Children day in shagung

ಅಂಗನವಾಡಿಗಳು ಮಕ್ಕಳ ಸಂಸ್ಕಾರ ಕೇಂದ್ರಗಳಾಗಬೇಕು: ಗೌಸ್

childrens day in shagungಬೀದರ: ಅಂಗನವಾಡಿ ಕೇಂದ್ರಗಳು ಬರೀ ಹೆಸರಿಗೆ ಮಾತ್ರ ಸೀಮಿತವಾಗದೆ, ಮಕ್ಕಳ ಭವಿಷ್ಯ ಉಜ್ವಲಗೊಳಿಸುವ ಸಂಸ್ಕಾರ ಕೇಂದ್ರಗಳಾಗಬೇಕೆಂದು ನಗರ ಸಭೆ ಸದಸ್ಯ ಮಹಮ್ಮದ್ ಗೌಸ್ ಹೇಳಿದರು.
ನಗರದ ಶಹಾಗಂಜ್‍ನಲ್ಲಿನ ಅಂಗನವಾಡಿ ಕೇಂದ್ರವೊಂದರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಂಗನವಾಡಿ ಕೇಂದ್ರಗಳ ಜಂಟಿ ಆಶ್ರಯದಲ್ಲಿ ಇತ್ತಿಚೀಗೆ ಮಕ್ಕಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಇಂದು ಮಕ್ಕಳ ಆರೊಗ್ಯ ದುರ್ಬಲಗೊಳ್ಳಲು ಪೋಷ್ಟಿಕಾಂಶದ ಕೊರತೆ ಕಾರಣವಾಗಿದ್ದು, ವಿಶಪೂರಿತ ಹಾಗೂ ಕಲಬೆರಕೆ ಆಹಾರ ಮಕ್ಕಳಿಗೆ ದೊರೆಯುತ್ತಿರುವುದು ಕೆಲವು ಕಡೆ ಪತ್ತೆಯಾಗಿದ್ದು, ಶುಚಿಯಾದ ಹಾಗೂ ಶುದ್ಧ ಆಹಾರ ಒದಗಿಸುವುದಲ್ಲದೆ, ಅನೇಕ ಚಟುವಟಿಕೆ ಹಮ್ಮಿಕೊಂಡು ಮಕ್ಕಳ ಭವಿಷ್ಯ ಬದಲಾಯಿಸಲು ಅಂಗನವಾಡಿಗಳು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಕರೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೂದ್ಧಿ ಇಲಾಖೆಯ ಮೇಲ್ವಿಚಾರಕಿ ಮಹಾನಂದಾ ನಾಸಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಇಲಾಖೆಯು ಮಕ್ಕಳ ಸರ್ವಾಂಗಿಣ ವಿಕಾಸಕ್ಕಾಗಿ, ವಿಶೇಷವಾಗಿ ಮಕ್ಕಳ ಆರೊಗ್ಯ ಅಭಿವೃದ್ಧಿಗಾಗಿ ಪ್ರತಿ ತಿಂಗಳು ಉಚಿತ ತಪಾಸಣೆ ಹಮ್ಮಿಕೊಳ್ಳುತ್ತಿದ್ದು, ಪಾಲಕರು ಇದರ ಸದುಪಯೋಗ ಪಡೆದುಕೊಂಡು ಮಕ್ಕಳ ಸರ್ವಾಂಗಿಣ ಪ್ರಗತಿ ಕಡೆ ಗಮನ ಹರಿಸುವಂತೆ ತಿಳಿ ಹೇಳಿದರು. ಅಂಗನವಾಡಿ ಶಿಕ್ಷಕಿ ಚಿತ್ರಮ್ಮ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಶಿಕ್ಷಕಿಯರಾದ ವಿಷಲಾಕ್ಷಿ ಹಿರೇಮಠ, ಶ್ರೀದೇವಿ, ಸುಮತಿ, ಚಿನ್ನಮ್ಮ, ರೋಜಮ್ಮ, ದತ್ತಮ್ಮ ಸೇರಿದಂತೆ ಇತರೆ ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರು, ಮಕ್ಕಳು, ಪಾಲಕರು ಇದ್ದರು.
ಸ್ಥಳಿಯ ಅಂಗನವಾಡಿ ಶಿಕ್ಷಕಿ ಕಾವೇರಿ ಸ್ವಾಮಿ ಸ್ವಾಗತಿಸಿ, ವಂದನೆ ಸಲ್ಲಿಸಿದರು.

Leave a Reply

Your email address will not be published. Required fields are marked *