Gandhi Jayanti

ಎಮ್.ಯು.ಆರ್.ಡಿ ಸಂಸ್ಥೆಯಡಿ ಗಾಂಧಿ ಜಯಂತಿ

gandhi jayanti in MURD Societyಬೀದರ: ನಗರದ ಕೆ.ಇ.ಬಿ ರಸ್ತೆಯಲ್ಲಿರುವ ಹನುಮಾನ ಮಂದಿರದ ಪಕ್ಕದಲ್ಲಿರುವ ಮಂಗಲಾ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅವರಣದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಅವರ 147ನೇ ಜನ್ಮ ದಿನಾಚರಣೆ ಆಯೋಜಿಸಲಾಗಿತ್ತು.
ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯ ಶಿವಕುಮಾರ ಸ್ವಾಮಿ ಗಾಂಧಿಜೀ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾತನಾಡಿ, ಬಾಪೂಜಿ ಅವರ ಅಹಿಂಸಾತ್ಮಕ ಚಟುವಟಿಕೆಯಿಂದಲೇ ಭಾರತವು ಇಂದು ಶಾಂತಿ ಪ್ರಿಯ ದೇಶವೆಂದು ಹೆಸರು ವಾಸಿಯಾಗಿದೆ ಎಂದ ಅವರು, ಅವರ ತ್ಯಾಗ ಹಾಗೂ ಬಲಿದಾನಗಳು ಬರೀ ಹೇಳಿಕೆ ಮಾತಾಗದೆ, ನಿಜವಾದ ಅನುಸರಿಣಿಯಾಗಬೇಕು. ಜಗತ್ತಿನ ಬಹುತೇಕ ರಾಷ್ಟ್ರಗಳು ರಕ್ತ ಕ್ರಾಂತಿಯಿಂದ ಸ್ವತಂತ್ರ ಪಡೆದರೆ, ನಮ್ಮ ದೇಶವು ಬಾಪೂಜಿಯವರ ಅಹಿಂಸಾತ್ಮಕ ಚಳುವಳಿಯಿಂದ ಸ್ವತಂತ್ರ ಪಡೆಯುವ ಮೂಲಕ ರಕ್ತ ರಹಿತ ಕ್ರಾಂತಿ ದೇಶವಾಗಿರುವುದು ನಮಗೆಲ್ಲರಿಗೂ ಹೆಮ್ಮೆಯೇ ಸರಿ ಎಂದವರು ಹೇಳಿದರು.

ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಮಹೇಶ ಗೋರನಾಳಕರ್ ಮುಖ್ಯ ಅತಿಥೀಗಳಾಗಿ ಭಾಗವಹಿಸಿದರು. ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಮಂಗಲಾ ಮರಕಲೆ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಯುವತಿಯರಾದ ಅರುಣಾ, ಚಿಂತಮ್ಮಾ, ಮಾಲಾ ಮೊಡಿಕೇರೆ, ಯುವಕರಾದ ಧನರಾಜ ಜಾದವ, ಲಿಂಗರಾಜ ಚಾಲುಕ್ಯ ಸೇರಿದಂತೆ ಇತರರಿದ್ದರು.

Leave a Reply

Your email address will not be published. Required fields are marked *