Farmers News

ನಾರಾಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಸಾಮಾನ್ಯ ಸಭೆಯಲ್ಲಿ ರೈತರ ಬಹಿಷ್ಕಾರ

ಎಫ್.ಆರ್.ಪಿ. ಹಣ ಕೊಡದ್ದಿದರೆ ಕೂಡಲೇ ಕುರ್ಚಿ ಖಾಲಿ ಮಾಡಿ: ರೈತರ ಆಕ್ರೋಶ

ಬೀದರ: ಕಳೆದ ಸಾಲಿನ (ಎಫ್.ಆರ್.ಪಿ) ಕನಿಷ್ಠ ಬೋಬಲ ಬೇಲೆಯ ಹಣ ಜಿಲ್ಲೆಯ ಮೂರು ಸಹಕಾರಿ ಸಕ್ಕರೆ ಕಾರ್ಖಾನೆಗಳಾದ ನಾರಾಂಜಾ ಸಹಕಾರಿ ಸಕ್ಕರೆ ಕಾರ್ಖಾನೆ, ಮಹಾತ್ಮಾ ಗಾಂಧಿ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಬೀದರ ಸಹಕಾರಿ ಸಕ್ಕರೆ ಕಾರ್ಖಾನೆ ಒಟ್ಟು 60ಕೋಟಿ ರೂ. ರೈತರಿಗೆ ಕೊಡಬೇಕಾಗಿದ್ದು ಈ ಹಣ ಕೋಡಲು ನೀರಾಕರಿಸದಲ್ಲಿ ಕೂಡಲೇ ಮೂರು ಕಾರ್ಖಾನೆಗಳ ಅಧ್ಯಕ್ಷರು ಹಾಗೂ ಕಾರ್ಯಕಾರಿ ಮಂಡಳಿಯು ರಾಜಿನಾಮೆ ನೀಡಿ, ಕಾರ್ಖಾನೆಯ ಉಸ್ತುವರಿಯನ್ನು ರಾಜ್ಯ ಸರ್ಕಾರಕ್ಕೆ ಒಪ್ಪಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಆಗ್ರಹಿಸಿದಾರೆ.

ತಾಲೂಕಿನ ಜನವಾಡಾ ಸಮೀಪದ ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಬುಧುವಾರ ಕಾರ್ಖಾನೆಯ ಸಾಮಾನೆ ಸಭೆಯಲ್ಲಿ ಭಾಗವಹಿಸಿದ ರೈತ ಮುಖಂಡರ ಸಮ್ಮೂಖದಲ್ಲಿಯೇ ಕಳೆದ ಸಾಲಿನ ಎಫ್.ಆರ್.ಪಿ. ಹಣ ಜಿಲ್ಲೆಯ ರೈತರಿಗೆ ಕೊಡಲು ಕಾರ್ಖಾನೆ ಮಂಡಳಿಯು ನಿರಾಕರಿಸಿದ್ದನು ಖಂಡಿಸಿ, ರೈತ ಮುಖಂಡರು ಸಾಮಾನ್ಯ ಸಭೆ ಬಹಿಷ್ಕರಿಸಿ, “ಎಫ್.ಆರ್.ಪಿ. ಹಣ ಕೊಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ” ಎಂದು ಕೂಗ್ಗಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ವಿಶ್ವನಾಥ ಪಾಟೀಲ್ ಕೌಠಾ, ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಕಾರ್ಯದರ್ಶಿ ವೈಜಿನಾಥ ನೌಬಾದೆ, ದಯಾನಂದ ಸ್ವಾಮಿ, ಸಿದ್ರಾಮಪ್ಪಾ ಆಣದೂರೆ, ಬಾಬುರಾವ ಜೋಳದಪಕಾ, ಶೇಶರಾವ ಪಾಟೀಲ್ ಕಣಜಿ, ಚಂದ್ರಶೇಖರ ಜಮಖಂಡಿ, ವಿಠಲ ರೆಡ್ಡಿ ಆಣದೂರ, ವೀರಪಣ್ಣ ದುಬಲಗುಂಡಿ, ಸಿ.ಜಿ. ಪಾಟೀಲ್, ಲಕ್ಷ್ಮಣರಾವ ಅಸ್ಟೂರೆ, ವೀರಭೂಷಣ ನಂದಗಾಂವೆ ಸೇರಿದಂತೆ ನೂರಾರು ರೈತ ಮುಖಂಡರು ಹಾಜರಿದ್ದರು.

Sanjevani News

Leave a Reply

Your email address will not be published. Required fields are marked *