Dawood College Bidar

3ಬೀದರ1
ಬೀದರ: ನೌಬಾದ ಹತ್ತಿರದ ಡಯಟ್ ಕಾಲೇಜಿನಲ್ಲಿ ಆಯೋಜಿಸಿದ್ದ ಗಣಿತ ಶಿಕ್ಷಕರ ವಿಷಯಾಧಾರಿತ ತರಬೇತಿ ಕಾರ್ಯಾಗಾರದ ಸಮಾರೋಪದಲ್ಲಿ ಪ್ರಾಂಶುಪಾಲ ಬಸವರಾಜ ಗೊನ್ನಳ್ಳಿ ಮಾತನಾಡಿದರು.3BDR1

3ಬೀದರ1
ತರಗತಿ ಕೋಣೆಯಲ್ಲಿ ತರಬೇತಿ ಉಪಯೋಗವಾಗಲಿ – ಗೊನ್ನಳ್ಳಿ

ಬೀದರ: ಶಿಕ್ಷಕರು ತಾವು ಪಡೆದುಕೊಂಡ ತರಬೇತಿಯು, ಅವರ ತರಗತಿ ಕೋಣೆಗಳಲ್ಲಿ ಉಪಯೋಗಿಸಿದಾಗ ಪಡೆದುಕೊಂಡ ತರಬೇತಿಯ ಯಶಸ್ಸು ಲಭಿಸುತ್ತದೆÉ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಬಸವರಾಜ ಗೊನ್ನಳ್ಳಿ ಅಭಿಪ್ರಾಯಪಟ್ಟರು.
ನೌಬಾದ ಹತ್ತಿರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಗಣಿತ ವಿಷಯ ಶಿಕ್ಷಕರಿಗಾಗಿ ಆಯೋಜಿಸಿದ್ದ 9ನೇ ತರಗತಿ ವಿಷಯಾಧಾರಿತ ತರಬೇತಿ, ರಚನಾ-2, ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದ ಅವರು, ಶಿಕ್ಷಕರ ಗುಣಮಟ್ಟದ ಮೇಲೆಯೇ ನಮ್ಮ ಶಿಕ್ಷಣದ ಗುಣಮಟ್ಟ ಅವಲಂಬಿಸಿದೆ. ಹೀಗಾಗಿ ಸರ್ಕಾರ ಶಿಕ್ಷಕರನ್ನು ನೇಮಿಸಕೊಳ್ಳಲು ಟಿ.ಇ.ಟಿ ಪರೀಕ್ಷೆ ನಡೆಸುತ್ತಲಿದೆ. ಡಿ.ಇಡಿ, ಬಿ.ಇ.ಡಿ ಓದಿದ ವಿದ್ಯಾರ್ಥಿಗಳು ಟಿ.ಇ.ಟಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಿರುವುದು ವಿಚಾರ ಮಾಡುವ ಸಂಗತಿಯಾಗಿದೆ. ಕಾರಣ ಶಿಕ್ಷಕರಾದವರು ನಿರಂತರ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು. ಬೋಧನೆಗೆ ತೊಂದರೆ ಆಗದಂತೆ ತರಬೇತಿ ಪಡೆಯುವುದು ಶಿಕ್ಷಣ ಇಲಾಖೆಯ ಗುರಿಯಾಗಿದೆ. ತರಗತಿ ಕೋಣೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಕರನ್ನು ತಯ್ಯಾರಿಗೊಳಿಸುವುದೇ ತರಬೇತಿಯ ಉದ್ದೇಶವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತರಬೇತಿಯ ಸಂಯೋಜಕ ಬಿ.ಎಸ್.ಪಾಟೀಲ ರವರು, ಹೆಚ್ಚಿನ ಅಂಶಗಳು ಶಿಕ್ಷಕರು ತಮ್ಮ ಪಾಠಗಳಲ್ಲಿ ಬಳಸಿಕೊಳ್ಳುವ ನಿಟ್ಟಿನಲ್ಲಿ ತರಬೇತಿಯಲ್ಲಿ ಉತ್ತಮ ಅಂಶಗಳನ್ನು ಪಡೆದುಕೊಳ್ಳುತ್ತಾರೆ. ಶಿಕ್ಷಕರು ವಿದ್ಯಾರ್ಥಿಗಳ ಸ್ನೇಹಿತರು ಮತ್ತು ಮಾರ್ಗದರ್ಶಕರಾಗಿ ಪಾಠಮಾಡಬೇಕು. ಹೊಸ ಪಠ್ಯಕ್ರಮದ ಕಠಿಣ ಅಂಶಗಳನ್ನು ತಿಳಿದುಕೊಳ್ಳಲು ಶಿಕ್ಷಕರಿಗೆ ತರಬೇತಿ ಸಹಕಾರಿಯಾಗಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಶಶಿಕಾಂತ ಜೋಷಿ ಮಾತನಾಡಿ, ತರಬೇತಿಯಲ್ಲಿರುವ ಶಿಕ್ಷಕರೊಂದಿಗೆ ಕಾರ್ಯಾಗಾರದಲ್ಲಿ ಪಡೆದುಕೊಂಡ ಅನುಭವ ಅವಸ್ಮರಣೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತರಬೇತುದಾರ ಶಿಕ್ಷಕ ಸೋಮಯ್ಯಾ ಮಠ ಮಾತನಾಡಿ, ಕಲಿಸುವ ಮತ್ತು ಕಲಿಯುವ ಹಂತದಲ್ಲಿ ತರಬೇತಿ ಅತಿ ಉಪಯುಕ್ತವಾಗಿತ್ತು. ಇಂತಹ ತರಬೇತಿಗಳಿಂದ ಶಿಕ್ಷಕರು ಪುನ:ಶ್ಚೇತನ ಪಡೆಯುತ್ತಾರೆ ಎಂದು ತಮ್ಮ ಅನುಭವ ವ್ಯಕ್ತ ಪಡೆಸಿದರು.
ಕಾರ್ಯಕ್ರಮದಲ್ಲಿ ಡಯಟ್ ಕಾಲೇಜಿನ ಅಧೀಕ್ಷಕ ಸಂಜಯ್, ಶಿವಕುಮಾರ ಘಂಟೆ, ನಿರ್ಮಲಾದೇವಿ ರಾಜಗುರು, ನೀಲಕಂಠ ರಾಮಪೂರೆ, ಸುರೇಶ ಎಸ್, ಧನಾಜಿ ಎಸ್.ಕೆ, ಗಂಗಮ್ಮಾ ದೇವಪ್ಪಾ, ಅನ್ನಪೂರ್ಣ ಪ್ರಭಾಕರ ಸೇರಿದಂತೆ ಸುಮಾರು 46 ಶಿಕ್ಷಕರು ಉಪಸ್ಥಿತರಿದ್ದರು.
ಶಿಕ್ಷಕ ಸೂರ್ಯಕಾಂತ ಅಡಕೆ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿ ವಿಠಲರಾವ ದೇಶಪಾಂಡೆ ನಿರೂಪಿಸಿದರು. ಮಹಾತ್ಮಾಗಾಂಧಿ ಪ್ರೌಢಶಾಲೆ ಕಲವಾಡಿಯ ಶಿಕ್ಷಕ ಜಯರಾಜ ದಾಬಶೆಟ್ಟಿ ವಂದಿಸಿದರು.


 

Leave a Reply

Your email address will not be published. Required fields are marked *