Gorta Village

ಗೋರಟಾ ಗ್ರಾಮದ

ಸರ್ವಾಂಗಿಣ ಅಭಿವೃದ್ಧಿಗಾಗಿ 25.00 ಕೋಟಿ ಅನುದಾನ ಕೊಡಿ

RajshekharGurujiಬೀದರ: ಐತಿಹಾಸಿಕ ಸಾಂಸ್ಕøತಿಕ ಗ್ರಾಮ, ಹುತಾತ್ಮರ ವೀರಭೂಮಿ ಗೋರಟಾದ ಸರ್ವಾಂಗಿಣ ಅಭಿವೃದ್ಧಿಗಾಗಿ 25.00 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಅನುದಾನವನ್ನು ಕೇಂದ್ರ ಸರ್ಕಾರದಿಂದ ಮಂಜೂರು ಮಾಡಿಸಿಬೇಕೆಂದು ಜ್ಞಾನ ಶೀವಯೋಗಾಶ್ರಮದ ಅಧಿಪತಿ ಡಾ.ರಾಜಶೇಖರ ಸ್ವಾಮಿಜೀ ಆಗ್ರಹಿಸಿದ್ದಾರೆ.

ಈ ಕುರಿತು ಸಂಸದ ಭಗವಂತ ಖುಬಾ ಅವರಿಗೆ ಬರೆದ ಮನವಿ ಪತ್ರದಲ್ಲಿ ಈ ವಿಷಯ ಪ್ರಸ್ತಾಪಿಸಿ, ಈ ಹಿಂದೆ ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ದೇಶದ ಎರಡನೇ ಜಲಿಯನ್ ವಾಲಾ ಬಾಗ್ ಎಂದೇ ಖ್ಯಾತಿ ಹೊಂದಿದ ಈ ಗ್ರಾಮಕ್ಕೆ ನಯಾ ಪೈಸಾ ಬಿಡುಗಡೆ ಮಾಡಿಲ್ಲ. ತಾವು ಸಂಸದರಾದ ಬಳಿಕ ಈ ಗ್ರಾಮವನ್ನು ‘ಆದರ್ಶ ಗ್ರಾಮ’ವನ್ನಾಗಿ ಮಾಡುವ ಸಂಕಲ್ಪ ತಳೆದು, ‘ಆದರ್ಶ ಗ್ರಾಮ’ದ ಪಟ್ಟಿಗೆ ಸೇರಿಸಿರುವುದು ಸ್ವಾಗತಾರ್ಹ, ಆದರೆ ಇತ್ತಿಚೀಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿ, ‘ಆದರ್ಶ ಗ್ರಾಮ; ಯೋಜನೆಗೆ ಯಾವುದೆ ವಿಶೇಷ ಅನುದಾನವಿಲ್ಲವೆಂದು ಹೇಳಿರುವುದು ಈ ಭಾಗದ ಸ್ವತಂತ್ರ ಹೋರಾಟಗಾರರಿಗೆ, ಅದರಲ್ಲೂ ವಿಶೇಷವಾಗಿ ರಜಾಕಾರ ಹಾವಳಿಯಲ್ಲಿ ತುತ್ತಾದ ಕುಟುಂಬ ಪರಿಜನಕ್ಕೆ ಅತೀವ ನೋವುಂಟಾಗಿದ್ದು, ಈ ಕೂಡಲೇ ವಿಶೇಷ ಅನುದಾನವನ್ನು ಮಂಜುರಿ ಮಾಡಿಸಿ, ತಾವು ಘೋಷಿಸಿದ ಹಾಗೆ ತಮ್ಮ ಸಂಕಲ್ಪ ಪರಿಪೂರ್ಣವಾಗಿಸಲು ಮುಂದೆ ಬರುವಂತೆ ರಾಜಶೇಖರ ಸ್ವಾಮಿಜೀ ತಿಳಿಸಿದ್ದಾರೆ.

 

Sanjevani : News

Leave a Reply

Your email address will not be published. Required fields are marked *