಲಾಗಿ ಅಲ್ಲಿರುವ ದ್ವಿತಿಯ ದರ್ಜೆ ಸಹಾಯಕಿ ಪದ್ಮಾವತಿ ಅವರೇ ಇಲಾಖೆಗೆ ಸರ್ವಾಧಿಕಾರಿಯಾಗಿ ನಡೆದುಕೊಳ್ಳುತ್ತಿದ್ದರು. ಇಲಾಖೆಗೆ ಸಂಬಂಧಪಟ್ಟ ಕಾರ್ಯಕ್ರಮಗಳು ಯುವಕರ ಪಾಲಾಗದೇ ಅವು ಶಾಲಾ ಕಾಲೇಗಳ ಅಥವಾ ಕೆಲವರ ಸ್ವತ್ತಾಗಿದ್ದವು. ಒಟ್ಟಾರೆ ಇಲಾಖೆ ಕಾರ್ಯವೈಖರಿ ಬರೀ ಬೃಹತ್ ಕಟ್ಟಡಕ್ಕೆ ಹಾಗೂ ಅಲ್ಲಿಯ ನೆಹರು ಕ್ರೀಡಾಂಗಣಕ್ಕೆ ಸೀಮಿತವಾಗಿತ್ತು.
ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಖಾಯಂ ಅಧಿಕಾರಿ ಇಲ್ಲವೆಂಬ ಅಂಶ ಇತ್ತಿಚೀಗೆ ಜಿಲ್ಲೆಗೆ ಆಗಮಿಸಿದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್ ಅವರ ಗಮನಕ್ಕೆ ತಂದಾಗ 15 ದಿನಗಳಲ್ಲಿ ಜಿಲ್ಲೆಗೆ ಒಬ್ಬ ಖಾಯಂ ಅಧಿಕಾರಿಯನ್ನು ಕಳುಹಿಸುವ ಭರವಸೆ ನೀಡಿದ್ದರು. ಅದರಂತೆ ಬೀದರ್‍ಗೆ ಬರುವ ಇಚ್ಛೆ ಹೊಂದಿದ್ದ ಹಾವೇರಿ ಕ್ರೀಡಾಧಿಕಾರಿ ಅಷ್ಟಗಿ ಅವರು ಇತ್ತಿಚೀಗಷ್ಟೇ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಪಿಲ ಮೋಹನ ಅವರಿಗೆ ಭೇಟಿ ಮಾಡಿ, ಬೀದರ್‍ಗೆ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ ಕಪಿಲ ಮೋಹನ, ಅಷ್ಟಗಿಗೆ ಬೀದರ್‍ಗೆ ವರ್ಗ ಮಾಡಿ ಆದೇಶ ಹೊರಡಿಸಿದ್ದರಾದರೂ, ಹಾವೇರಿಯಲ್ಲಿ ಸಹ ಖಾಯಂ ಅಧಿಕಾರಿ ಇಲ್ಲದ ಕಾರಣ ಇವರನ್ನು ಅಲ್ಲಿಂದ ಬೀದರ್‍ಗೆ ಕಳುಹಿಸಲು ಅಲ್ಲಿನ ಜಿಪಂ ಸಿಇಒ ಮೀನಾಮೇಷ ಏಣಿಸುತ್ತಿದ್ದಾಗಲೇ ಸರ್ಕಾರದ ತುರ್ತು ಆದೇಶ ಬಂದ ಹಿನ್ನಲೆಯಲ್ಲಿ ಅಷ್ಟಗಿಗೆ ಬೀದರ್‍ಗೆ ಖಾಯಂ ಆಗಿ ಕಳುಹಿಸಿ, ಪ್ರಭಾರಿಯಾಗಿ ಹಾವರಿಯಲ್ಲಿ ಇರಿಸಿಕೊಳ್ಳಯವಲ್ಲಿ ಅಲ್ಲಿಯ ಜಿಲ್ಲಾ ಪಂಚಾಯತ್ ಐಶಸ್ವಿಯಾಗಿದೆ.
ಡಿಸೆಂಬರ್ 31ರಂದು ಬೀದರ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಳಾಖೆಯ ನೂತನ ಸಹಾಯಕ ನಿರ್ದೇಸಕರಾಗಿ ಅಧಿಕಾರ ವಹಿಸಿಕೊಂಡು ಪ್ರಭಾರಿಯಾಗಿ ಕಾರ್ಯಭಾರ ನೋಡಿಕೊಳ್ಳುತ್ತಿದ್ದ ಜಿಲ್ಲಾ ಪಂಚಾಯತ್‍ನ ವಸತಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಚಂದ್ರಕಾಂತ ತಾಂಡೂರೆ ಅವರನ್ನು ಅವರ ಮೂಲ ಇಳಾಖೆಗೆ ಬೀಳ್ಕೊಟ್ಟರು.
ಹಲವು ವರ್ಷಗಳಿಂದ ಈ ಇಲಾಖೆಯ ಕಾರ್ಯಚಟುವಟಿಕೆಗಳು ತುಕ್ಕು ಹಿಡಿದಿದ್ದು, ಇನ್ನು ಮುಂದೆ ಹೊಸ ಅಧಿಕಾರಿ ಅಷ್ಟಗಿ ನಿಂತ ನೀರಾದ ಇಲಾಖೆಯ ಕಾರ್ಯವೈಖರಿಗೆ ಚುರುಕು ಮುಟ್ಟಿಸಬಹುದೆಂಬ ಸದಾಶಯ ಬಯಸಿ, ಜಿಲ್ಲೆಯ ಅನೇಕ ಯುವ ಸಂಘಗಳ ಪ್ರಮುಖರು ಅಷ್ಟಗಿ ಅವರನ್ನು ನಗರದ ಮೋಹನ ಮಾಕೇಟ್‍ನಲ್ಲಿರುವ ಶಾಂತಿಶ್ವರ ಸಂಸ್ಥೆ ಕಚೇರಿ ಅವರಣದಲ್ಲಿ ಆತ್ಮಿಯವಾಗಿ ಸನ್ಮಾನಿಸಿ, ಸ್ವಾಗತ ಕೋರಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕøತ ಶಿವಯ್ಯ ಸ್ವಾಮಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕøತರಾದ ಶಿವಕುಮಾರ ಸ್ವಾಮಿ, ಮಹೇಶ ಗೋರನಾಳಕರ್, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕøತ ರಾಜಕುಮಾರ ಹೆಬ್ಬಾಳೆ, ರಾಜ್ಯ ಸಂಪನ್ಮೂಲ ವ್ಯಕ್ತಿ ಡಾ.ಆರ್.ಕೆ.ಚಾರಿ, ನಿವೃತ್ತ ಇಲಾಖೆಯ ಸಹಾಯಕ ನಿರ್ದೇಶಕ ಜೆ.ಎಸ್.ಕ್ಷೀರ್‍ಸಾಗರ, ಮುಧೋಳ ಶಿವಲಿಂಗೇಶ್ವರ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಶಿವಕಾಂತ ಸ್ವಾಮಿ, ಜಿಲ್ಲಾ ದಲಿತ ಜನಸೇನೆ ಅಧ್ಯಕ್ಷ ಸಂಜೀವಕುಮಾರ ಕಾರಗಾ, ತೆಲಂಗಾಣಾ ರಾಜ್ಯದ ರಾಷ್ಟ್ರೀಯ ಕಿರಿಯ ಸಂಶೋಧನಾ ಫೆಲೋಶಿಪ್ ಪುರಸ್ಕøತ ಶಿವಶರಣಪ್ಪ ಗಣೇಶಪೂರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *