Hi Ideals IT Company 1st Anniversary

Hi-Ideals Techpvtltd1 hiideals_logoHi Ideals  Technologies Pvt. Ltd.

ಸಂಸ್ಥೆ ವ್ಯಾಪಾರದ ಖಣಜವಾಗದೆ, ಸಾಮಾಜಿಕ ಕಳಕಳಿ ಹೊಂದಲಿ: ಖುಬಾ

ಬೀದರ: ಒಂದು ಸಂಸ್ಥೆ ಬರೀ ವ್ಯಾಪಾರದ ಖಣಜವಾಗಿದ್ದರೆ ಅಲ್ಲಿ ಬರೀ ಸ್ವಾರ್ಥ ತುಂಬಿರುತ್ತದೆ, ಅದು ಜನರ ಮನೆ ಬಾಗಿಲಿಗೆ ತಲುಪುವಂತಾಗಲು ಅದರಲ್ಲಿ ಸಾಮಾಜಿಕ ಹಾಗೂ ಮೌಲ್ಯಾಧಾರಿತ ಗುಣ ಅಡಕವಾಗಿರಬೇಕೆಂದು ಸಂಸದ ಭಗವಂತ ಖುಬಾ ಅಭಿಪ್ರಾಯಪಟ್ಟರು. ನಗರದ ಹೋಟಲ ಶಿವಾ ಇಂಟರ್‍ನ್ಯಾಶ್ನಲ್ ಆವರಣದಲ್ಲಿ ಹಾಯ್ ಐಡಿಯಲ್ಸ್ ಟೆಕ್ನಾಲಜಿಸ್ ಪ್ರಾವೆಟ್ ಲಿಮಿಟೇಡ್‍ನ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದು ಆಧುನಿಕ ತಂತ್ರಜ್ಞಾನದ ಮೇಲೆ ಜಗತ್ತು ನಿಂತಿದೆ. ಅದು ಇಲ್ಲದೆ ಉಗುಳು ನುಂಗಲು ಸಹ ಇಂದು ಕಷ್ಟ ಸಾಧ್ಯವಾದ ಇಂತಹ ಪರಿಸ್ಥಿತಿಯಲ್ಲಿ ತಂತ್ರಾಂಶದ ಹೆಸರಲ್ಲಿ ಅವಹೇಳನಕಾರಿ ಘಟನೆಗಳು ನಿರಂತರವಾಗಿ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಇಂತಹ ಕಾರ್ಯಾಗಾರ ಹಾಗೂ ವಿಚಾರ ಸಂಕಿರಣಗಳನ್ನು ಆಯೋಜಿಸಿ, ಪ್ರಜ್ಞಾವಂತ ಯುವ ಜನತೆಗೆ ಹೊಸ ಆಯಾಮ ಕಂಡುಕೊಳ್ಳಲು ಅವಕಾಶ ಕಲ್ಪಿಸುವಂತೆ ಖುಬಾ ಕೋರಿದರು. ಜಿಲ್ಲೆಯಲ್ಲಿ ಇಂತಹ ಆಧುನಿಕ ತಂತ್ರಜ್ಞಾನ ಹೊಂದಿದ ಕಂಪನಿ ಕಳೆದ ಒಂದು ವರ್ಷದಲ್ಲಿ ಕ್ರಿಯಾಶಿಲವಾಗಿ ಕಾರ್ಯನಿರ್ವಹಿಸುತ್ತಿರುವುದು ಸಂತಸದ ಸಂಗತಿಯಾಗಿದ್ದು, ಜಿಲ್ಲೆಯ ಯುವ ಜನತೆಗೆ ಹೆಚ್ಚಿನ ತರಬೇತಿ, ಪ್ರೋತ್ಸಾಹ, ಅವಕಾಶ ಕಲ್ಪಿಸುವ ಪ್ರಾಮಾಣಿಕ ಕಾರ್ಯ ಈ ಕಂಪನಿ ಮುಂದುವರೆಸುವಂತೆ ಕರೆ ನೀಡಿದರು. ಬೀದರ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ.ಶಟಕಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ನಮ್ಮ ಜಿಲ್ಲೆಯ ಯುವಕರು ಎಲ್ಲ ಕ್ಷೇತ್ರದಲ್ಲಿ ಮುಂದಿದ್ದಾರೆ. ಅದರಲ್ಲಿ ಆಧುನಿಕ ತಂತ್ರಜ್ಞಾನ ಸಹ ಹೊರತಲ್ಲ, ಯುವಜನರು ಮೂಕ್ತವಾಗಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಲು ಪಾಲಕರು ಮೂಕ್ತ ಅವಕಾಶ ಕಲ್ಪಿಸಬೇಕು ಅಂದಾಗ ಇಂತಹ ಆಧುನಿಕ ತಂತ್ರಗಾರಿಯನ್ನೊಳಗೊಂಡ ಕಂಪನಿ ನಡೆಸಲು ಸಾಧ್ಯವಾಗಲಿದೆ ಎಂದ ಅವರು, ಇಂದು ಒಂದು ಸಂಸ್ಥೆ ಸಮಾಜಮುಖಿಯಾಗಲು ಅಲ್ಲಿ ಒಳ್ಳೆಯ ಗುಣ ನಡತೆ ಹೊಂದಿರಬೇಕು. ಪಾರದರ್ಶಕತೆ ಜೊತೆಗೆ ಪ್ರತಿಭಾವಂತರ ತಂಡ ಅಲ್ಲಿ ಕಾರ್ಯತತ್ಪರರಾಗಿದ್ದಾಗ ಮಾತ್ರ ಯಶಸ್ಸು ಸಾಧ್ಯ ಎಂದವರು ಅಭಿಪ್ರಾಯ ಪಟ್ಟರು. ಹಾಯ್ ಐಡಿಯಲ್ಸ್ ಟೆಕ್ನಾಲಜಿಸ್ ಪ್ರಾವೆಟ್ ಲಿಮಿಟೇಡ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಾರಾವ್ ಪ್ರಾಸ್ತಾವಿಕ ಮಾತನಾಡಿ, ಈ ಕಂಪನಿಯು ಜಗತ್ತಿನ ಎಲ್ಲ ಕಂಪನಿಗೋಂದಿಗೆ ನಿಕಟ ಸಂಪರ್ಕ ಹೊಂದಿದ್ದು ಅಲ್ಲದೆ, ಜಗತ್ತಿನ ಸೂಪರ ಶಕ್ತಿ ಶಾಲಿ ದೇಶವಾದ ಅಮೇರಿಕಾದಲ್ಲಿ ಸಹ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಬೆಳವಣಿಗೆಯಾಗಿದ್ದು, ಇನ್ನು ಅನೇಕ ದೇಶಗಳಲ್ಲಿನ ಇತರೆ ಕಂಪನಿಗಳ ಜೊತೆಗೂಡಿ ಕೆಲಸ ಮಾಡಲು ಉತ್ಸುಕತೆ ತೋರಿದೆ ಎಂದರು. ಈ ಕಂಪನಿಯಲ್ಲಿ ‘ಸ್ವತಂತ್ರ’, ‘ನ್ಯು ಇನ್ ಬೆಂಗಳುರು’, ‘ಟ್ರಕ್ ಟ್ಯಾಕ್ಸ್’ ಹಾಗೂ ‘ಎಜೆಂಡಾ’ ಎಂಬ ಹೆಸರಿನ ನಾಲ್ಕು ಪ್ರಮುಖ ಉತ್ಪನ್ನಗಳ ಚಿಹ್ನೆಗಳನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಸರಸ್ವತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ.ಎಸ್.ಬಿ.ಬಿರಾದಾರ, ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಡಾ.ಸುರ್ಯಕಾಂತ ಪಾಟೀಲ, ಕಲಬುರ್ಗಿ ಶ್ರೀ ಗುರು ವಿದ್ಯಾಪೀಠದ ಅಧ್ಯಕ್ಷ ಬಸವರಾಜ ದಿಗ್ಗಾವಿ, ಆಕ್ಷಿಸ್ ಬ್ಯಾಂಕ್‍ನ ಸಹಾತಕ ಉಪ ಪ್ರಬಂಧಕ ಬಂದೀಶ ವೀರುಪಾಕ್ಷಯ್ಯ, ಹಾಯ್ ಐಡಿಯಲ್ಸ್ ಟೆಕ್ನಾಲಜಿಸ್ ಪ್ರಾವೆಟ್ ಲಿಮಿಟೇಡ್‍ನ ನಿರ್ದೇಶಕ ಸರ್ಯಚಂದ್ರರಾವ ಧರಣಿಪ್ರಗದಾ, ಶಂಕ್ರೆಪ್ಪ ಚಲವಾ, ಡಾ.ವೈಜಿನಾಥ, ಆಪ್ಪಾರಾವ ಹಾಗೂ ಇತರರಿದ್ದರು. ಆರಂಭದಲ್ಲಿ ಶಿವಕುಮಾರ ಪಾಂಚಾಳ ಹಾಗೂ ಸಂಗಡಿಗರಿಂದ ಪ್ರಾರ್ಥನೆ ಗೀತೆ ಜರುಗಿತು. ಗೀತಾ ಪಾಟೀಲ ಸುಮಧುರ ಸಂಗೀತ ಗಾಯನ ನಡೆಸಿಕೊಟ್ಟರು. ತಂತ್ರಜ್ಞಾನಿಗಳಾದ ಸಮರಜಾ ಸ್ವಾಗತಿಸಿದರೆ, ರಶ್ಮೀ ಕಾರ್ಯಕ್ರಮ ನಿರೂಪಿಸಿದರು. ಹಾಯ್ ಐಡಿಯಲ್ಸ್ ಟೆಕ್ನಾಲಜಿಸ್ ಪ್ರಾವೆಟ್ ಲಿಮಿಟೇಡ್‍ನ ನಿರ್ದೇಶಕ ಸಚಿದಾನಂದ ಚಿದ್ರಿ ವಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಅನೇಕ ತಂತ್ರಜ್ಞಾನಿಗಳು, ಇತರೆ ತಾಂತ್ರಿಕ ಕಂಪನಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Sanjevani” : Editor : Mr.Shivkumar SwamyHi-ideals_aniversaryInvitn

 

Leave a Reply

Your email address will not be published. Required fields are marked *