Education Awareness Program

ಅನೈತಿಕ ಶಿಕ್ಷಣದಿಂದ ಯುವಶಕ್ತಿ ದುರ್ಬಲ:

ವಿಜಯಕುಮಾರ

brahat shikshana jagrata abhiyan 26th prgm Photoಬೀದರ: ಸಂಸ್ಕಾರ ರಹಿತ ಶಿಕ್ಷಣದಿಂದ ಇಂದು ಯುವಶಕ್ತಿ ಸೋಮಾರಿಗಳಾಗಿ, ಕೆಲಸಕ್ಕೆ ಬಾರದ ಸಂಘಟನೆಗಳನ್ನು ಕಟ್ಟಿಕೊಂಡು ಅಲ್ಪ ಸ್ವಲ್ಪ ದುಡ್ಡು ಮಾಡಿಕೊಂಡು ಕುಡಿದು ಕುಪ್ಪಳಿಸಿ, ಜೀವನ ಹಾಳು ಮಾಡಿಕೊಳ್ಳುತ್ತಿರುವುದರಿಂದ ಯುವತಿಯರೇ ಪ್ರತಿಯೊಂದು ಪರಿಕ್ಷೆಯಲ್ಲಿ ಮೇಲುಗೈ ಸಾಧಿಸಲಿಕ್ಕೆ ಕಾರಣವಾಗಿದೆ ಎಂದು ಬೀದರ್ ಗ್ರಾಮೀಣ ಪೋಲಿಸ್ ಠಾಣೆ ಪಿಎಸ್‍ಐ ವಿಜಯಕುಮಾರ ಅಭಿಪ್ರಾಯ ಪಟ್ಟಿರುವರು.
ಗುರುವಾರ ನಗರದ ಸಿದ್ಧಿ ವಿನಾಯಕ ಕಾಲೇಜಿನಲ್ಲಿ ಜೀವನ ಸಾಧನಾ ಏಜ್ಯುಕೇಶನ್ ಫೌಂಡೇಶನ್, ಶ್ರೀ ಸಿದ್ಧಿವಿನಾಯಕ ಏಜ್ಯುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಮತ್ತು ಗ್ಲೋಬಲ್ ಸೈನಿಕ ಅಕಾಡೇಮಿಗಳ ಸಂಯುಕ್ತಾಶ್ರಯದಲ್ಲಿ ಬೃಹತ್ ಶಿಕ್ಷಣ ಜಾಗೃತಾ ಅಭಿಯಾನದ 26ನೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ಸ್ಪರ್ಧಾತ್ಮಕ ಯುಗವಾದ್ದರಿಂದ ಯೋಜನಾಬದ್ದ ಶಿಕ್ಷಣದ ಅಗತ್ಯತೆ ಇದ್ದು, ಕನಿಷ್ಟ 10ರಿಂದ 15 ವರ್ಷಗಳ ಪರಿಕ್ಷಾ ಪತ್ರಿಕೆಗಳನ್ನು ಬಿಡಿಸಿ ಅಧ್ಯಯನ ಮಾಡಿದರೆ, ಪರಿಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಗಿದೆ ಎಂದರು.
ಇಂದು ಬರೀ ಓದಿ, ಓದಿ ಪಾಂಡಿತ್ಯನಾದರೆ ಸಾಲದು, ವ್ಯವಹಾರ ಜ್ಞಾನ ಹಾಗೂ ಸಾಮಾನ್ಯ ಜ್ಞಾನ ಅಗತ್ಯವಾಗಿದೆ ಎಂದ ಅವರು ಸ್ಪರ್ಧಾತ್ಮಕ ಪರಿಕ್ಷೆ ಎದುರಿಸಲು ದಿನ ಪತ್ರಿಕೆಗಳನ್ನು ಓದುವ ಹವ್ಯಾಸ ಕಡ್ಡಾಯವಾಗಿ ಬೆಳೆಸಿಕೊಳ್ಳುವಂತೆ ಕಿವಿ ಮಾತು ಹೇಳಿದರು.

ದೇಶ ಸುಭದ್ರವಾಗಬೇಕಾದರೆ ಅಲ್ಲಿಯ ಯುವಶಕ್ತಿ ಆರೊಗ್ಯಪೂರ್ಣ ಹಾಗೂ ಜ್ಞಾನಾರ್ಜನೆ ಉಳ್ಳುವರಾಗಿರುವುದು ಅಗತ್ಯ ಎಂದ ಅವರು, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಸಾಂಸ್ಕøತಿ, ಕಲೆ, ಸಾಹಿತ್ಯ, ಕ್ರೀಡೆ ಇತ್ಯಾದಿಗಳಲ್ಲಿ ಸಕ್ರಿಯವಾಗಿ ತೊಡಗಿ ಕೊಳ್ಳುವಂತೆ ತಿಳಿಸಿದರು.
ರೋಟರಿ ಕ್ಲಬ್‍ನ ನಾಗೇಶ ಪಾಟೀಲ ಮಾತನಾಡಿ, ಪ್ರತಿಯೊಬ್ಬರ ಭವಿಷ್ಯ ಅವರವರ ಕೈಯಲ್ಲಿದ್ದು, ಇಟ್ಟ ಗುರಿ ಮುಟ್ಟಲು ಜೀವನದಲ್ಲಿ ಶಿಸ್ತು, ಸಹನೆ, ಸಹೋದರತೆ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ರಾಜ್ಯ ಸಂಪನ್ಮೂಲ ವ್ಯಕ್ತಿ ಡಾ.ಆರ್.ಕೆ.ಚಾರಿ ಪರಿಕ್ಷಾ ಸಿದ್ಧತೆ ಕುರಿತು ವಿಶೇಷ ಉಪನ್ಯಾಸ ನೀಡುತ್ತ, ಇಂದು ಕ್ರಮಬದ್ದ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಅಧ್ಯಯನ ಅಗತ್ಯ, ಅದು ಕಂಡುಕೊಳ್ಳಲು ಸಾಮೂಹಿಕ ಅಧ್ಯಯನ ಹಾಗೂ ಗುಂಪು ಚರ್ಚೆ ದಹಕಾರಿಯಾಗಬಲ್ಲದೆಂದರು.

ಜೀವನ ಸಾಧನಾ ಏಜ್ಯುಕೇಶನ್ ಫೌಂಡೇಶನ್ ಅಧ್ಯಕ್ಷ ನಿತೇಶಕುಮಾರ ಬಿರಾದಾರ ಹಾಗೂ ಶ್ರೀ ಸಿದ್ಧಿವಿನಾಯಕ ಏಜ್ಯುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‍ನ ಕಾರ್ಯದರ್ಶಿ ವಿಜಯಕುಮಾರ ಚಿಟ್ಟೆ ವೇದಿಕೆಯಲ್ಲಿದ್ದರು. ಕಾಲೇಜಿನ ಪ್ರಾಚಾರ್ಯ ಸಿದ್ರಾಮ ಬಿಚಕುಂದೆ ಅಧ್ಯಕ್ಷತೆ ವಹಿಸಿದ್ದರು.
ಆರಂಭದಲ್ಲಿ ಕಾಲೇಜಿನ ಪ್ರಾಧ್ಯಾಪಕಿ ಜ್ಯೋತಿ ಬಿಲಗುಂದೆ ಸ್ವಾಗತ ಕೋರಿದರೆ, ದತ್ತಾತ್ರೆಯ ಜ್ಯಾದೆ ಪ್ರಾಸ್ತಾವಿಕ ಮಾತನಾಡಿದರು. ಕು.ಯೋಗೇಶ್ವರಿ ಕಾರ್ಯಕ್ರಮ ನಿರೂಪಿಸಿದರೆ, ರೂತರೇನು ವಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಬಿವಿಬಿ ಕಾಲೇಜಿನ ಉಪನ್ಯಾಸಕ ಸಂತೋಷ ರಾಯಕೋಟಿ ಸೇರಿದಂತೆ ಸಿದ್ಧಿವಿನಾತಕ ಕಾಲೇಜಿನ ಎಲ್ಲ ಪ್ರಾಧ್ಯಾಪಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *