Handicapped Women News

ಧನಾತ್ಮಕ ಚಿಂತನೆಯಿಂದ ಸಕಾರಾತ್ಮಕ ಅಭಿವೃದ್ಧಿ:

ಆನಿಲ ಬೆಲ್ದಾರ್

Handicapt Women Hostel News1ಬೀದರ: ಜೀವನದಲ್ಲಿ ಸದಾ ಉಲ್ಲಾಸ ಭರಿತ ಬದುಕು ಸಾಗಿಸಲು ಧನಾತ್ಮಕ ಚಿಂತನೆ ಅಗತ್ಯ ಎಂದು ಹೈದ್ರಾಬಾದ್ ಕರ್ನಟಕ ಹೋರಾಟ ಸಮಿತಿಯ ವಿಭಾಗಿಯ ಕಾರ್ಯದರ್ಶಿ ಆನಿಲಕುಮಾರ ಬೆಲ್ದಾರ್ ಅಭಿಪ್ರಾಯ ಪಟ್ಟಿರುವರು.

ಡಾ.ಬಿ.ಆರ್.ಅಂಬೇಡ್ಕರ್ ಆ್ಯಂಡ್ ವೆಲ್‍ಫೇರ್ ಸೊಸೈಟಿ ವತಿಯಿಂದ ನಗರದ ಎಸ್.ಬಿ.ಹೆಚ್ ಕಾಲೋನಿಯಲ್ಲಿ ನಡೆಯುತ್ತಿರುವ ಆಸ್ಥಾ ಉದ್ಯೋಗಸ್ತ ವಿಕಲಚೇತನರ, ಮಹಿಳೆಯರ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಗುರುವಾರ ವಸತಿ ನಿಲಯದ ಇಬ್ಬರು ವಿಕಲಚೇತನ ವಿದ್ಯಾರ್ಥಿನಿಯರಿಗೆ ಸರ್ಕಾರದಿಂದ ದ್ವಿಚಕ್ರ ವಾಹನ ದೊರೆತ ಹಿನ್ನಲೆಯಲ್ಲಿ ಸಂತಸ ಸಂಭ್ರಮಾಚರಣೆ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಕಲಚೇತನ ಎಂಬುದು ಶಾಪವೆಂದು ಭಾವಿಸದೆ, ಅದು ಜೀವನದಲ್ಲಿ ಒಂದು ಸವಾಲಿನ ಸಂಕೇತವೆಂದು ಪರಿಗಣಿಸಿ, ತಾನೂ ಸಹ ಈ ಪ್ರಪಂಚದಲ್ಲಿ Handicapt Women Hostel Newsಯಾವುದರಲ್ಲಿ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಪಡಿಸಲು ಸನ್ನದ್ದರಾಗುವಂತೆ ಕರೆ ಕೊಟ್ಟರು.

ಸರ್ಕಾರದಿಂದ ಸಿಗುವ ಸೌಕರ್ಯಗಳು ಅನರ್ಹರಿಗೆ ವರದಾನವಾಗಿ ಪರಿಣಮಿಸಿ, ಅರ್ಹರನ್ನು ಕಡೆಗಣಿಸುವ ಹುನ್ನಾರ ಸದಾ ನಡೆಯುತ್ತಿದ್ದು, ಇದನ್ನು ತಪ್ಪಿಸಲು ಕಾನೂನಿನಲ್ಲಿ ಮಹತ್ತರ ವದಲಾವಣೆ ಅನಿವಾರ್ಯವಾಗಿದೆ ಎಂದರು.

ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯ ಶಿವಕುಮಾರ ಸ್ವಾಮಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ವಿಕಲಚೇತನರು ಈ ದೇಶದ ಅವಿಭಾಜ್ಯ ಅಂಗವಾಗಿದ್ದು, ಅವರನ್ನು ಪೂಜ್ಯ ಭಾವದಿಂದ ಕಾಣಿ ಅವರ ಸೇವೆ ಮಾಡುವುದು ನಿಜವಾದ ಸ್ವಾಮಿ ಕಾರ್ಯವಾಗಿದ್ದು, ಬೆಲ್ದಾರ್ ಅವರು ವಿಕಲಚೇತನರ, ವೃದ್ದರ, ಬುದ್ದಿಮಾಂದ್ಯರ, ಹಿರಿಯರ ಸೇವೆ ಮಾಡುತ್ತಿರುವುದು ನಿಜಕ್ಕೂ ಪ್ರಶಂಶನಾರ್ಹ ಎಂದವರು ಹೇಳಿದರು.

ಬೈಕ್ ಪಡೆದುಕೊಂಡ ಕು.ಗುರಮ್ಮ ಹಾಗೂ ಕು.ರಿಜ್ವಾನಾ ತಮ್ಮ ಅನುಭವ ಹಂಚಿಕೊಂಡರು.
ಜಿಲ್ಲಾ ಚೆಸ್ ಅಸೋಶಿಯನ್ ಅಧ್ಯಕ್ಷ ವಿನಯಕುಮಾರ ಬಿರಾದಾರ ಹಾಗೂ ಜಿಲ್ಲಾ ದಲಿತ ಜನ ಸೇನಾ ಅಧ್ಯಕ್ಷ ಸಂಜೀವಕುಮಾರ ಕಾರಗಾ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ನವಜೀವನ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಯ ಮುಖ್ಯ ಗುರು ಪಂಗಜ್ ಚೌಡೇಕರ್, ಸ್ಥಳಿಯ ಸಿಬ್ಬಂದಿ ಕಲಾವತಿ ತಂಗಾ, ನವೀನ ವಲ್ಲಾಪುರೆ ಹಾಗೂ ಇತರರಿದ್ದರು.

ಆರಂಭದಲ್ಲಿ ಕು.ಶಂಕ್ರೆಮ್ಮಾ ವೀರಣ್ಣ ವಿಕಲಚೇತನರಿಗೆ ಆತ್ಮಸ್ಥೈರ್ಯ ಕುರಿತು ಗೀತೆ ಹಾಡಿದರು. ಸ್ಥಳಿಯ ವಸತಿ ನಿಲಯದ ಮೇಲ್ವಿಚಾರಕಿ ನೀಲಮ್ಮ ಮೈಲಾರೆ ನಿರೂಪಿಸಿ, ವಂದನೆ ಸಲ್ಲಿಸಿದರು.

Leave a Reply

Your email address will not be published. Required fields are marked *