FutureKids Annual Day

ಜನಮನ ರಂಜಿಸಿದ ಪುಟಾಣಿಗಳ ಮನಮೋಹಕ ನೃತ್ಯ

samagra arogya chintan prgm1ಬೀದರ: ಶಿವನಗರ ಉತ್ತರದಲ್ಲಿರುವ ಫ್ಯುಚರ್ ಕಿಡ್ಸ್ ಶಾಲೆಯ ಮುಂಭಾಗದ ವಿಶಾಲ ಮೈದಾನದಲ್ಲಿ ಮಂಗಳವಾರ ಶಾಲೆಯ ತೃತಿಯ ವಾರ್ಷಿಕೋತ್ಸವ ಬಹು ವಿಜ್ರಂಭಣೆಯಿಂದ ಜರುಗಿತು.
ಪುಟಾಣಿ ಮಕ್ಕಳ ವೈವಿಧ್ಯಮಯ ನರ್ತನಗಳು ಜನಮನ ರಂಜಿಸಿದವು. ಅದರಲ್ಲಿ ಕನ್ನಡ, ಹಿಂದಿ, ತೆಲಗು, ಪಂಜಾಬಿ ಭಾಷೆಗಳ ಹಾಡಿನ ಮೇಲೆ ಮಕ್ಕಳು ಹೆಜ್ಜೆ ಹಾಕಿ, ನೋಡುಗರ ಕಣ್ಣು ಕರಗುವಂತೆ ಮಾಡಿದವು. ಅದರಲ್ಲೂ ವಿಶೇಷವಾಗಿ ದೇಶಭಕ್ತಿ ಗೀತೆ ಹಾಗೂ ನಾಡಗೀತೆಗಳು ಕುಳಿತವರಲ್ಲಿ ದೇಶಪ್ರೇಮ ಉಕ್ಕುವಂತೆ ಮಾಡಿತ್ತು. ಪಾಲಕರ ಚಪ್ಪಾಳೆ, ಯುವಕರ ಚೀರಾಟ ಮಕ್ಕಳಲ್ಲಿ ಇನ್ನಷ್ಟು ಹುರುಪು ಬರುವಂತೆ ಮಾಡಿರುವುದು ವಿಶೇಷವಾಗಿತ್ತು. ಈ ಎಲ್ಲ ನೃತ್ಯಗಳನ್ನು ಸೆರೆ ಹಿಡಿಯಲು ನೂರಾರು ಸ್ಮಾರ್ಟ್ ಫೋನ್ ಮೊಬೈಲ್‍ಗಳನ್ನು ಹಿಡಿದು ಯುವಕರು ಮುಗಿ ಬೀಳುವ ದೃಶ್ಯ ಹೇಳತೀರದು. ಒಟ್ಟಾರೆ ಪ್ರತಿ ವರ್ಷಕ್ಕಿಂತ ಈ ವರ್ಷದ ವಾರ್ಷಿಕೋತ್ಸವ ವಿಭಿನ್ನವಾಗಿರುವುದು ಗಮನಾರ್ಹ ಸಂಗತಿಯಾಗಿದೆ.
ಈ ಅಪರೂಪದ ಸನ್ನವೇಶಕ್ಕೆ ಸಂಸದ ಭಗವಂತ ಖುಬಾ ಚಾಲನೆ ನೀಡಿದರು. ಸಂಸ್ಥೆ ಅಧ್ಯಕ್ಷ ಸಂದೀಪ ಶಟಕಾರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಟ್ರಸ್ಟಿ ಕುಲದಿಪಸೀಂಗ್ ಒಬೆರಾಯ, ಗಾಂಧಿಗಂಜ್ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷ ಸೂರ್ಯಕಾಂತ ಶಟಕಾರ, ವಿಜಯಕುಮಾರ ನಾಗುರಾ, ಬಾಬು ವಾಲಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಶಾಲೆಯ ಮುಖ್ಯ ಗುರು ಚಿತ್ರಾ ಶಟಕಾರ ಸ್ವಾಗತ ಕೋರಿದರು. ಸಹ ಶಿಕ್ಷಕಿಯರಾದ ಸತ್ಯವತಿ ಸ್ವಾಮಿ, ಪ್ರೀತಿ ಹಾಗೂ ಸವಿತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸೂವರ್ಣಾ ಪಾಟೀಲ ವಂದನೆ ಸಲ್ಲಿಸಿದರು. ಕೊನೆಯಲ್ಲಿ ರಾಷ್ಟ್ರಗೀತೆ ಹೇಳುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಕಂಡಿತ್ತು.


 

Leave a Reply

Your email address will not be published. Required fields are marked *