Ganyogi Panchakshara Gavai Award

ಮಂಗಲಾ ಮರಕಲೆಗೆ ಗಾನಯೋಗಿ

ಪಂಚಾಕ್ಷರ ಗವಾಯಿ ಪ್ರಶಸ್ತಿ: ಹರ್ಷ

MangalaMarkal_GavaiAwardಬೀದರ: ಕರ್ನಾಟಕ ಬಾಲವಿಕಾಸ ಅಕಾಡೆಮಿ ನೂತನ ಸದಸ್ಯರೂ, ಮಂಗಲಾ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರೂ ಆದ ಮಂಗಲಾ ಮರಕಲೆ ಅವರಿಗೆ ಗಾನಯೋಗಿ ಪಂಚಾಕ್ಷರ ಗವಾಯಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇತ್ತಿಚೀಗೆ ಬೆಂಗಳುರಿನ ಜೆ.ಸಿ ರಸ್ತೆಯಲ್ಲಿರುವ ರವಿಂದ್ರ ಕಲಾ ಕ್ಷೇತ್ರದ ಪಕ್ಕ ಇರುವ ನಯನ ಕನ್ನಡ ಭವನದಲ್ಲಿ ಕರ್ನಾಟಕ ಚಲನ ಚಿತ್ರ ರಂಗದ ಹಿರಿಯ ಕಲಾವಿದರಾದ ಆರ್.ಅಸ್ವತ್‍ನಾರಾಯಣರವರ ಪುತ್ರಿ ಲೀಲಾನಾರಾಯಣರವರಿಂದ ಸ್ಥಾಪಿತವಾದ ಕರ್ನಾಟಕ ನವಚೇತನ ಕಲಾನಿಕೇತನ ಸಾಂಸ್ಕøತಿಕ ಸಂಘಟನಾ ಕೇಂದ್ರದಿಂದ ಜರುಗಿದ ರಾಜ್ಯ ಮಟ್ಟದ ಸಾಂಸ್ಕøತಿಕ ಜಾನಪದ ರಂಗೋತ್ಸವ-2015ರ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಮಂಗಲಾ ಒಬ್ಬ ಅಂಗವಿಕಲೆಯಾದರೂ ತನ್ನಲ್ಲಿನ ಪ್ರಬುದ್ಧತೆ ಹೊರ ಹಾಕಿ, ತಾನೂ ಸಹ ಜೀವನದಲ್ಲಿ ಹೊಸದನ್ನು ಸಾಧಿಸಬೇಕೆಂಬ ಛಲಗಾರಿಕೆ ಇಟ್ಟುಕೊಂಡು

ನೂರಾರು ವಿಕಲಚೇತನ ಯುವತಿಯರಿಗೆ ಕೌಶಲ್ಯಾಧಾರಿತ ಹಾಗೂ ಸಾಂಸ್ಕøತಿಕ ತರಬೇತಿ ಜೊತೆಗೆ ಸುಮಾರು ಮಹಿಳೆಯರಿಗೆ ಸ್ವಸಹಾಯ ಸಂಘಗಳನ್ನು ಸ್ಥಾಪಿಸಲು ಪ್ರೇರಣೆ ನೀಡಿ, ಅವರ ಆರ್ಥಿಕ ಪ್ರಗತಿಗೆ ಕಾರಣಿಕರ್ತೆಯಾದ ಇವರು ಇತ್ತಿಚೀಗೆ ಕರ್ನಾಟಕ ಸರ್ಕಾರದ ಬಾಲವಿಕಾಸ ಅಕಾಡೆಮಿಗೆ ನೇಮಕವಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಇವರಿಗೆ ಪ್ರಶಸ್ತಿ ದೊರತ್ತಿರುವುದಕ್ಕೆ ಭಾರತಿಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಶಿವಯ್ಯ ಸ್ವಾಮಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯರುಗಳಾದ ಶಿವಕುಮಾರ ಸ್ವಾಮಿ, ಮಹೇಶ ಗೋರನಾಳಕರ್, ಶಾಮರಾವ ನೆಲವಾಡೆ, ಮಕ್ಕಳ ರಕ್ಷಣಾ ಸಮಿತಿ ಸದಸ್ಯ ಶಂಭುಲಿಂಗ ವಾಲ್ದೊಡ್ಡಿ, ರಾಷ್ಟ್ರೀಯ ಕಿರಿಯ ಸಂಶೋಧನಾ ಫೆಲೋಶಿಪ್ ಪುರಸ್ಕøತರಾದ ರಾಜಕುಮಾರ ಹೆಬ್ಬಾಳೆ ಹಾಗೂ ಇತರರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

 

Sanjevani :: News Reporter :: Mr.Shivkumar Swamy

Leave a Reply

Your email address will not be published. Required fields are marked *