Child Marriage Prohibition

Chield Marriage prohibition Act Workshop in Dist Courtಬಾಲ್ಯ ವಿವಾಹ ತಡೆಗಟ್ಟುವಲ್ಲಿ

ಕಾರ್ಯಾಂಗ-ನ್ಯಾಯಾಂದ ಪಾತ್ರ ಪ್ರಮುಖ

ಬೀದರ: ಸಾಮಾಜಿಕ ಪಿಡುಗುಗಳಳ್ಲಿ ಒಂದಾಗಿರುವ ಬಾಲ್ಯ ವಿವಾಹ ಕಾಯ್ದೆ ಸಮರ್ಪಕ ಅನುಷ್ಟಾನದ ಜೊತೆಗೆ ಅದನ್ನು ಸಂಪೂರ್ಣ ನಿರ್ಣಾಮ ಮಾಡುವಲ್ಲಿ ಕಾರ್ಯಾಂಗ ಹಾಗೂ ನ್ಯಾಯಾಂಗದ ಪಾತ್ರ ಪ್ರಮುಖವಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ನ್ಯಾ.ಹಂಚಾಟೆ ಸಂಜೀವಕುಮಾರ ಅಭಿಪ್ರಾಯ ಪಟ್ಟಿದ್ದಾರೆ.
ರವಿವಾರ ಜಿಲ್ಲಾ ನ್ಯಾಯಾಲಯದ ಅವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪೋಲಿಸ್ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಶಿವರಾಜ ಪಾಟೀಲರ ಶಿಫಾರಸ್ಸಿನ ಮೆರೆಗೆ ಜಿಲ್ಲೆಯ ನ್ಯಾಯಾಧೀಶರೂ ಹಾಗೂ ಸರ್ಕಾರಿ ಅಭಿಯೋಜಕರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ರ ಅನುಷ್ಟಾನದ ಕುರಿತು ಒಂದು ದಿವಸದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
1929ರಂದು ಬ್ರಿಟಿಷರ ಅಡಳಿತಾವಧಿಯಲ್ಲಿಯೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಗೆ ಬಂದಿತ್ತು. ಆದರೆ ಅದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದ ಪರಿಣಾಮ 2006ರಲ್ಲಿ ಮತ್ತೆ ಈ ಕಾಯ್ದೆ ಪುನಾರಾವರ್ತನೆಗೊಂಡಿತ್ತಾರೂ ಸಹ ಇಂದು ಮಕ್ಕಳ ಮೇಲೆ ಶೋಷಣೆ, ದೌರ್ಜನ್ಯ, ಅತ್ಯಾಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ ನ್ಯಾಯಾಧೀಶರು, ಸಮಾಜ ಹಾಗೂ ರಾಷ್ಟ್ರದಲ್ಲಿ ಮಕ್ಕಳ ಬಗ್ಗೆ ಶುನ್ಯ ಸಹಿಸುವಿಕೆ ಶೋಷಣೆ ಬರಬೇಕಾದರೆ, ಕಾರ್ಯಾಂಗ ಹಾಗೂ ನ್ಯಾಯಾಂಗ ಇಲಾಖೆಗಳು ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.
ಬಾಲ್ಯ ವಿವಾಹ ಕಾಯ್ದೆ 2006ರ 13ನೇ ಕಲಂ ಪ್ರಕಾರ ಆಕ್ಷಯ ಚತುರ್ಥಿ, ಬಸವ ಜಯಂತಿ, ಮಠಾಧೀಶರ ಸಮಾರಂಭ ಹಾಗೂ ಇತರೆ ನಾಯಕರುಗಳ ಹುಟ್ಟು ಹಬ್ಬ ಹಾಗೂ ಅವರ ವಯಕ್ತಿಕ ಸಮಾರಂಭಗಳಲ್ಲಿ ಸಾಮೂಹಿಕ ವಿವಾಹ ನಡೆಸುವ ಸಂಪ್ರದಾಯಗಳಿದ್ದು, ಅಂತಹ ಸಂದರ್ಭದಲ್ಲಿ ಬಾಲ್ಯ ವಿವಾಹಗಳು ನಡೆಯುವುದು ಸಾಮಾನ್ಯ. ಆಂತಹ ಸನ್ನಿವೇಶದಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲಾ ಬಾಲ್ಯ ವಿವಾಹ  ನಿಷೇಧ ಅಧಿಕಾರಿಯಾಗಿ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿ ನಡೆಯುವ ಬಾಲ್ಯ ವಿವಾಹಗಳನ್ನು ತಡೆಗಟ್ಟಬೇಕಾಗಿರುವುದು ಡಿಸಿಯವರ ಆದ್ಯ ಕರ್ತವ್ಯವಾಗಿರುತ್ತದೆ. ಒಟ್ಟಾರೆ, ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳಿಗೆ ಸಹಿಸದೆ, ಯಾರ ಭಯ ಅಥವಾ ಮುಲಾಜಿಗೆ ಒಳಗಾಗದೆ, ನಿರ್ಭೀತಿಯಿಂದ ಹಾಗೂ ನಿಸ್ಪಕ್ಷಪಾತಿಯಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದು ತಿಳಿಸಿದರು.
ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಶೋಷಣೆ ನಿವಾರಣೆಗಾಗಿ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಲಯವು ಮಕ್ಕಳ ನ್ಯಾಯಾಲಯ ಸ್ಥಾಪಿಸಿದ್ದು, ಮಕ್ಕಳ ಬಗೆಗಿನ ಶೋಷಣೆ ಹಾಗೂ ಅವರ ಹಕ್ಕುಗಳ ಪಾಲನೆಗಾಗಿ ಈ ನ್ಯಾಯಾಲಯಕ್ಕೆ ಮೊರೆ ಹೋಗಬೇಕೆಂದರು.
ಕಾನೂನಿಗೆ ನೈತಿಕ, ಭಾವನಾತ್ಮಕ ಹಾಗೂ ಸಾಮಾಜಿಕ ಸಂ¨ಂಧಗಳು ಜರೂರಿ ಇದ್ದು, ಅವುಗಳ ಮೂಲಕವೇ ಸಮಾಜದಲ್ಲಿನ ಅನಿಷ್ಟ ಪಿಡುಗು ನಿವಾರಿಸಲು ಸಾಧ್ಯ ಎಂದ ಹಂಚಾಟೆ, ಮಕ್ಕಳ ಮೇಲಿನ ದೌರ್ಜನ್ಯ ವಿಚಾರದಲ್ಲಿ ನ್ಯಾಯಾಧೀಶರು ಯಾವುದೆ ರೀತಿಯ ಅನುಕಂಪ ತೋರದೆ, ನಿಷ್ಟುರರಾಗಿ ತೀರ್ಪೂ ನೀಡುವಂತೆ ಹಾಗೂ ಅಂತಹ ದುಷ್ಟ ಶಕ್ತಿಗಳಿಗೆ ಕಾರ್ಯಾಂಗಿಯ ಅಧಿಕಾರಿಗಳು ತಕ್ಕ ಶಾಸ್ತಿ ಮಾಡಲು ಹಿಂಜರಿಯಕೂಡದೆಂದು ಕಿವಿ ಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಜಿ.ನಂಜುಂಡಯ್ಯ ಮಾತನಾಡಿ, ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಹತ್ತಿಕ್ಕಲು ಪೋಕ್ಸೋ ಕಾಯ್ದೆ ಜಾರಿಗೆ ಬಂದಿದ್ದರೂ ಇಂದು ಮಕ್ಕಳ ಮೇಲೆ ಶೋಷಣೆ ಹಾಗೂ ಅನಾಚಾರಗಳು ನಡೆಯಲು ಸಾಕ್ಷಿಗಳು ವಿರೂದ್ಧ ಹೇಳಿಕೆ ನೀಡುತ್ತಿದ್ದು, ಪರುಣಾಮಕಾರಿ ತೀರ್ಪೂ ನೀಡಲು ಅನಾನುಕುಲವಾಗುತ್ತಿದೆ ಎಂದ ಅವರು, ಯಾವ ದೇಶದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ನಿಂತು ಕಾನೂನು ಸುವ್ಯವಸ್ಥೆ ಬಲಿಷ್ಟವಾಗಿರುವುದೋ ಆ ದೇಶ ಸಂಪೂರ್ಣ ಅಭಿವೃದ್ಧಿಪರ ದೇಶವಾಗಿರಲು ಸಾಧ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹೆಚ್ಚುವರಿ ಸಿವಿಲ ನ್ಯಾಯಾಧೀಶರೂ, ನ್ಯಾಯಿಕ ದಂಡಾಧಿಕಾರಿಗಳು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪ್ರಭಾರಿ ಕಾರ್ಯದರ್ಶಿ ನ್ಯಾ.ಸೋಮಶೇಖರ.ಸಿ.ಬಾದಾಮಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಕೀಳರಿಮೆ ಇದ್ದು, ಗಂಡು ಹೆಣ್ಣುಗಳೆಂಬ ಭೇದ ಏಣಿಸಲಾಗುತ್ತಿದೆ. ಹೆಣ್ಣು ಮಕ್ಕಳಿಗೆ ಪರಿಪೂರ್ಣ ಶಿಕ್ಷಣ ನೀಡದ ಹಾಗೂ ಸಮಾನ ಅವಕಾಶ ಕಲ್ಪಿಸದ ಪರಿಣಾಮ ಇಂದು ಅತ್ಯಾಚಾರ ಹಾಗೂ ದೌರ್ಜನ್ಯಗಳು ಹೆಚ್ಚಾಗಲು ಹಾಗೂ ಸಾಮಾಜಿಕ ಪಿಡುಗುಗಳು ನಿರಂತರವಾಗಿ ಬೆಳೆಯಲು ಕಾರಣವಾಗುತ್ತಿದ್ದು, ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಮಕ್ಕಳ ಹಕ್ಕುಗಳ ಪಾಲನೆಯಾಗಬೇಕಿದೆ ಎಂದರು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸುಧಾರಣೆಗೆ ನ್ಯಾಯಾಂಗ ಇಲಾಖೆಯು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಹಂಚಾಟೆ ಅವರ ಮಾರ್ಗದರ್ಶನದಲ್ಲಿ ಹಲವು ಮಾರ್ಗೋಪಾಯ ರೂಪಿಸಿದರೂ ಇಲ್ಲಿಯ ಜನತೆ ಸ್ಪಂದಿಸದಿರುವುದು ನಿರಾಶದಾಯಕ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿ, ಮಕ್ಕಳ ಹಕ್ಕುಗಳು ಹಾಗೂ ಅವರ ರಕ್ಷಣೆಗೆ ನ್ಯಾಯಾಂಗ ಇಲಾಖೆ ಇನ್ನಷ್ಟು ಕಠಿಣ ಕ್ರಮ ಜರುಗಿಸುವುದು ಅನಿವಾರ್ಯ ಎಂದವರು ಹೇಳಿದರು.
ಸರ್ಕಾರಿ ಅಭಿಯೋಜಕ ರಾಮಚಂದ್ರ ಲಮಾಣಿ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶರುಗಳಾದ ಹೇಮಾ ಪಸ್ತಾಪೂರ, ಪರ್ವಿನ್ ಬಂಕಾಪೂರ, ಉಜ್ವಲಾ ವೀರಣ್ಣ, ಬಾಲ ನ್ಯಾಯ ಮಂಡಳಿ ಸದಸ್ಯರಾದ ಬಿ.ಎಸ್.ಪಾಟೀಲ, ಕವಿತಾ ಹುಷಾರೆ, ಮಕ್ಕಳ ರಕ್ಷಣಾ ಸಮಿತಿ ಸದಸ್ಯೆ ವೇದಮಣಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯರುಗಳಾದ ಶಿವಕುಮಾರ ಸ್ವಾಮಿ ಹಾಗೂ ಶಾಮರಾವ ನೆಲವಾಡೆ ಸೇರಿದಂತೆ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರುಗಳು, ಜಿಲ್ಲೆಯ ನ್ಯಾಯಾಧೀಶರುಗಳು, ಸರ್ಕಾರಿ ಅಭಿಯೋಜಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ ಹಾಜರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮುನಿರಾಜು.ಎಮ್ ಸ್ವಾಗತಿಸಿದರು. ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಗೌರಿಶಂಕರ ಪರ್ತಾಪುರೆ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಮಕ್ಜಳ ರಕ್ಷಣಾಧಿಕಾರಿ ಪಿ.ಎಸ್.ಇಟಕಂಪಳ್ಳಿ ವಂದಿಸಿದರು.


 

Leave a Reply

Your email address will not be published. Required fields are marked *