Education Awareness Prgm

ಸುಸಂಸ್ಕøತ ವಿದ್ಯೆಯಿಂದ ಸ್ವಚ್ಛ ಸಮಾಜ ಜಾಗೃತ;

ಪಿಎಸ್‍ಐ ದಿಲೀಪ ಸಾಗರ್

ಬೀದರ: ಸುಸಂಸ್ಕøತ ವಿದ್ಯೆಯಿಂದ ಸ್ವಚ್ಛ ಸಮಾಜ ಜಾಗೃತವಾಗಲಿದೆ ಎಂದು ಧನ್ನುರು(ಹೆಚ್) ಪೋಲಿಸ್ ಠಾಣೆ ಪಿಎಸ್‍ಐ ದಿಲೀಪ ಸಾಗರ ಅಭಿಪ್ರಾಯ ಪಟ್ಟಿದ್ದಾರೆ.

ಭಾಲ್ಕಿ ತಾಲೂಕಿನ ಕೋನ ಮೆಳಕುಂದಾ ಗ್brahat shixana jagrata abhiyan.ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಜೀವನ ಸಾಧನಾ ಏಜ್ಯುಕೇಶನ್ ಫೌಂಡೇಶನ್ ಮತ್ತು ಶ್ರೀ ಸಿದ್ಧಿವಿನಾಯಕ ಏಜ್ಯುಕೇಶನ್ ಐಂಡ್ ಚಾರಿಟೇಬಲ್ ಟ್ರಸ್ಟ್‍ಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ಧ ಬೃಹತ್ ಶಿಕ್ಷಣ ಜಾಗೃತಾ ಅಭಿಯಾನದ 16ನೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದು ವಿದ್ಯಾರ್ಥಿಗಳು ಬರೀ ವಾಣಿಜ್ಯಮಯ ಶಿಕ್ಷಣದಲ್ಲಿ ಮುಳುಗಿ, ದೇಶಾಭಿಮಾನ, ದೇಶಭಕ್ತಿಯಿಂದ ದೂರ ಸರಿದು, ಸ್ವಾರ್ಥತೆ ಪ್ರದರ್ಶಿಸುತ್ತಿರುವುದು ದಯನಿಯ ಸಂಗತಿಯಾಗಿದ್ದು, ಅರ್ಥಪೂರ್ಣ ಬದುಕಿಗೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ರೋಟೆರಿಯನ್ ಫರ್ದಿನ್ ಮುಖ್ಯ ಅತಿಥಿಗಳಾಗಿ ಮಾತನಾಡಿ, ಶಿಸ್ತು ವಿದ್ಯಾರ್ಥಿಯ ಅಮುಲ್ಯ ಸಂಪತ್ತಾಗಿದ್ದು, ಸಂಯಮ ಹಾಗೂ ಸಹೃದಯಿಗಳಾಗಿ ವರ್ತಿಸಿದಲ್ಲಿ ಪ್ರಜ್ಞಾವಂತ ಪ್ರಪಂಚ ಜಾಗೃತವಾಗಲು ಸಾಧ್ಯ ಎಂದರು.

ಗ್ಲೋಬಲ್ ಸೈನಿಕ ಅಕಾಡೆಮಿ ಅಧ್ಯಕ್ಷ ಕರ್ನಲ್ ಶರಣಪ್ಪ, ರಾಜ್ಯ ಸಂಪನ್ಮೂಲ ವ್ಯಕ್ತಿ ಡಾ.ಆರ್.ಕೆ.ಚಾರಿ, ಜೀವನ ಸಾಧನಾ ಏಜ್ಯುಕೇಶನ್ ಫೌಂಡೇಶನ್ ಅಧ್ಯಕ್ಷ ನಿತೇಶಕುಮಾರ ಬಿರಾದಾರ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು.
ಶಾಲೆಯ ಮುಖ್ಯಗುರು ವಿ.ಜಿ ಜಾಧವ ಅಧ್ಯಕ್ಷತೆ ವಹಿಸಿದ್ದರು.

ಆರಂಭದಲ್ಲಿ ಶಾಲೆಯ ವಿದ್ಯಾರ್ಥಿನಿಯರಾದ ರೇಣುಕಾ, ಸಂತೋಷಿ ಹಾಗೂ ಸ್ವಾತಿ ಸ್ವಾಗತ ಗೀತೆ ಹಾಡಿದರು. ಸಹ ಶಿಕ್ಷಕ ರಾಜಕುಮಾರ ಬಸಗೊಂಡ ಸ್ವಾಗತ ಕೋರಿದರೆ, ಸಹ ಶಿಕ್ಷಕಿ ಸುನಿತಾ ದಾಡಗೆ ನಿರೂಪಿಸಿದರು. ಲತಾ ಮನ್ನಳ್ಳಿಕರ್ ವಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ  ಸಹ ಶಿಕ್ಷಕರಾದ ಬಾಲಾಜಿ ಮೇತ್ರೆ, ನಂದರಾಜ ಬಿರಾದಾರ, ಶರಣಯ್ಯ ಸ್ವಾಮಿ, ರಾಮಚಂದ್ರ ಸೇರಿದಂತೆ ಶಾಲೆಯ ಇತರೆ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Áಧನೆಗೆ ಅಸಾಧ್ಯವಾದುದು ಯಾವುದು ಇಲ್ಲ, ಆದರೆ ಸಾಧಿಸುವ ಛಲ ಪ್ರತಿಯೊಬ್ಬರಲ್ಲಿ ಬರಬೇಕು, ತಾನು ಹಿಡಿದ ಕಾರ್ಯದಲ್ಲಿ ಧೃಢವಾದ ನಂಬಿಕೆ, ಅಚಲವಾದ ಮನಸ್ಸು, ಸತತ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯ  ಜೀವನದಲ್ಲಿ ಸಾಧನೆಯ ಹಾದಿ ಸುಗಮಗೊಳಿಸಿಕೊಳ್ಳಲು ಒಬ್ಬ ಮಹಾ ಪುರುಷನನ್ನು ಆದರ್ಶವಾಗಿಟ್ಟುಕೊಂಡು ಮುನ್ನಡೆಯಬೇಕು. ಜೀವನದುದ್ದಕ್ಕೂ ಬರುವ ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸಿದಾಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಜೀವನ ಸಾಧನಾ ಏಜ್ಯುಕೇಶನ್ ಫೌಂಡೇಶನ್ ಟ್ರಸ್ಟ್ ಅದ್ಯಕ್ಷ ನಿತೇಶಕುಮಾರ ಬಿರಾದಾರ, ಹೇಳಿದರು.

ವಿದ್ಯಾರ್ಥಿಗಳು ಜೀವನದಲ್ಲಿ ಒಂದು ಗುರಿ ಕಟ್ಟಿಕೊಳ್ಳಬೇಕು. ಅದು ಸಫಲವಾಗಲು ಸಾಧನೆಯ ಮೆಟ್ಟಿಲು ಹತ್ತಬೇಕು. ಅದರೂ ಒಂದೊಂದು ಸಲ ಅದು ವಿಫಲವಾದರೂ ಮುಂದೊಂದು ದಿನ ಸಾಧನೆ ಸಾಧಿಸುತ್ತೇವೆಂಬ ಅಚಲ ನಿರ್ಧಾರವಿದ್ದಾಗ ಅಸಾಧ್ಯವಾದುದನ್ನು ಸಾಧಿಸುವ ಸಾಮಥ್ರ್ಯ ಬರುವಲ್ಲಿ ಸಂಶಯವಿಲ್ಲವೆಂದು ರಾಜ್ಯ ಸಂಪನ್ಮೂಲ ವ್ಯಕ್ತಿ ಹಾಗೂ ಜೀವನ ಸಾಧನಾ ಏಜ್ಯುಕೇಶನ್ ಫೌಂಡೇಶನ್ ಉಪಾಧ್ಯಕ್ಷ ಡಾ.ಆರ್.ಕೆ.ಚಾರಿ ಹೇಳಿದರು.

Sanjevani : News Reporter : Mr.Shivkumar Swamy

Leave a Reply

Your email address will not be published. Required fields are marked *