Communal Harmony Program

ಜಾತಿಯತೆ ನಿರ್ಣಾಮವಾದಾಗ ಕೋಮು ಸೌಹಾರ್ದತೆ ಸಾಧ್ಯ

Commnual Harmany Week Prgm iN BVB Collegeಬೀದರ: ಈ ದೇಶಕ್ಕೆ ಮಹಾಮಾರಿಯಾಗಿ ಕಾಡುತ್ತಿರುವ ಜಾತಿ ಜಾತಿಗಳ ಹಾಗೂ ಧರ್ಮ ಧರ್ಮಗಳ ಮಧ್ಯದ ಭೇದ ಭಾವ ಸಂಪೂಣವಾಗಿ ಅಳಿಸಿ ಹೋದಲ್ಲಿ ಮಾತ್ರ ಕೋಮು ಸಾಮರಸ್ಯ ಉಂಟಾಗಿ, ಈ ದೇಶ ಸೂಪರ ಶಕ್ತಿ ಶಾಲಿ ದೇಶವಾಗಿ ಹೊರಹೊಮ್ಮಲು ಬಹಳ ಸಮಯ ಬೇಕಾಗಿಲ್ಲ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯ ಶಿವಕುಮಾರ ಸ್ವಾಮಿ ಅಭಿಪ್ರಾಯ ಪಟ್ಟರು.
ಶುಕ್ರವಾರ ನಗರದ ಬಿ.ವಿ.ಭೂಮರೆಡ್ಡಿ ಮಹಾವಿದ್ಯಾಲಯದಲ್ಲಿ ಭಾರತ ಸರಕಾರದ ನೆಹರು ಯುವ ಕೇಂದ್ರ, ಜೀವನ ಸಾಧನಾ ಏಜ್ಯುಕೇಶನ್ ಫೌಂಡೇಶನ್ ಮತ್ತು ಬಿ.ವಿ.ಬಿ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ನಿಮಿತ್ಯ ಪ್ರತಿ ವರ್ಷ ಆಚರಿಸಲಾಗುವ ಕೋಮು ಸೌಹಾರ್ದತಾ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ಇಂದು ಜಗತ್ತು ಕೋಮು ಗಲಭೆಗಳು ಹಾಗೂ ಭಯೊತ್ಪಾದಕ ಕೃತ್ಯಗಳಿಗೆ ಸಿಕ್ಕಿ ನಲುಗಿ ಹೋಗುತ್ತಿರುವುದು ದಯನಿಯ ಬೆಳವಣಿಗೆಯಾಗಿದ್ದು, ಮಠಾಧಿಶರು, ದಾರ್ಶನಿಕರು ಹಾಗೂ ದೇಶ ಆಳುವ ಜನಪ್ರತಿನಿಧಿಗಳು ಮೊದಲು ಜಾತಿಯತೆ ಬಿಟ್ಟು, ಸಮಾನತೆ ಸಾರಬೇಕು, ಸರ್ಕಾರಗಳು ಜಾತಿ ಹೆಸರಿನಲ್ಲಿ ಕೊಡುವ ಯೋಜನೆಗಳು ಸಮಾನವಾಗಿ ಹಂಚಿಕೆಯಾಗಬೇಕು, ಜಾತಿ ರಾಜಕಾರಣ ಮಾಡುವ ದೇಶದ್ರೋಹಿಗಳಿಗೆ ದೇಶ ಬಿಟ್ಟು ಓಡಿಸಬೇಕು, ಇವೆಲ್ಲ ಸಾಧ್ಯವಾಗಬೇಕಾದರೇ ಏಕತೆಯ ಮಂತ್ರ ಜಪಿಸಬೇಕೆಂದು ಸ್ವಾಮಿ ಕರೆ ಕೊಟ್ಟರು.
ಕಾಲೇಜಿನ ಪ್ರಾಚಾರ್ಯ ಪ್ರೊ.ಆನಿಲಕುಮಾರ ಅಣದುರೆ ಮಾತನಾಡಿ, ಇಂದು ಎಲ್ಲರಿಗೂ ಸಮಾನವಾದ ಬದುಕು ಅಗತ್ಯವಾಗಿದೆ. ಒಂದು ಉದ್ಯಾನವನದಲ್ಲಿ ವಿವಿಧ ಬಗೆಯ ಹೂಗಳು ಇರುವ ಹಾಗೆ ನಮ್ಮಲ್ಲಿ ಅನೇಕ ಭಾಷೆ, ಜಾತಿ, ಜನಾಂಗದವರು ಒಟ್ಟಿಗೆ ವಾಸಿಸುತ್ತಿರುವುದು ಸಂತಸದ ಸಂಗತಿ. ಆದರೆ, ಇಂದಿನ ಅಘಾತಕಾರಿ ಬೆಳವಣಿಗೆಗಳು ನಮ್ಮ ಮನಸ್ಸುಗಳು ಸಂಪೂರ್ಣವಾಗಿ ಕದಲುವಂತೆ ಮಾಡಿ ಕೋಮು ಸಾಮರಸ್ಯ ನಶಿಸಿ ಹೋಗುತ್ತಿದ್ದು, ಗತಕಾಲದ ನಮ್ಮ ವೈಶಿಷ್ಟತೆ ಮರುಕಳಿಸಲು ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್‍ನ ಮುಖ್ಯಸ್ಥ ಶ್ರೀಕಾಂತ ಬಿರಾದಾರ ಮಾತನಾಡಿ, ಇಂದು ಸರ್ಕಾರ ಯುವಜನರಿಗೆ ಅನೇಕ ಸೌಲತ್ತುಗಳು ನೀಡುತ್ತಿದ್ದರೂ, ಬಹುತೇಕ ಯುವಜನರು ಸಂಸ್ಕಾರ, ಸಂಸ್ಕøತಿ ಎಲ್ಲವನ್ನು ಮರೆತು ಪ್ರಚೋದಕ ಕೃತ್ಯಗಳಿಗೆ ಕೈ ಹಾಕಿ, ತಮ್ಮ ಭವಿಷ್ಯ ಹಾಳು ಮಾಡಿ ಕೊಳ್ಳುತ್ತಿರುವುದು ಆತಂಕಕಾರಿ ಸಂಗತಿ ಎಂದ ಅವರು, ಯುವಜನರು ಶಾಲಾ ಕಾಲೇಜಿನಲ್ಲಿ ಎಲ್ಲರೊಡಗೂಡಿ ವಿದ್ಯೆ ಕಲಿಯುವ ಹಾಗೆ ಜೀವನದಲ್ಲಿ ಎಲ್ಲರೊಂದಿಗೆ ಬೆರೆತು ಬದುಕುವ ಹಿರಿತನ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಪಿ.ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ರಾಘವೇಂದ್ರ ಡಿ.ಹೆಚ್ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕಿ ಸುರೇಖಾ ಬಿರಾದಾರ, ಬಸವರಾಜ ಬಿರಾದಾರ ಸೇರಿದಂತೆ ವಿದ್ಯಾರ್ಥಿಗಳು, ಯುವಜನರು ಇದ್ದರು.
ಆರಂಭದಲ್ಲಿ ಕು.ಸಂಗೀತಾ ಬಿರಾದಾರ ಪ್ರಾರ್ಥನೆ ನಡೆಸಿಕೊಟ್ಟರು. ಜೀವನ ಸಾಧನಾ ಏಜ್ಯುಕೇಶನ್ ಫೌಂಡೇಶನ್ ಉಪಾಧ್ಯಕ್ಷ ಡಾ.ಆರ್.ಕೆ.ಚಾರಿ ಸ್ವಾಗತಿಸಿದರೆ, ಉಪನ್ಯಾಸಕ ಸಂತೋಷ ರಾಯಕೋಟಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಗಾಯತ್ರಿ ನೇಳಗೆ ವಂದನೆ ಸಲ್ಲಿಸಿದರು.

Leave a Reply

Your email address will not be published. Required fields are marked *