Den Cable Network

ಡಿಜಿಟಲ ಇಂಡಿಯಾ ಅಭಿವೃದ್ಧಿಯಲ್ಲಿ

ಕೇಬಲ ಆಪರೇಟರ್‍ಗಳ ಪಾತ್ರ ಪ್ರಮುಖ

den network newsಬೀದರ: ಕೇಂದ್ರ ಸರ್ಕಾರದ ಕನಸಿನ ಕೂಸಾದ ಡಿಜಿಟಲ ಇಂಡಿಯಾದ ಸಮಗ್ರ ಅಭಿವೃದ್ಧಿಯಲ್ಲಿ ಕೇಬಲ ಆಪರೇಟರ್‍ಗಳ ಪಾತ್ರ ಪ್ರಮುಖವಾಗಿದೆ ಎಂದು ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಯ ಅಧಿಕಾರಿ ರಾಮಕೃಷ್ಣ ನರಸಿಂಹಸ್ವಾಮಿ ತಿಳಿಸಿದರು.
ನಗರದ ರಂಗಮಂದಿರದಲ್ಲಿ ಗುರುವಾರ ಭಾರತ ಸರ್ಕರದ ಆದೇಶದ ಮೆರೆಗೆ ಕೇಬಲ್ ಟ್ಹಿವಿ ಡಿಜಟಲಿಕರಣ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಡಿಸೆಂಬರ 31ರೊಳಗಾಗಿ ಭಾರತ ಸರ್ಕಾರವು ದೇಶಾದ್ಯಂತ ಡಿಜಿಟಲ ಇಂಡಿಯಾ ಬಲಿಷ್ಟಗೊಳಿಸಲು ಸರ್ಕಾರ ಸಮಯ ನಿಗದಿಗೊಳಿಸಿದ್ದು, ಅದರೊಳಗಾಗಿ ದೇಶದಲ್ಲಿನ ಎಲ್ಲ ಕೇಬಲ್ ಟ್ವಿವಿ ಆಪರೇಟರ್‍ಗಳು ಕಡ್ಡಾಯವಾಗಿ ಡಿಜಿಟಲಿಕರಣಗೊಳಿಸಿಕೊಂಡು, ತಮ್ಮ ಗ್ರಾಹಕರಿಗೆ ಕಡ್ಡಾಯವಾಗಿ ಸೆಟ್ ಆಪ್ ಬಾಕ್ಸ್ ಅಳವಡಿಸಿಕೊಡುವಂತೆ ಕಿವಿ ಮಾತು ಹೇಳಿದರು.
ತಾಂತ್ರಿಕ ಜಗತ್ತಿನಲ್ಲಿ ಬಯಕೆಗಳು ಹೆಚ್ಚಾದಂತೆ ಬೇಡಿಕೆಗಳು ಸಹ ಜಾಸ್ತಿಯಾಗಿ, ಹೊಸದನ್ನು ಪಡೆಯಬೇಕೆಂಬ ಹಂಬಲ ಅಧಿಕವಾದ ಕಾರಣ ಇಂದು ಡಿಜಿಟಲಿಕರಣ ಅನಿವಾರ್ಯವಾಗಿದ್ದು, ಇದು ಜಗತ್ತಿನ ಮೂಲೆ ಮೂಲೆಗಳಲ್ಲಿನ ದೃಶ್ಯಾವಳಿಗಳನ್ನು ಕ್ಷಣಾರ್ಧದಲ್ಲಿ ಪರಿಚಯಿಸುವ ಹಂತ ತಲುಪಿದ್ದು, ಸಾರ್ವಜನಿಕರು ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿದೇಶಕ ಹೆಚ್.ಜಿ.ರವಿರಾಜ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಭಾರತ ಸರ್ಕಾರವು ಡಿಜಿಟಲ ಇಂಡಿಯಾ ಅಭಿಯಾನದಡಿ, ಸಾರ್ವಜನಿಕರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಲು ಮುಂದೆ ಬಂದಿದ್ದು, ಅವರವರ ಇಚ್ಛಾನುಸಾರ ಡಿಜಿಟಲ ಚಾನಲ್‍ಗಳ ಮನೊರಂಜನೆ ಪಡೆಯುವ ಸಂಪೂರ್ಣ ಸ್ವಾತಂತ್ರ ನೀಡಲು ಮುಂದಾಗಿದ್ದು, ಕೇಬಲ ಆಪರೇಟರ್‍ಗಳು ಈ ವ್ಯವಸ್ಥೆಯನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ನೈತಿಕ ಜವಾಬ್ದಾರಿ ಹೋರುವಂತೆ ತಿಳಿಸಿದರು.
ಡೆನ್ ನೆಟವರ್ಕ್ ಲಿಮಿಟೇಡ್ ಕರ್ನಾಟಕದ ಉಪಾಧ್ಯಕ್ಷ ಅಶೋಕ ಬಾಲಸುಬ್ರಮಣ್ಯ ಮಾತನಾಡಿದರು. ಡೆನ್ ನೆಟವರ್ಕ್ ಆರ್.ಎಸ್ ಕಮ್ಯುನಿಕೇಶನ್ ಮಾಲಕ ರವಿ ಸ್ವಾಮಿ ವೇದಿಕೆಯಲ್ಲಿದ್ದರು.
ಆರಂಭದಲ್ಲಿ ಸುನೈನ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಆರ್.ಜೆ ಮಂಜು ಹಾಗೂ ನಾಗೇಶ್ವರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಾಗಾರದಲ್ಲಿ ಡೆನ್ ನೆಟವರ್ಕ್‍ನ ಪದಾಧಿಕಾರಿಗಳು, ಆಪರೇಟರ್‍ಗಳು, ಸ್ಥಳಿಯ ಇತರೇ ಕೇಬಲ್ ಆಪರೇಟರ್‍ಗಳು ಇದ್ದರು.

Leave a Reply

Your email address will not be published. Required fields are marked *